ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈತ್ರಿ ಸರಕಾರ ಬೀಳಲು, ತಾವು- ತಮ್ಮ ಮೊಮ್ಮಗನ ಸೋಲಿಗೆ ಕಾರಣ ಹೊರಗಿಟ್ಟ ದೇವೇಗೌಡರು

By ಅನಿಲ್ ಆಚಾರ್
|
Google Oneindia Kannada News

ಕಾಂಗ್ರೆಸ್- ಜೆಡಿಎಸ್ ಸರಕಾರ ಬೀಳುವುದಕ್ಕೆ ಸಿದ್ದರಾಮಯ್ಯ ಅವರೇ ಹೊಣೆ ಎಂದು ಮಾಜಿ ಪ್ರಧಾನಮಂತ್ರಿ- ಜೆಡಿಎಸ್ ರಾಷ್ಟ್ರಾಧ್ಯಕ್ಷರೂ ಆದ ಎಚ್. ಡಿ. ದೇವೇಗೌಡ ಆರೋಪ ಮಾಡಿದ್ದಾರೆ. 'ದಿ ಹಿಂದೂ' ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಪತನವಾಗಿ ಹತ್ತಿರಹತ್ತಿರ ಒಂದು ತಿಂಗಳ ನಂತರ ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷದಿಂದ ಶಾಸಕರು ರಾಜೀನಾಮೆ ನೀಡಿದ ನಂತರ ಸರಕಾರ ಬಿದ್ದಿತ್ತು.

Recommended Video

ಆಷಾಢದ ಕೊನೆಯ ದಿನದ ಮುನ್ನಾ ದೇವೇಗೌಡರಿಂದ ಕಾಂಗ್ರೆಸ್ಸಿಗೆ ಸ್ಪಷ್ಟ ಸಂದೇಶ | Oneindia Kannada

ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದರೆ ರಾಹುಲ್ ಗಾಂಧಿ?ಮೈತ್ರಿ ಸರಕಾರ ಬೀಳಲು ಸಿದ್ದರಾಮಯ್ಯ ಕಾರಣವೆಂದರೆ ರಾಹುಲ್ ಗಾಂಧಿ?

ಸಿದ್ದರಾಮಯ್ಯ ಸಿಟ್ಟಿಗೆ ಕಾರಣ ಏನು?
ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬುದು ಕಾಂಗ್ರೆಸ್ ನ ಉದ್ದೇಶವಾಗಿತ್ತು. ಆದರೆ ಈ ನಿರ್ಧಾರಕ್ಕೆ ಸಿದ್ದರಾಮಯ್ಯ ಅವರ ಒಪ್ಪಿಗೆ ಇರಲಿಲ್ಲ. ಏಕೆಂದರೆ, ಎಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಜತೆಗೆ ಬಗೆಹರಿಯದ ಕದನ ಸಿದ್ದರಾಮಯ್ಯಗೆ ಇತ್ತು. ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯ ಸ್ಥಾನದಲ್ಲಿ ನೋಡುವುದು ಸಾಧ್ಯವಿರಲಿಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಿರ್ಧಾರ ಸಿದ್ದರಾಮಯ್ಯ ಅವರಿಗೆ ನೋವು- ಸಿಟ್ಟು ತರಿಸಿತ್ತು.

ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸೋಲುಣಿಸಿದ ಸಿಟ್ಟು ಸಿದ್ದರಾಮಯ್ಯ ಅವರಿಗೆ ಮಾಯಲಾರದ ಗಾಯ ಮಾಡಿತ್ತು.

ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಒಬ್ಬರೇ ಜವಾಬ್ದಾರಿ ಎನ್ನುತ್ತೀರಾ?

ಸಮ್ಮಿಶ್ರ ಸರಕಾರ ಪತನಕ್ಕೆ ಸಿದ್ದರಾಮಯ್ಯ ಒಬ್ಬರೇ ಜವಾಬ್ದಾರಿ ಎನ್ನುತ್ತೀರಾ?

