ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಖಿಲ್, ರೇವತಿ ದಂಪತಿಗೆ ಗಂಡು ಮಗು; ಟ್ವೀಟ್‌ ಮೂಲಕ ಎಚ್‌ಡಿಕೆ ಸಂತಸ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24; ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ತಂದೆಯಾಗಿದ್ದಾರೆ.

Recommended Video

ಗಂಡು ಮಗುವಿಗೆ ಜನುಮ ಕೊಟ್ಟ ನಿಖಿಲ್ ಕುಮಾರಸ್ವಾಮಿ ದಂಪತಿ | Oneindia Kannada

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮಗನನ್ನು ಎತ್ತಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 ಸಿಗಂದೂರು: ಬಾಣಂತಿ, ಮಗು ಇದ್ದ ವಾಹನ ಹತ್ತಿಸದ ಲಾಂಚ್‌ ಸಿಬ್ಬಂದಿ ಸಿಗಂದೂರು: ಬಾಣಂತಿ, ಮಗು ಇದ್ದ ವಾಹನ ಹತ್ತಿಸದ ಲಾಂಚ್‌ ಸಿಬ್ಬಂದಿ

HD Kumaraswamy become Grandfather after Nikhil Kumar and Revathi welcome baby boy

ಕೆಲವು ದಿನಗಳ ಹಿಂದೆ ರೇವತಿ ಸೀಮಂತ ಕಾರ್ಯಕ್ರಮ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದಿತ್ತು. ಹಲವಾರು ರಾಜಕೀಯ ನಾಯಕರು ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಾತನಾಗಿದ್ದು ಸಂತಸದಿಂದ ಟ್ವೀಟ್ ಮಾಡಿದ್ದಾರೆ. 'ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಎಂದು ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ' ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕುದುರೆ ಇದ್ದಾಗಲೇ ಏರಲಿಲ್ಲ; ಕುಮಾರಸ್ವಾಮಿ ಟ್ವೀಟ್ ಬಾಣ! ಕುದುರೆ ಇದ್ದಾಗಲೇ ಏರಲಿಲ್ಲ; ಕುಮಾರಸ್ವಾಮಿ ಟ್ವೀಟ್ ಬಾಣ!

ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಮಗುವನ್ನು ಎತ್ತಿಕೊಂಡು ಸಂತಸಪಟ್ಟರು. 'ನಮ್ಮ ಜೀವನದ ಈ ವಿಶೇಷ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. Love you my son' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಮಗುವನ್ನು ಎತ್ತಿಕೊಂಡ ಫೋಟೋ ಸಹ ಅಪ್‌ಲೋಡ್ ಮಾಡಿದ್ದಾರೆ.

ಭಾಷೆ ಕಲಿಕೆಗೆ ವಿರೋಧ: ಸರ್ಕಾರ ಗಂಭೀರವಾಗಿ ಪರಿಗಣಿಸಲಿ-ಎಚ್.ಡಿ. ಕುಮಾರಸ್ವಾಮಿ ಟ್ವೀಟ್ಭಾಷೆ ಕಲಿಕೆಗೆ ವಿರೋಧ: ಸರ್ಕಾರ ಗಂಭೀರವಾಗಿ ಪರಿಗಣಿಸಲಿ-ಎಚ್.ಡಿ. ಕುಮಾರಸ್ವಾಮಿ ಟ್ವೀಟ್

ಜೆಡಿಎಸ್‌ನ ಹಲವಾರು ನಾಯಕರು, ಮುಖಂಡರು, ಪಕ್ಷದ ಕಾರ್ಯಕರ್ತರು ಎಚ್. ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.

