ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆ: ಕುಮಾರಸ್ವಾಮಿ ಸಂಪುಟದ ಒಟ್ಟಾರೆ ಜಾತಿ ಲೆಕ್ಕಾಚಾರ ಹೀಗಿದೆ

|
Google Oneindia Kannada News

ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ಏಳು ತಿಂಗಳ ನಂತರ ಸಂಪುಟ ವಿಸ್ತರಣೆಯಾಗಿದೆ. ಮತ್ತಿನ್ಯಾವುದೋ ಕಾರಣ ಮುಂದೊಡ್ಡಿ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ ಬರಲಿದೆ ಎನ್ನುವ ಮಾತು ಸುಳ್ಳಾಗಿದೆ.

ತನ್ನ ಖೋಟಾದಲ್ಲಿ ಖಾಲಿಯಿರುವ ಎರಡು ಸ್ಥಾನವನ್ನು ಜೆಡಿಎಸ್ ಭರ್ತಿ ಮಾಡಿಕೊಳ್ಳಲಿಲ್ಲ. ಧನುರ್ಮಾಸ ಎನ್ನುವುದು ಮೇಲ್ನೋಟಕ್ಕೆ ಕಾಣುವ ಕಾರಣವಾಗಿದ್ದರೂ, ಅಸಲಿ ರಾಜಕೀಯ ಬೇರೆಯದೇ ಇದೆ ಎನ್ನುವ ಮಾತಿದೆ.

ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ ಕುಮಾರಸ್ವಾಮಿ ಸರ್ಕಾರದಲ್ಲಿ ಯಾರು ಯಾರು ಸಚಿವರಿದ್ದಾರೆ? ಇಲ್ಲಿದೆ ಪಟ್ಟಿ

ಸುಮಾರು ಹತ್ತು ಜಿಲ್ಲೆಗಳ ಯಾವ ಜನಪ್ರತಿನಿಧಿಗಳಿಗೂ ಸಂಪುಟದಲ್ಲಿ ಸ್ಥಾನ ನೀಡಲಿಲ್ಲ ಎನ್ನುವ ಕೂಗಿನ ನಡುವೆ, ಸಂಪುಟದಿಂದ ಕೈಬಿಡಲಾದ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗದೇ ಇರುವುದು, ಕಾಂಗ್ರೆಸ್ಸಿಗೆ ಕಸಿವಿಸಿ ಉಂಟುಮಾಡಿದೆ.

ಶನಿವಾರ (ಡಿ 22) ಪ್ರಮಾಣವಚನ ಸ್ವೀಕರಿಸಿದ ಎಂಟು ನೂತನ ಸಚಿವರಿಗೆ ಖಾತೆಯನ್ನು ಇನ್ನೂ ಹಂಚಲಾಗಲಿಲ್ಲ. ಡಾ. ಪರಮೇಶ್ವರ್, ಡಿ ಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮುಂತಾದವರು ಹೆಚ್ಚುವರಿ ಖಾತೆಯನ್ನು ಹೊಂದಿರುವುದರಿಂದ, ಇದರಿಂದ ಯಾವುದಾದರೂ ಖಾತೆಯನ್ನು ಕಸಿದುಕೊಡಬಹುದು.

ಹೊಸ ಸಚಿವರಿಗೆ ಕಾಂಗ್ರೆಸ್ ಹಾಕಿದೆ ಷರತ್ತು, ಏನದು? ಹೊಸ ಸಚಿವರಿಗೆ ಕಾಂಗ್ರೆಸ್ ಹಾಕಿದೆ ಷರತ್ತು, ಏನದು?

ಸಂಪುಟ ವಿಸ್ತರಣೆಯ ನಂತರ, ಕುಮಾರಸ್ವಾಮಿ ಸರಕಾರದ ಸಚಿವರಲ್ಲಿ ಒಕ್ಕಲಿಗರ ಪ್ರಾಭಲ್ಯ ಹೆಚ್ಚಾಗಿದೆ. ಸರಕಾರದ ಸಚಿವರಲ್ಲಿನ ಜಾತಿ ಪ್ರಾತಿನಿಧ್ಯ ಹೀಗಿದೆ, ಮುಂದೆ ಓದಿ..