ಸಮ್ಮಿಶ್ರ ಸರಕಾರ ರಚನೆ ನಿರ್ಧಾರಕ್ಕೂ ಮುಂಚೆ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಆಗಲೀ ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿರಲಿಲ್ಲ. ಸ್ವತಃ ಆವರ ಅನುಯಾಯಿಗಳು (ಕಾಂಗ್ರೆಸ್ ಭಿನ್ನಮತೀಯರು) ಸಾರ್ವಜನಿಕವಾಗಿಯೇ ಹೇಳುವಂತೆ ಲೋಕಸಭಾ ಚುನಾವಣೆಯಲ್ಲಿ ನನ್ನ ಹಾಗೂ ನನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ. ನಮ್ಮ ವಿರುದ್ಧ ಕೆಲಸ ಮಾಡಿದ ಕಾಂಗ್ರೆಸ್ ನವರಿಗೆ ಅವರು ನೋಟಿಸ್ ನೀಡಿದರಾ? ಸದ್ಯಕ್ಕಂತೂ ಕಾಂಗ್ರೆಸ್ ನೊಳಗೆ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಅಥವಾ ಸ್ಪರ್ಧಿಸಲು ಯಾರೂ ಇಲ್ಲ.

ಅವರು ಏತಕ್ಕಾಗಿ ಹಾಗೆ ಮಾಡಿದರು?

ಅವರು ಏತಕ್ಕಾಗಿ ಹಾಗೆ ಮಾಡಿದರು?

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕು ಹಾಗೂ ತಾವು ವಿರೋಧ ಪಕ್ಷದ ನಾಯಕರಾಗಬೇಕು ಎಂಬುದು ಸಿದ್ದರಾಮಯ್ಯ ಗುರಿ ಆಗಿತ್ತು. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಬಳ್ಳಾರಿಗೆ ಪಾದ ಯಾತ್ರೆ ಹೋಗಿದ್ದನ್ನು ಬಿಟ್ಟರೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮಾಡಿದ್ದೇನು? ಯಡಿಯೂರಪ್ಪ್ ಸರಕಾರದ ವಿರುದ್ಧ ಹೋರಾಡಿದವರು ಯಾರು? ನಿಜವಾದ ಹೋರಾಟ ಮಾಡಿದ್ದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರದ್ದು ತೋರಿಕೆ ಮಾತ್ರ.

ಬಿಎಸ್‌ವೈ 3 ತಿಂಗಳು ಅಧಿಕಾರದಲ್ಲಿದ್ರೂ ಓಕೆ, ನಮಗೆ ಬೇಡವಾದ ವಿಷಯ: ದೇವೇಗೌಡ ಬಿಎಸ್‌ವೈ 3 ತಿಂಗಳು ಅಧಿಕಾರದಲ್ಲಿದ್ರೂ ಓಕೆ, ನಮಗೆ ಬೇಡವಾದ ವಿಷಯ: ದೇವೇಗೌಡ

ದಶಕಗಳ ಹಿಂದೆ ಪಕ್ಷ ತೊರೆದ ನಂತರ ಜೆಡಿಎಸ್ ಅನ್ನು ವಿರೋಧಿಸಿದ್ದಾರಾ?

ದಶಕಗಳ ಹಿಂದೆ ಪಕ್ಷ ತೊರೆದ ನಂತರ ಜೆಡಿಎಸ್ ಅನ್ನು ವಿರೋಧಿಸಿದ್ದಾರಾ?