'ನನ್ನ ಆತ್ಮೀಯರಾದ ನಿಖಿಲ್ ಕುಮಾರಸ್ವಾಮಿ ಹಾಗು ಶ್ರೀಮತಿ ರೇವತಿ ನಿಖಿಲ್ ರವರಿಗೆ ಗಂಡು ಮಗುವಿನ ಜನನವಾಗಿರುವುದು ನನ್ನಗೆ ಅತ್ಯಂತ ಖುಷಿ ತಂದಿದೆ. ಮಗುವಿಗೆ ಒಳ್ಳೆಯ ಆಯುಶು ಆರೋಗ್ಯ ದೊರೆಯಲಿ ಎಂದು ಆ ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ಮಾಜಿ ಪ್ರಧಾನಿ ಶ್ರೀ ಎಚ್ ಡಿ ದೇವೇಗೌಡರ ಕುಟುಂಬಕ್ಕೆ ನನ್ನ ಅಭಿನಂದನೆಗಳು' ಎಂದು ಜೆಡಿಎಸ್‌ ನಾಯಕ ಶರವಣ ಪೋಸ್ಟ್ ಹಾಕಿದ್ದಾರೆ.

ಸರಳವಾಗಿ ನಡೆದಿದ್ದ ವಿವಾಹ; 2020ರ ಏಪ್ರಿಲ್ 17ರಂದು ನಿಖಿಲ್ ಕುಮಾರಸ್ವಾಮಿ, ರೇವತಿ ವಿವಾಹ ನಡೆದಿತ್ತು. ಕೋವಿಡ್ ಪರಿಸ್ಥಿತಿ ಕಾರಣದಿಂದಾಗಿ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿ ತೋಟದ ಮನೆಯಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹ ನಡೆದಿತ್ತು.

ರೇವತಿ ಬೆಂಗಳೂರಿನ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಸಂಬಂಧಿಯಾಗಿದ್ದಾರೆ. ಎಂಸಿಎ ಪದವೀಧರೆಯಾದ ರೇವತಿ ಮತ್ತು ನಿಖಿಲ್ ವಿವಾಹ ಆಪ್ತರು, ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ಆಗಿತ್ತು.

ವಿವಾಹದ ಬಳಿಕ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, 'ನನ್ನ ಪುತ್ರ ನಿಖಿಲ್ ಮತ್ತು ರೇವತಿ ಅವರ ವಿವಾಹ ಇಂದು ಅತ್ಯಂತ ಸರಳ ರೀತಿಯಲ್ಲಿ ನಡೆಯಲು ಸಹಕರಿಸಿದ ಲಕ್ಷಾಂತರ ಕಾರ್ಯಕರ್ತರು ಮತ್ತು ಕುಟುಂಬದ ಹಿತೈಷಿಗಳಿಗೆ ಹೃದಯಾಂತರಾಳದ ಕೃತಜ್ಞತೆಗಳು' ಎಂದು ಹೇಳಿದ್ದರು.

'ಇಡೀ ಜಗತ್ತು ಕೊರೋನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸುತ್ತಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ವ್ಯವಸ್ಥಿತವಾಗಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕೆಯ ನಡುವೆ ವಿವಾಹ ಅಚ್ಚುಕಟ್ಟಾಗಿ ನೆರವೇರಿದೆ' ಎಂದು ಟ್ವೀಟ್ ಮಾಡಿದ್ದರು.

'ಜಗತ್ತು ಪ್ರಸಕ್ತ ಎದುರಿಸುತ್ತಿರುವ ಈ ಗಂಡಾಂತರ ಕಳೆದು ಪರಿಸ್ಥಿತಿ ಸಹಜವಾದಾಗ ನಾವು ಮತ್ತು ನೀವುಗಳು ಜತೆ ಸೇರಿ ಒಟ್ಟಿಗೆ ಕುಳಿತು ಊಟ ಮಾಡೋಣ. ನಿಮ್ಮ ಹೃದಯ ವೈಶಾಲ್ಯ ಮತ್ತು ಪ್ರೀತಿಗೆ ನಾವುಗಳು ಸದಾ ಋಣಿ. ನವದಂಪತಿಗೆ ಹರಸಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯತುಂಬಿದ ಕೃತಜ್ಞತೆಗಳು' ಎಂದು ತಿಳಿಸಿದ್ದರು.

English summary
Former chief minister H. D. Kumaraswamy become grandfather after his son Nikhil Kumar Swamy and Revathi welcome baby boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X