ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯ ವಾಹನಗಳ ಮಾಲೀಕರಿಗೆ ಹೈಕೋರ್ಟ್‌ನಿಂದ ಗುಡ್ ನ್ಯೂಸ್!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಮೇ 12: ಹದಿನೈದು ವರ್ಷ ಹಳೆಯದಾದ ವಾಹನಗಳ ಮಾಲೀಕರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ.

ಅಯ್ಯೋ ಹೇಗಪ್ಪಾ ಹಳೆ ಗಾಡಿಗೆ ಸಾವಿರಾರು ರೂಪಾಯಿ ಶುಲ್ಕ ಕಟ್ಟಬೇಕು ಎಂದು ಕೊರಗಬೇಕಿಲ್ಲ, ಸದ್ಯಕ್ಕೆ ಹೈಕೋರ್ಟ್ ಅಂತಹ ಹಳೆಯ ವಾಹನಗಳ ಮಾಲೀಕರ ನೆರವಿಗೆ ಧಾವಿಸಿದೆ.

ಅಧಿಕ ಶುಲ್ಕ ಮತ್ತು ದಂಡವನ್ನು ನಿಗದಿ ಮಾಡಿರುವ ಅವೈಜ್ಞಾನಿಕ ಕ್ರಮವನ್ನು ಪ್ರಶ್ನಿಸಿ ಕರ್ನಾಟಕ ಲಾರೀ ಮಾಲೀಕರ ಒಕ್ಕೂಟ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ರಜಾಕಾಲದ ವಿಶೇಷ ನ್ಯಾಯಪೀಠ ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರ (ಫಿಟ್ನೆಸ್ ಸರ್ಟಿಫಿಕೇಟ್ ) ನವೀಕರಣಕ್ಕೆ ವಿಧಿಸುತ್ತಿದ್ದ ಅಧಿಕ ಶುಲ್ಕ ಮತ್ತು ದಂಡದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

 HC stayed order of state on leavying hefty fine for old vehicles

ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅಲ್ಲದೆ, ಪ್ರತಿವಾದಿಗಳಾದ ಸರ್ಕಾರ, ಸಾರಿಗೆ ಇಲಾಖೆಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದ ಹಿನ್ನೆಲೆ ಏನು?

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2021ರ ಅಕ್ಟೋಬರ್ 4ರಂದು ಆದೇಶ ಹೊರಡಿಸಿ 2022ರ ಏ.1ರಿಂದ ಜಾರಿಗೆ ಬರುವಂತೆ ಹಳೆಯ ವಾಹನಗಳ ದಂಡದ ಶುಲ್ಕವನ್ನು ಹೆಚ್ಚಳ ಮಾಡಿತ್ತು.

ಈ ಶುಲ್ಕ ಹೆಚ್ಚಳದಿಂದ ಹಳೆಯ ವಾಹನ ಹೊಂದಿರುವವರಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲೇ ಹಳೆಯದಾಗಿರುವ ವಾಹನಗಳಿಗೆ ಅಷ್ಟು ದೊಡ್ಡ ಮೊತ್ತದ ದಂಡವನ್ನು ಕಟ್ಟಿ, ಅವುಗಳನ್ನು ನಿರ್ವಹಣೆ ಕಷ್ಟಕರ. ಮೊದಲೇ ತೈಲ ಬೆಲೆ ಅಧಿಕಾರ ಗ್ರಾಹಕರ ಕೈ ಸುಡುತ್ತಿದೆ, ಹಾಗಾಗಿ ದಂಡ ಶುಲ್ಕ ಹೆಚ್ಚಳದ ಆದೇಶಕ್ಕೆ ತಡೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು.

ಅರ್ಜಿದಾರರ ಆಕ್ಷೇಪವೇನು?

ಅರ್ಜಿದಾರರ ಪರ ವಕೀಲರು, ಈ ವರ್ಷದ ಏಪ್ರಿಲ್ 1ರಿಂದ ಅನ್ವಯವಾಗುವಂತೆ 15 ವರ್ಷ ಮೇಲ್ಪಟ್ಟ ಎಲ್ಲ ಹಳೆಯ ವಾಹನಗಳ ದಂಡದ ಪ್ರಮಾಣದಲ್ಲಿ ಭಾರಿ ಏರಿಕೆ ಮಾಡಿದ್ದು, ನೋಂದಣಿ ಮತ್ತು ಕ್ಷಮತಾ ಪ್ರಮಾಣಪತ್ರಗಳ ನವೀಕರಣಕ್ಕೆ 10 ಸಾವಿರ ರೂ. ವಿಧಿಸಲಾಗುತ್ತಿದೆ. ಒಂದು ವೇಳೆ ಎಫ್ ಸಿ ಅವಧಿ ಮುಕ್ತಾಯಗೊಂಡಿದ್ದರೆ ಸಾರಿಗೇತರ ವಾಹನಗಳಿಗೆ ತಿಂಗಳಿಗೆ ಹೆಚ್ಚುವರಿಯಾಗಿ 500 ರೂ.ವಿಧಿಸಲಾಗುತ್ತಿದೆ. ಇದು ಅತ್ಯಂತ ದುಬಾರಿಯಾಗಿದ್ದು, ವಾಹನ ಸವಾರರಿಗೂ ನಿಜಕ್ಕೂ ತುಂಬಾ ಹೊರೆಯಾಗಿದೆ ಎಂದರು.

ಅಲ್ಲದೆ, ಪ್ರತಿದಿನ ವಿಳಂಬಕ್ಕೂ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. 10 ಸಾವಿರ ರೂ. ನೋಂದಣಿ ಮತ್ತು ನವೀಕರಣಕ್ಕೆ ನಿಗದಿಪಡಿಸಿದ್ದರೂ ಸಹ ಭಾರಿ ಸರಕು ವಾಹನಗಳಿಗೆ 1500 ರೂ ಮತ್ತು ಮಧ್ಯಮ ಸರಕು ವಾಹನಗಳಿಗೆ 1300 ರೂ. ವಿಧಿಸಲಾಗುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.

English summary
The High Court has issued an interim injunction for unlawful action that imposes leavying hefty fine for older than 15 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X