ಒಕ್ಕಲಿಗ ಸಮುದಾಯದವರು - 1

ಒಕ್ಕಲಿಗ ಸಮುದಾಯದವರು - 1

ಎಚ್ ಡಿ ಕುಮಾರಸ್ವಾಮಿ
ಡಿ ಕೆ ಶಿವಕುಮಾರ್
ಎಚ್ ಡಿ ರೇವಣ್ಣ
ಡಿ ಸಿ ತಮ್ಮಣ್ಣ
ಜಿ ಟಿ ದೇವೇಗೌಡ

ಒಕ್ಕಲಿಗ ಸಮುದಾಯದವರು - 2

ಒಕ್ಕಲಿಗ ಸಮುದಾಯದವರು - 2

ಸಾ. ರಾ. ಮಹೇಶ್
ಎಸ್ ಆರ್ ಶ್ರೀನಿವಾಸ್
ಕೃಷ್ಣ ಭೈರೇಗೌಡ
ಶಿವಶಂಕರ ರೆಡ್ಡಿ
ಸಿ ಎಸ್ ಪುಟ್ಟರಾಜು

ಸಂಪುಟ ವಿಸ್ತರಣೆ: ಉ.ಕರ್ನಾಟಕಕ್ಕೆ ಕಾಂಗ್ರೆಸ್‌ ಆದ್ಯತೆ, ಒಳಗುಟ್ಟೇನು? ಸಂಪುಟ ವಿಸ್ತರಣೆ: ಉ.ಕರ್ನಾಟಕಕ್ಕೆ ಕಾಂಗ್ರೆಸ್‌ ಆದ್ಯತೆ, ಒಳಗುಟ್ಟೇನು?

ಬ್ರಾಹ್ಮಣ, ಹಿಂದುಳಿದ ವರ್ಗ

ಬ್ರಾಹ್ಮಣ, ಹಿಂದುಳಿದ ವರ್ಗ

ಆರ್ ವಿ ದೇಶಪಾಂಡೆ (ಬ್ರಾಹ್ಮಣ)
ಕೆ ಜೆ ಜಾರ್ಜ್ (ಕ್ರಿಶ್ಚಿಯನ್)
ಡಾ. ಜಯಮಾಲ (ಹಿಂದುಳಿದ ವರ್ಗ)
ಪುಟ್ಟರಂಗ ಶೆಟ್ಟಿ (ಹಿಂದುಳಿದ ವರ್ಗ)

ಲಿಂಗಾಯತ ಸಚಿವರು

ಲಿಂಗಾಯತ ಸಚಿವರು

ಎಂ ಸಿ ಮನಗೋಳಿ
ವೆಂಕಟರಾವ್ ನಾಡಗೌಡ
ಶಿವಾನಂದ ಪಾಟೀಲ್
ರಾಜಶೇಖರ ಪಾಟೀಲ್
ಎಂ ಬಿ ಪಾಟೀಲ್

ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನ ಎಂಟು ಹೊಸ ಸಚಿವರು ಸೇರ್ಪಡೆ ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನ ಎಂಟು ಹೊಸ ಸಚಿವರು ಸೇರ್ಪಡೆ

ಮುಸ್ಲಿಂ ಮತ್ತು ನಾಯಕ ಸಮುದಾಯ

ಮುಸ್ಲಿಂ ಮತ್ತು ನಾಯಕ ಸಮುದಾಯ

ಸತೀಶ್ ಜಾರಕಿಹೊಳಿ (ನಾಯಕ)
ಇ ತುಕಾರಾಂ (ನಾಯಕ)
ಜಮೀರ್ ಅಹಮದ್ ಖಾನ್ (ಮುಸ್ಲಿಂ)
ಯು ಟಿ ಖಾದರ್ (ಮುಸ್ಲಿಂ)
ರಹೀಂಖಾನ್ (ಮುಸ್ಲಿಂ)
(ಚಿತ್ರದಲ್ಲಿ ಜಾರಕಿಹೊಳಿ)

ರಮೇಶ್ ಜಾರಕಿಹೊಳಿ, ಆರ್.ಶಂಕರ್‌ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಕಾಂಗ್ರೆಸ್‌ ರಮೇಶ್ ಜಾರಕಿಹೊಳಿ, ಆರ್.ಶಂಕರ್‌ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಕಾಂಗ್ರೆಸ್‌

ದಲಿತ ಸಮುದಾಯ

ದಲಿತ ಸಮುದಾಯ

ಡಾ. ಜಿ ಪರಮೇಶ್ವರ್
ಪ್ರಿಯಾಂಕ್ ಖರ್ಗೆ
ವೆಂಕಟರಮಣಪ್ಪ
ಪರಮೇಶ್ವರ ನಾಯಕ
ಆರ್ ಬಿ ತಿಮ್ಮಾಪುರ

ಕುರುಬ ಸಮುದಾಯದವರು

ಕುರುಬ ಸಮುದಾಯದವರು

ಬಂಡೆಪ್ಪ ಖಾಶೆಂಪುರ
ಎಂ ಟಿ ಬಿ ನಾಗರಾಜ್
ಸಿ ಎಸ್ ಶಿವಳ್ಳಿ
(ಚಿತ್ರದಲ್ಲಿ: ಎಂ ಟಿ ಬಿ ನಾಗರಾಜ್)

English summary
HD Kumaraswamy led coalition government cabinet expansion, caste wise details. There are 10 vokkaliga and 5 each from Lingayat and Dalit community ministers after expansion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X