ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರಾವಳಿ ಕುರಿತ ಹೇಳಿಕೆ: ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮಾರ್ಚ್ 20: ಕರಾವಳಿ ಭಾಗದ ಜನರಿಗೆ ತಿಳಿವಳಿಕೆ ಕಮ್ಮಿ ಎಂಬ ಹೇಳಿಕೆಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದಾರೆ.

ತಾವು ಕರಾವಳಿಯ ಜನತೆಯ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ತಮ್ಮ ಹೇಳಿಕೆಯನ್ನು ಬಿಜೆಪಿ ತಿರುಚಿದೆ ಎಂದು ಆರೋಪಿಸಿದ್ದಾರೆ.

HD Kumaraswamy clarification to his controversial remarks on coastal Karnataka people

ಉಡುಪಿ ಕಡೆಯವರು ತಿಳುವಳಿಕೆ ಇಲ್ಲದವರಾ? ಏನಿದು ಸಿಎಂ ವ್ಯಂಗ್ಯ? ಉಡುಪಿ ಕಡೆಯವರು ತಿಳುವಳಿಕೆ ಇಲ್ಲದವರಾ? ಏನಿದು ಸಿಎಂ ವ್ಯಂಗ್ಯ?

ಸತ್ಯವನ್ನು ತಿರುಚುವುದರಲ್ಲಿ ಮತ್ತು ಸುಳ್ಳು ಹೇಳುವ ವಿಚಾರದಲ್ಲಿ ಬಿಜೆಪಿ ಮತ್ತು ಅವರ ಐಟಿ ಸೆಲ್ ಅನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ.

ಸುಳ್ಳು ಹೇಳುವುದರಲ್ಲಿ, ಸತ್ಯವನ್ನು ತಿರುಚುವುದರಲ್ಲಿ ಮತ್ತು ಅವರ ಐಟಿಸೆಲ್ ಮೀರಿಸಲು ಯಾರಿಗೂ ಸಾಧ್ಯವಿಲ್ಲ.ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.ನಾನು ಕರಾವಳಿಯ ಜನತೆ ಬುದ್ದಿವಂತರಲ್ಲ ಎಂದು ಹೇಳಿಲ್ಲ.ಶಿಕ್ಷಣದಲ್ಲಿ, ಬೌದ್ಧಿಕತೆಯಲ್ಲಿ ಕರಾವಳಿ ದೇಶಕ್ಕೇ ಮಾದರಿ. ಬಿಜೆಪಿ ಸುಳ್ಳು ಹೇಳಿ ಜನರನ್ನು ದಾರಿತಪ್ಪಿಸಲು ಯತ್ನಿಸುತ್ತಿದೆ ಎಂದು ಕುಮಾರಸ್ವಾಮಿ ಟ್ವಿಟ್ಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಚುನಾವಣಾ ಪ್ರಚಾರ : ಮಹತ್ವದ ಸಭೆ ಕರೆದ ಎಚ್.ಡಿ.ಕುಮಾರಸ್ವಾಮಿ ಚುನಾವಣಾ ಪ್ರಚಾರ : ಮಹತ್ವದ ಸಭೆ ಕರೆದ ಎಚ್.ಡಿ.ಕುಮಾರಸ್ವಾಮಿ

ಉಡುಪಿ, ಕಾಪು, ಬ್ರಹ್ಮಾವರ ಕಾರ್ಕಳದಲ್ಲಿ ಜನರು ಬಿಜೆಪಿಗೆ ಬಹುಮತ ಕೊಡುತ್ತಾರೆ. ಅಲ್ಲಿನ ಜನರಿಗೆ ತಿಳಿವಳಿಕೆ ಕಡಿಮೆ. ಅಲ್ಲಿ ಒಂದು ಕಾಲೇಜು, ಶಾಲೆ ಬೇಕು ಅಂದರೆ ನಾನು ಬೇಕು, ರೇವಣ್ಣ ಬೇಕು. ಆದರೆ, ಅಲ್ಲಿನ ಜನರು ಬಿಜೆಪಿ, ನರೇಂದ್ರ ಮೋದಿ ಅಂತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದರು.

English summary
Chief Minister HD Kumaraswamy gave clarification to his controversial remarks on Coastal Karnataka people. He accused BJP for twisting his statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X