ಜೆಡಿಎಸ್ ಗೆ ಹಾನಿ ಮಾಡಬೇಕು ಅಂತ ಸಿದ್ದರಾಮಯ್ಯ ಬಯಸುತ್ತಿರುವುದು ಹೊಸದಲ್ಲ. 2016ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಎಂಟು ಶಾಸಕರನ್ನು ಸೆಳೆದಿದ್ದರು. ಮಾಜಿ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ನೆರವಿನಿಂದ 2004ರಿಂದ ನಮ್ಮ ಪಕ್ಷಕ್ಕೆ ಸಿದ್ದರಾಮಯ್ಯ ಹಾನಿ ಮಾಡಲು ಶುರು ಮಾಡಿದರು. ಅಹಿಂದ ಸಮಾವೇಶಗಳಲ್ಲಿ ಕಾಂಗ್ರೆಸ್ ನಾಯಕರು ನನ್ನ ವಿರುದ್ಧ ವಾಗ್ದಾಳಿ ನಡೆಸಿದರು. ಆಗ ಎನ್. ಧರಂ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವದಲ್ಲಿ ಇತ್ತು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. 1996ರಲ್ಲಿ ನಾನು ಪ್ರಧಾನಮಂತ್ರಿಯಾಗಿ ದೆಹಲಿಗೆ ಹೋದ ಮೇಲೆ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ ಅನ್ನೋ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ನನ್ನ ಮೇಲೆ ಸಿಟ್ಟಿದೆ. ಆ ನಂತರ 2004ರಲ್ಲಿ ಮೈತ್ರಿ ಸರಕಾರ ರಚನೆಯಾಯಿತು. ಆಗಲೂ ಮುಖ್ಯಮಂತ್ರಿ ಆಗದಿರಲು ನಾನೇ ಕಾರಣ ಅಂದುಕೊಂಡಿದ್ದಾರೆ. ಕಾಂಗ್ರೆಸ್ ನ ಮಧ್ಯಂತರ ಅಧ್ಯಕ್ಷೆ ಆಗಿರುವ ಸೋನಿಯಾ ಗಾಂಧಿ ಅವರು ಸ್ಪಷ್ಟಪಡಿಸಲಿ; 2004ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ನಾನೆಷ್ಟು ಪ್ರಯತ್ನ ಪಟ್ಟೆ ಎಂಬುದನ್ನು ತಿಳಿಸಲಿ. ಸಿದ್ದರಾಮಯ್ಯ ಸಲುವಾಗಿಯೇ ಎಸ್ಸೆಂ ಕೃಷ್ಣ ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎಂಬ ಮನವಿಯನ್ನೂ ತಿರಸ್ಕರಿಸಿದೆ.

ಸಮಸ್ಯೆ ಆಗಿದ್ದು ಹೇಗೆ?

ಸಮಸ್ಯೆ ಆಗಿದ್ದು ಹೇಗೆ?

ನಮ್ಮನ್ನು ನಾಶ ಪಡಿಸಬೇಕು ಎಂಬ ಸಿದ್ದರಾಮಯ್ಯ ಅವರ ಪ್ರಯತ್ನದ ಫಲವಾಗಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯೆ ನೂರಾ ಮೂವತ್ತರಿಂದ ಎಪ್ಪತ್ತೊಂಬತ್ತಕ್ಕೆ ಕುಸಿಯಿತು. ಶಾದಿ ಭಾಗ್ಯ ಮತ್ತಿತರ ಭಾಗ್ಯಗಳು ಏನಾದವು? ಅಹಿಂದ ಏನಾಯಿತು? ಸಿದ್ದರಾಮಯ್ಯ ದಾರಿ ತಪ್ಪಿಸಿದ್ದರಿಂದಾಗಿ ರಾಹುಲ್ ಗಾಂಧಿ ನಮ್ಮನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದರು.

ಅದರ ಪರಿಣಾಮವಾಗಿ ಹಾಸನ ಕ್ಷೇತ್ರ ಬಿಜೆಪಿ ಪಾಲಾಯಿತು. ಸ್ಥಳೀಯ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಹದಿನಾಲ್ಕು ಸ್ಥಾನಗಳನ್ನು ಗೆದ್ದಿತು. ಹಾಸನ ಹಾಗೂ ಮಂಡ್ಯದಲ್ಲಿ ಬಿಜೆಪಿ ಪ್ರವೇಶದ ಆತಂಕ ಎದುರಾಗಿದೆ ಅಂದರೆ ಅದಕ್ಕೆ ಸಿದ್ದರಾಮಯ್ಯ ಕಾರಣ. ಅವರು ನೇರವಾಗಿ ಬಿಜೆಪಿಗೆ ಬೆಂಬಲಿತ ಪಕ್ಷೇತರ ಅಭ್ಯರ್ಥಿಯನ್ನು (ಸುಮಲತಾ) ಮಂಡ್ಯದಲ್ಲಿ ಬೆಂಬಲಿಸಿದ್ದಾರೆ.

