ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ 23 ರ ನಂತರ JDS ನಡೆ ಏನು? ದೇವೇಗೌಡ್ರು ಹೇಳಿದ್ದಿಷ್ಟು...

|
Google Oneindia Kannada News

Recommended Video

ಮೇ 23ರ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ನಡೆ ಬಗ್ಗೆ ಎಚ್ ಡಿ ದೇವೇಗೌಡ ಹೇಳಿದ್ದೇನು? | Oneindia Kannada

ಬೆಂಗಳೂರು, ಮೇ 18: ಲೋಕಸಭೆ ಚುನಾವಣೆಯ ಫಲಿತಾಂಶ ಮೇ 23 ರಂದು ಹೊರಬೀಳುತ್ತಿದ್ದಂತೆಯೇ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉದುರಿಬೀಳುತ್ತಿದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉತ್ತರ ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡ, "ನಾವು ಕಾಂಗ್ರೆಸ್ ನೊಂದಿಗೇ ಇರುತ್ತೇವೆ. ನಾನು ಇದಕ್ಕಿಂತ ಹೆಚ್ಚು ಏನನ್ನೂ ಮಾತನಾಡುವುದಕ್ಕೆ ಬಯಸುವುದಿಲ್ಲ, ಮೇ 23 ರಂದು ಫಲಿತಾಂಶ ಹೊರಬೀಳುತ್ತದೆ. ಆಗ ಇಡೀ ದೇಶಕ್ಕೂ ರಾಜಕೀಯದ ಸ್ಪಷ್ಟ ಚಿತ್ರಣ ಸಿಗುತ್ತದೆ. ನಂತರ ಏನೆಲ್ಲ ಬೆಳವಣಿಗೆಗಳು ನಡೆಯಲಿದೆ ಎಂದು ನೋಡೋಣ" ಎಂದರು.

ಮೇ 18 ರಂದು ತಮ್ಮ 87 ನೇ ಜನ್ಮದಿನ ಆಚರಿಸಿಕೊಂಡ ಎಚ್ ಡಿ ದೇವೇಗೌಡ, ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು. ಅವರೊಂದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಇದ್ದರು.

ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಾಶಯ

ಇತ್ತೀಚೆಗಷ್ಟೇ, "ಕಾಂಗ್ರೆಸ್ ಬೆಂಬಲವಿಲ್ಲದೆ ಪ್ರಾದೇಶಿಕ ಪಕ್ಷಗಳು ಕೇಮದ್ರದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ" ಎಂದಿದ್ದ ದೇವೇಗೌಡರು ಈಗ ಮತ್ತೊಮ್ಮೆ ತಮ್ಮ ಬೆಂಬಲ ಕಾಂಗ್ರೆಸ್ಸಿಗೆ ಎಂದಿದ್ದಾರೆ. ಮೇ 23 ರಂದು ದೆಹಲಿಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ ನಡೆಯಲಿದ್ದು, ದೇವೇಗೌಡರೂ ಹಾಜರಾಗುವ ನಿರೀಕ್ಷೆ ಇದೆ.

21 ರಂದು ಜೆಡಿಎಸ್ ಸಭೆ

21 ರಂದು ಜೆಡಿಎಸ್ ಸಭೆ

ಮೇ 21ರಂದು ಬೆಂಗಳೂರಿನಲ್ಲಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಸಚಿವರು, ಶಾಸಕರ ಸಭೆ ನಡೆಯಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಎಚ್.ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮೇ 23 ರ ಫಲಿತಾಂಸದ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು!ಮೇ 21ಕ್ಕೆ ಮಹತ್ವದ ಸಭೆ ಕರೆದ ಎಚ್.ಡಿ.ದೇವೇಗೌಡರು!

ಮೇ 23 ರಂದು ದೆಹಲಿಯಲ್ಲಿ ಸಭೆ

ಮೇ 23 ರಂದು ದೆಹಲಿಯಲ್ಲಿ ಸಭೆ

ಮೇ 23 ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೆಹಲಿಯಲ್ಲಿ ಮಹಾಘಟಬಂಧನಕ್ಕೆ ಬೆಂಬಲ ನೀಡುವ ಎಲ್ಲಾ ವಿಪಕ್ಷಗಳನ್ನೂ ಆಮಂತ್ರಿಸಿ, ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಜೆಡಿಎಸ್ ಸುಪ್ರಿಮೋ ಎಚ್ ಡಿ ದೇವೇಗೌಡ, ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಮುಂತಾದವರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಸವಾಲಾದ ಸಿದ್ದರಾಮಯ್ಯ ನಡೆ

ಸವಾಲಾದ ಸಿದ್ದರಾಮಯ್ಯ ನಡೆ

ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಆಪ್ತರು, ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುತ್ತಿರುವುದು ಜೆಡಿಎಸ್ ಗೆ ಭಾರೀ ಮುಜುಗರವನ್ನುಂಟು ಮಾಡುತ್ತಿದೆ. ಜೊತೆಗೆ ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಎಂದೋ ಮುಖ್ಯಮಂತ್ರಿಯಾಗಬೇಕಿತ್ತು ಎಂದಿದ್ದು, ನಂತರ ರೇವಣ್ಣ ಅವರೂ ಮುಖ್ಯಮಂತ್ರಿ ಪಟ್ಟಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಪಂಚ್ ನೀಡಿದ್ದು.. ಈ ಎಲ್ಲ ಬೆಳವಣಿಗೆಗಳೂ ರಾಜ್ಯದ ಮೈತ್ರಿ ಸರ್ಕಾರ ಫಲಿತಾಂಶಸದ ನಂತರ ಬೀಳಬಹುದು ಎಂಬ ಅನುಮಾನಕ್ಕೆ ಪುಷ್ಠಿ ನೀಡಿತ್ತು.

ಸೋನಿಯಾಗೆ ಗೌಡ್ರ ಪತ್ರ

ಸೋನಿಯಾಗೆ ಗೌಡ್ರ ಪತ್ರ

ಇತ್ತೀಚೆಗಷ್ಟೇ ಸೋನಿಯಾ ಗಾಂಧಿ ಅವರಿಗೆ ದೇವೇಗೌಡರು ಪತ್ರವೊಂದನ್ನು ಬರೆದಿದ್ದು, ರಾಜ್ಯದ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಇಲ್ಲದ್ದರ ಬಗ್ಗೆ ಆರೋಪಿಸಿದ್ದಾರೆ ಎನ್ನಲಾಗಿದೆ.

English summary
Former prime minister and JDS supremo HD Deve Gowda told, he will stand by Congress side , even after Lok Saha elections 2019 results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X