ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌಡರು ಪ್ರಧಾನಿ ಆಗ್ಲಿಲ್ಲಾಂದ್ರೆ ರಾಜಕೀಯ ತ್ಯಜಿಸ್ತೇನೆ

By Srinath
|
Google Oneindia Kannada News

ಬೆಂಗಳೂರು, ನ.13: ಗೌಡರು ಪ್ರಧಾನಿ ಖಚಿತಯಾಗುವುದು ಖಚಿತ. ಮುಂದಿನ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ. ತನ್ಮೂಲಕ ದೇವೇಗೌಡರು ಪ್ರಧಾನಿ ಆಗುವುದು ಖಚಿತ. ಈ ಮಾತು ಸುಳ್ಳಾದರೆ ನಾನು ರಾಜಕೀಯವನ್ನೇ ತ್ಯಜಿಸುತ್ತೇನೆ ಎಂದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ/ವಿಧಾನಪರಿಷತ್ ಮಾಜಿ ಸದಸ್ಯ ಅಬ್ದುಲ್ ಅಜೀಂ ಸವಾಲು ಹಾಕಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಮತ್ತು ಎನ್‌ ಡಿಎ ಎಡರಕ್ಕೂ ಬಹುಮತ ಬರುವುದಿಲ್ಲ. ಹಾಗಾಗಿ ಚುನಾವಣೆ ನಂತರ ಎಲ್ಲಾ ಪ್ರಾದೇಶಿಕ ಪಕ್ಷಗಳೂ ಚರ್ಚೆ ನಡೆಸಿ ಒಕ್ಕೂಟ ಸ್ಥಾಪಿಸಿಕೊಳ್ಳುತ್ತವೆ. ಆಗ ಮಾಜಿ ಪ್ರಧಾನಿ, ಜೆಡಿಎಸ್ ಪರಮೋಚ್ಛ ನಾಯಕ ದೇವೇಗೌಡರೇ ಆ ಒಕ್ಕೂಟಕ್ಕೆ ಅಧ್ಯಕ್ಷರಾಗುತ್ತಾರೆ. ಮತ್ತು ಅವರೇ ಪ್ರಧಾನ ಮಂತ್ರಿಯೂ ಆಗುತ್ತಾರೆ ಎಂದು ಅಜೀಂ ಭವಿಷ್ಯ ನುಡಿದಿದ್ದಾರೆ.

ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗವು JDS ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪಾಲ್ಗೊಂಡಿದ್ದ ಅಬ್ದುಲ್ ಅಜೀಂ ಈ ಆಶಯ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರು ಟಿಪ್ಪು ಹಿಂದೂ ಧರ್ಮದ ಬಗ್ಗೆ ಹೊಂದಿದ್ದ ಗೌರವದ ಬಗ್ಗೆ ದೃಷ್ಟಾಂತಗಳನ್ನು ವಿವರಿಸಿದ್ದಾರೆ.

ಟಿಪ್ಪುಗೆ ದರ್ಶನ ನೀಡಿದ್ದ ರಂಗನಾಥಸ್ವಾಮಿ

ಟಿಪ್ಪುಗೆ ದರ್ಶನ ನೀಡಿದ್ದ ರಂಗನಾಥಸ್ವಾಮಿ

'ಹಿಂದೂ ಧರ್ಮದ ಬಗ್ಗೆ ನಂಬಿಕೆ ಹೊಂದಿದ್ದ ಮಹಾನ್ ವ್ಯಕ್ತಿ ಟಿಪ್ಪುವಿಗೆ ಸಾಕ್ಷಾತ್ ರಂಗನಾಥಸ್ವಾಮಿಯ ದರ್ಶನವಾಗಿತ್ತು ಎಂಬ ಬಗ್ಗೆ ಪ್ರತೀತಿ ಇದೆ. ಇದನ್ನು ನಾನು ನಂಬುತ್ತೇನೆ' ಎಂದಿದ್ದಾರೆ.

ಶೃಂಗೇರಿ ಮಠಕ್ಕೆ ಟಿಪ್ಪು ವಜ್ರ ಕಿರೀಟ

ಶೃಂಗೇರಿ ಮಠಕ್ಕೆ ಟಿಪ್ಪು ವಜ್ರ ಕಿರೀಟ

'ಅಭಿವೃದ್ಧಿ ಸಾಧಿಸಬೇಕಾದರೆ ಯಾವ ನಾಯಕರೇ ಆಗಲಿ ಜಾತ್ಯತೀತತೆ ಬಗ್ಗೆ ನಂಬಿಕೆ ಹೊಂದಿರಬೇಕು. ಟಿಪ್ಪುವಿಗೆ ಆ ನಂಬಿಕೆ ಇತ್ತಾದ್ದರಿಂದ ಅವರು ಶೃಂಗೇರಿ ಮಠ ದಾಳಿಗೆ ತುತ್ತಾದಾಗ ಸಾಕಷ್ಟು ನೆರವು ನೀಡಿದರು. ಅಲ್ಲಿಗೆ ವಜ್ರದ ಕಿರೀಟ ನೀಡಲಾಗಿದ್ದು, ಪ್ರತಿ ನವರಾತ್ರಿ ಸಂದರ್ಭದಲ್ಲಿ ದರ್ಬಾರ್ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನು ನಾನೂ ನೋಡಿದ್ದೇನೆ' ಎಂದು ಗೌಡರು ಹೇಳಿದರು.

