ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ಸಿಎಂ ಆಗಿದ್ದು 6.5 ಕೋಟಿ ಕನ್ನಡಿಗರ ಬೆಂಬಲದಿಂದಲ್ಲ: ದೇವೇಗೌಡ

|
Google Oneindia Kannada News

Recommended Video

ಆರೂವರೆ ಕೋಟಿ ಕನ್ನಡಿಗರ ಎಚ್ ಡಿ ದೇವೇಗೌಡ್ರು ಇಂಥಾ ಹೇಳಿಕೆ ಯಾಕ್ ಕೊಟ್ರು? | Oneindia Kannada

ಬೆಂಗಳೂರು, ಮೇ 28: "ಎಚ್ ಡಿ ಕುಮಾರಸ್ವಾಮಿ ಆರೂವರೆ ಕೋಟಿ ಜನರ ಬೆಂಬಲದಿಂದ ಮುಖ್ಯಮಂತ್ರಿಯಾಗಿಲ್ಲ. ಅವರೊಬ್ಬ ಸನ್ನಿವೇಶದ ಶಿಶು ಅಷ್ಟೆ" ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

'ಸಾಲಮನ್ನಾ ಮಾಡದಿದ್ದರೆ ರಾಜೀನಾಮೆ ನೀಡುತ್ತೇನೆ' ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, "ಮತ್ತೊಂದು ರಾಜಕೀಯ ಪಕ್ಷದೊಂದಿಗೆ ಸೇರಿ ಆಡಳಿತ ನಡೆಸುತ್ತಿರುವುದರಿಂದ ಸಾಲಮನ್ನಾದಂಥ ನಿರ್ಧಾರವನ್ನು ಏಕಾ ಏಕಿ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ" ಎಂದಿದ್ದಾರೆ.

'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್‌ಡಿಕೆ 'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್‌ಡಿಕೆ

"ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ಸಿನ ಮುಲಾಜಿನಲ್ಲಿದ್ದೇನೆ" ಎನ್ನುವ ಮೂಲಕ ವಿವಾದ ಸೃಷ್ಟಿಸಿದ್ದ ಕುಮಾರಸ್ವಾಮಿ ಅವರ ಹೇಳಿಕೆಯನ್ನೇ ಕೊಂಚ ಬದಲಾಯಿಸಿ ಹೇಳಿದ ದೇವೇಗೌಡರು, "ಕುಮಾರಸ್ವಾಮಿಯವರಿಗೆ ಆರು ಕೋಟಿ ಕನ್ನಡಿಗರ ಬೆಂಬಲವಿಲ್ಲ. ಅವರು ಸನ್ನಿವೇಶದ ಶಿಶು. ಮುಖ್ಯಮಂತ್ರಿಯಾಗುವಂತೆ ಕಾಂಗ್ರೆಸ್ಸಿಗರು ಒತ್ತಾಯಿಸಿದರು ಅಷ್ಟೆ" ಎನ್ನುವ ಮೂಲಕ ಎಚ್ ಡಿ ದೇವೇಗೌಡರು ಹೊಸ ವರಸೆ ಆರಂಭಿಸಿದ್ದಾರೆ.

HD Kumaraswamy does not have 6.5 crore Kannadigas support

ಅಷ್ಟೇ ಅಲ್ಲ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂದ ದೇವೇಗೌಡರು, 'ಸದನದಲ್ಲಿ ಅಂದು ಯಡಿಯೂರಪ್ಪ ಮಾಡಿದಂಥ ಕೆಳಮಟ್ಟದ ಭಾಷಣವನ್ನು ನಾನು ನನ್ನ ರಾಜಕೀಯ ಇತಿಹಾಸದಲ್ಲೇ ನೋಡಿಲ್ಲ' ಎಂದರು.

English summary
Karnataka election results 2018: "6.5 crore Kannadigas are not supported chief minister HD Kumaraswamy, He is ruling with Congress party. So he is child of circumstances" Former prime minister HD Devegowda told to media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X