ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಫರೋಸ್ ಇನ್ ಎ ಫೀಲ್ಡ್: ದಿ ಅನ್ಎಕ್ಸ್ಪ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ ಪುಸ್ತಕ ಬಿಡುಗಡೆ

|
Google Oneindia Kannada News

ನವದೆಹಲಿ, ಡಿ.14: ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಜೀವನಾಧಾರಿತ ಕೃತಿ 'ಫರೋಸ್ ಇನ್ ಎ ಫೀಲ್ಡ್: ದಿ ಅನ್ಎಕ್ಸ್‌ಪ್ಲೋರ್ಡ್ ಲೈಫ್ ಆಫ್ ಹೆಚ್.ಡಿ.ದೇವೇಗೌಡʼ (Furrows in a Field: The Unexplored Life of H.D. Deve Gowda) ಕೃತಿಯನ್ನು ಖ್ಯಾತ ವಕೀಲ ಫಾಲಿ ಎಫ್ ನಾರಿಮನ್ ಅವರು ಸೋಮವಾರ ಲೋಕಾರ್ಪಣೆ ಮಾಡಿದರು.

ಇಲ್ಲಿನ ಮಲ್ಟಿಪರ್ಪೋಸ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆನ್ಲೈನ್ ವೇದಿಕೆಯ ಮೂಲಕ ನಾರಿಮನ್ ಅವರು ಕೃತಿಯನ್ನು ದೇವೇಗೌಡರ ಸಮಕ್ಷಮದಲ್ಲಿ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಸುಗತಾ ಶ್ರೀನಿವಾಸರಾಜು ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಗೌಡರ ರಾಜಕೀಯ ಜೀವನ ಮೆಲುಕು

ಈ ಸಂದರ್ಭದಲ್ಲಿ ಮಾತನಾಡಿದ ನಾರಿಮನ್ ಅವರು, ದೇವೇಗೌಡರ ಸುದೀರ್ಘ ರಾಜಕೀಯ ಜೀವನದ ಮಜಲುಗಳನ್ನು ಮೆಲುಕು ಹಾಕಿದರು. ಮುಖ್ಯವಾಗಿ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿದ್ದ ಕೃಷ್ಣಾ ಮತ್ತು ಕಾವೇರಿ ಕೊಳ್ಳಗಳ ಜಲವಿವಾದಗಳ ಬಗ್ಗೆ ಗೌಡರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ಮುಖ್ಯವಾಗಿ ಉಲ್ಲೇಖ ಮಾಡಿದರು.

HD Devegowda Biography Book release in New Delhi

60 ವರ್ಷಗಳ ಸುದೀರ್ಘ ರಾಜಕೀಯ ಜೀವನವುಳ್ಳ ದೇವೇಗೌಡರನ್ನು ಪುಸ್ತಕದಲ್ಲಿ ದೊಡ್ಡ ಜೀವ ಎಂದು ಕರೆಯಲಾಗಿದೆ. ದೊಡ್ಡ ಜೀವದ ಜತೆ ಸಂಭ್ರಮಿಸುತ್ತಿದ್ದೇವೆ ಎಂದು ಬರೆಯಲಾಗಿದೆ. ಆದರೆ, ಅವರು ತಾವು ರಾಜಕೀಯ ಜೀವನ ಆರಂಭಿಸಿದಾಗ ಅವರಿಗೆ ತಾವೊಬ್ಬ ದೊಡ್ಡ ಜೀವ ಆಗುತ್ತೇನೆಂಬ ಕಲ್ಪನೆಯೇ ಇರಲಿಲ್ಲ. ಆದರೆ ದೇವೇಗೌಡರು ಹಾಗೆ ಬೆಳೆದು ಸಾಧಿಸಿದರು ಎಂದು ನಾರಿಮನ್ ಅವರು ಅಭಿಪ್ರಾಯಪಟ್ಟರು.

1962ರಲ್ಲಿ ಪಕ್ಷೇತರ ಶಾಸಕರಾಗಿ ಗೌಡರು ರಾಜ್ಯ ವಿಧಾನಸಭೆಗೆ ಕಾಲಿಟ್ಟ ಕೂಡಲೇ ಅವರು ಪ್ರಸ್ತಾಪ ಮಾಡಿದ್ದು, ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ. ಜತೆಗೆ ಒಂದು ನಿರ್ಣಯವನ್ನೂ ಮಂಡಿಸಿದರು. ಅದಾದ ಮೇಲೆ ಕರ್ನಾಟಕ ಸರಕಾರವು ಕಾವೇರಿ ಕೊಳ್ಳದ ತನ್ನ ಪಾಲಿನ ನೀರನ್ನು ಸಮರ್ಪಕವಾಗಿ ಬಳಿಸಿಕೊಳ್ಳುವ ನಿರ್ಧಾರ ಕೈಗೊಂಡಿತು ಎಂದು ಅವರು ವಿವರಿಸಿದರು.