ಟಿಪ್ಪು ಹಕೀಮ್ ನಂಜುಂಡ

ಟಿಪ್ಪು ಹಕೀಮ್ ನಂಜುಂಡ

'ಒಮ್ಮೆ ನಂಜನಗೂಡಿನಲ್ಲಿ ಟಿಪ್ಪು ಹರಕೆ ತೀರಿಸಲು ಹೋಗಿ ಲಿಂಗವನ್ನೇ ಸ್ಥಾಪಿಸಿದ್ದರು. ಅದಕ್ಕೆ ಹಕೀಮ್ ನಂಜುಂಡ ಎನ್ನಲಾಗುತ್ತದೆ. ಅದು ಈಗಲೂ ಇದೆ' ಎಂದು ಟಿಪ್ಪು ಹಿಂದೂ ಧರ್ಮದ ಬಗ್ಗೆ ಹೊಂದಿದ್ದ ಗೌರವವನ್ನು ಗೌಡರು ವಿವರಿಸಿದರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ.ಆರ್. ಶಶಿಧರ್ ಮಾತನಾಡಿ, ದೇಶದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್. ಎಲ್ಲ ಧರ್ಮಗಳನ್ನು ಸಮನಾಗಿ ನೋಡಿದವರು ಮತ್ತು ತಿಳಿದವರು. ಹಾಗೆಯೇ ಪೋಷಣೆಯನ್ನೂ ಮಾಡಿದ್ದರು ಎಂದು ಬಣ್ಣಿಸಿದರು. (ಚಿತ್ರ)

ಕೆಆರ್‌ಎಸ್ ಅಣೆಕಟ್ಟೆಗೆ ಯೋಜನೆ ರೂಪಿಸಿದ್ದೇ ಟಿಪ್ಪು

ಕೆಆರ್‌ಎಸ್ ಅಣೆಕಟ್ಟೆಗೆ ಯೋಜನೆ ರೂಪಿಸಿದ್ದೇ ಟಿಪ್ಪು

ಕೆಆರ್‌ಎಸ್ ಅಣೆಕಟ್ಟೆಗೆ ಮೊದಲು ಯೋಚನೆ ಮತ್ತು ಯೋಜನೆ ಮಾಡಿದ್ದೇ ಟಿಪ್ಪು. 15ನೇ ವಯಸ್ಸಿನಲ್ಲಿ ಯುದ್ಧ ಭೂಮಿಗೆ ಇಳಿದಿದ್ದ ಟಿಪ್ಪು 16ನೇ ವಯಸ್ಸಿನಲ್ಲಿ ದಂಡನಾಯಕನಾದ ಏಕೈಕ ಯುವಕ. ತನ್ನ ಅಧಿಕಾರ ಅವಧಿಯಲ್ಲಿ ಆತ ಮಹಿಳೆಯರನ್ನು ಗೌರವಿಸುತ್ತಿದ್ದರು. ಎಂದು ಗೌಡರು ಹೇಳಿದರು.
ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಎಚ್ಎಂ ಶಕೀಲ್ ನವಾಜ್, ನಗರ ವಿಭಾಗದ ಅಧ್ಯಕ್ಷ ದಸ್ತಗೀರ್ ಖಾನ್, ಹಿರಿಯ ನಾಗರಿಕ ವಿಭಾಗದ ಅಧ್ಯಕ್ಷ ಸೈಯದ್ ಬಷೀರ್ ಅಹಮದ್, ಸಯ್ಯದ್ ಶಫಿವುಲ್ಲಾ ಸಾಹೇಬ್, ಪಕ್ಷದ ನಗರಾಧ್ಯಕ್ಷ ನಾರಾಯಣರಾವ್ ಹಾಜರಿದ್ದರು.

English summary
HD Deve Gowda will become next Prime Minister ex MLC Abdul Azeem. The ex Police officer from Karnataka showed his layalty to JDS supremo by saying that he (Deve Gowda ) will lead the nation after the next general elections. He was speaking at the Tippu Sultan birth day celbrations at the JDS office in Bangalote on Nov 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X