ಮೈತ್ರಿ ಸರ್ಕಾರ ಪತನ: ಜೆಡಿಎಸ್ ಪಕ್ಷದ ಮುಂದಿನ ನಡೆ ಏನು?ಮೈತ್ರಿ ಸರ್ಕಾರ ಪತನ: ಜೆಡಿಎಸ್ ಪಕ್ಷದ ಮುಂದಿನ ನಡೆ ಏನು?

ಇತ್ತೀಚೆಗೆ ಅವರನ್ನು ಸಂಪರ್ಕಿಸಲು ನೀವು ಪ್ರಯತ್ನಿಸಿದಿರಾ?

ಇತ್ತೀಚೆಗೆ ಅವರನ್ನು ಸಂಪರ್ಕಿಸಲು ನೀವು ಪ್ರಯತ್ನಿಸಿದಿರಾ?

ನನ್ನನ್ನು ನಂಬಿ. ಮೈತ್ರಿ ರಚನೆ ಆದ ಮೇಲೆ ಒಟ್ಟಾಗಿ ರಾಜ್ಯ ಪ್ರವಾಸ ಮಾಡಲು ಎರಡು ಬಾರಿ ಮನವಿ ಮಾಡಿದೆ. ಹಳೆಯದನ್ನು ಮರೆಯಲು ಕೇಳಿಕೊಂಡೆ. ಆದರೆ ಅದು ಆಗಲಿಲ್ಲ.

ಸೋನಿಯಾ ಗಾಂಧಿ ಅವರ ತೀರ್ಮಾನಕ್ಕೆ ಬಿಟ್ಟದ್ದು ಸದ್ಯಕ್ಕೆ ಕಾಂಗ್ರೆಸ್ ಜತೆಗೆ ನಿಮ್ಮ ಪರಿಸ್ಥಿತಿ ಹೇಗೆ? ಉಪ ಚುನಾವಣೆ ಬಂದರೆ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆಗೆ ಹೋಗುತ್ತೀರಾ?
ಕಾಂಗ್ರೆಸ್ ಜತೆ ಯಾವುದೇ ಮಾತುಕತೆ ಇಲ್ಲ. ಕುಮಾರಸ್ವಾಮಿ ಕೂಡ ಮಾತುಕತೆ ನಡೆಸಲ್ಲ ಅಂದುಕೊಳ್ಳುತ್ತೀನಿ. ದೇವೇಗೌಡರ ಜತೆ ಹೋಗಿದ್ದಕ್ಕೆ ಚುನಾವಣೆ ಸೋತೆವು ಅಂತ ಸಿದ್ದರಾಮಯ್ಯ ಹೇಳುತ್ತಾರೆ (ನಗು). ಯಾವುದೇ ಸ್ಥಳೀಯ ನಾಯಕರು ಮಾತನಾಡಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅವರಿಗೆ ತಮ್ಮ ಬಲ ತೋರಿಸಬೇಕಿದೆ. ಆದರೆ ಸೋನಿಯಾ ಗಾಂಧಿ ಅವರು ಉಪ ಚುನಾವಣೆಯ ಸೀಟು ಹಂಚಿಕೆ ಬಗ್ಗೆ ಮಾತನಾಡಿದರೆ ಆಗ ಸಂಗತಿ ಬೇರೆಯದೇ ಆಗುತ್ತದೆ.

English summary
JDS- Congress coalition government collapsed by former chief minister Siddaramiah, alleged by JDS supremo HD Deve Gowda in an interview with 'The Hindu' daily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X