HD Devegowda Biography Book release in New Delhi

ಆ ನಿರ್ಣಯ ಮಂಡಿಸಿ ಗೌಡರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ನಾರಿಮನ್ ಅವರು; ಹಾಸನ, ಮೈಸೂರು, ಕೊಡಗು, ಮಂಡ್ಯ, ಚಿತ್ರದುರ್ಗ, ಬೆಂಗಳೂರು ಮುಂತಾದ ಜಿಲ್ಲೆಗಳ ನೀರಿನ ಬವಣೆಯನ್ನು ಹಾಗೂ ಕಾವೇರಿ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದ್ದರು. ಅವರ ಮಾತುಗಳನ್ನು ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರುಗಳೆಲ್ಲ ಆಲಿಸಿ ನೀರಿನ ಬಳಕೆ ಬಗ್ಗೆ ನಿರ್ಧಾರ ಕೈಗೊಂಡಿದ್ದರು ಎಂದರು.

ಇಷ್ಟೇ ಅಲ್ಲದೆ, ರಾಜ್ಯದಲ್ಲಿ ಬಲಿಷ್ಠ ಸಮುದಾಯಗಳ ನಡುವೆ ನಡೆಯುತ್ತಿದ್ದ ರಾಜಕೀಯ ಮೇಲಾಟ, ಕೊನೆಗೆ ಹೋರಾಟಕ್ಕೆ ಮನ್ನಣೆ ಸಿಕ್ಕಿ ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾದ ಘಟನಾವಳಿಗಳ ಬಗ್ಗೆ ನಾರಿಮನ್ ಅವರು ಪ್ರಸ್ತಾಪ ಮಾಡಿದರು.

ಫಾರೂಕ್ ಅಬ್ದುಲ್ಲಾ ಕಂಬನಿ:

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಕಣೆವೆಯಲ್ಲಿ ಬಹಳ ದುಸ್ತರ ಸಂದರ್ಭವಿದ್ದ ವೇಳೆಯಲ್ಲಿ ಗೌಡರು ಈ ದೇಶದ ಪ್ರಧಾನಿ ಆಗಿದ್ದರು. ಆಗ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ವಿಪರೀತ ವಿಷಮವಾಗಿತ್ತು ಎಂದರು.

HD Devegowda Biography Book release in New Delhi

ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಲು ಗೌಡರು ಬಹುದೊಡ್ಡ ರಿಸ್ಕ್ ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಅನೇಕ ಸಲ ಅವರನ್ನು ಪ್ರಧಾನಿ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅಂಥ ಕಠಿಣ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಗೌಡರು ನಿರ್ವಹಿಸಿದ ರೀತಿ ಕೆಚ್ಚೆದೆಯಿಂದ ಕೂಡಿತ್ತು. ಆಗ ದೇವೇಗೌಡರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದರು. ಅದು ನನ್ನ ಪಾಲಿಗೆ ಹೊಸ ಆರಂಭ. ಆಗ ಗೌಡರ ದೃಢ ನಿರ್ಧಾರದಿಂದ ಅಷ್ಟು ವಿಷಮ ಸ್ಥಿತಿಯಲ್ಲಿದ್ದ ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆದು ನಾನು ಅಧಿಕಾರಕ್ಕೆ ಬಂದೆ ಎಂದು ಫಾರೂಕ್ ಅಬ್ದುಲ್ಲಾ ಅವರು ಗದ್ಗದಿತರಾದರು.

ಈ ಕಾರಣಕ್ಕೆ ಜಮ್ಮು, ಕಾಶ್ಮೀರ, ಲಡಾಖ್ ಜನರು ಎಂದೆಂದಿಗೂ ದೇವೇಗೌಡರಿಗೆ ಋಣಿಯಾಗಿರುತ್ತಾರೆಂದು ಅವರು ಕಣ್ಣಂಚಿನಲ್ಲಿ ನೀರು ತುಂಬಿಕೊಂಡೇ ಹೇಳಿದರು.

HD Devegowda Biography Book release in New Delhi

ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಗೌಡರು ಮತ್ತು ಕೃತಿಯ ಬಗ್ಗೆ ಮಾತನಾಡಿದರು. ಸಿಪಿಎಂ ಮುಖಂಡ ಸೀತಾರಾಂ ಯೆಚೂರಿಯವರು ಗೌಡರ ಜತೆಗಿನ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದರು. ಲೇಖಕ ಸುಗತಾ ಶ್ರೀನಿವಾಸ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

ದೇವೇಗೌಡರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದ ಪಿ.ಚಿದಂಬರಂ, ಜನರಲ್ ಧಿಲ್ಲೋನ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಚನ್ನಮ್ಮ ದೇವೇಗೌಡರು ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

Recommended Video

CSk ಪ್ರೆಸ್ಸ್ ಮೀಟ್ ನಲ್ಲಿ ಆಗಿದ್ದು ಏನು ? | Oneindia Kannada

English summary
Former Prime Minister HD Deve Gowda's biography 'Furrows in a Field: The Unexplored Life of H.D. Deve Gowda' was released by renowned lawyer Folly F Nariman in Newdelhi on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X