ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇಶ್ಯಾವಾಟಿಕೆ ಕೇಂದ್ರದ ಮೇಲೆ ದಾಳಿ, ಗ್ರಾಹಕನ ವಿರುದ್ಧ ಕ್ರಮ ಸಲ್ಲ: HC

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಏ.14: ವೇಶ್ಯಾವಾಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗ್ರಾಹಕರು ಸಿಕ್ಕಿಬಿದ್ದರೆ ಅವರ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗದು ಎಂದು ಹೈಕೋರ್ಟ್ ಪುನರುಚ್ಚರಿಸಿದೆ. ಈ ಹಿಂದೆಯೂ ಪ್ರಕರಣವೊಂದರಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದ ನ್ಯಾಯಾಲಯ ಮತ್ತೆ ಅದೇ ವಿಚಾರವನ್ನು ಹೇಳಿದೆ.

ಇತ್ತೀಚೆಗೆ ಇದೇ ವಿಷಯದ ಕುರಿತು ಮನೆ ಮಾಲೀಕನಿಗೆ ತನ್ನ ಬಾಡಿಗೆದಾರರ ವೇಶ್ಯಾವಾಟಿಕೆ ನಡೆಸುತ್ತಿರುವ ಮುಚ್ಚಿಟ್ಟಿದ್ದರೆ ಅದಕ್ಕೆ ಮಾಲೀಕ ಹೊಣೆಗಾರನಲ್ಲವೆಂದು ಆದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೊತ್ತಿಲ್ಲದೆ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಮಾಲೀಕರ ವಿರುದ್ಧ ಕೇಸಿಲ್ಲ: HCಗೊತ್ತಿಲ್ಲದೆ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ: ಮಾಲೀಕರ ವಿರುದ್ಧ ಕೇಸಿಲ್ಲ: HC

ಬೆಂಗಳೂರಿನ ಎಸ್. ಬಾಬು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

Karnataka High Court Reiterates Customer Found In Brothel At Time Of Raid Cant Be prosecute in criminal case

ಅಲ್ಲದೇ ಅರ್ಜಿದಾರರ ವಿರುದ್ಧದ ಮಾನವ ಕಳ್ಳ ಸಾಗಾಣೆ ತಡೆ ಕಾಯಿದೆ, 1956ರ ಸೆಕ್ಷನ್ 3, 4, 5, 6 ಮತ್ತು ಸೆಕ್ಷನ್ 320 (ವ್ಯಕ್ತಿ ಕಳ್ಳಸಾಗಣೆ) ಅಡಿಯಲ್ಲಿ ಬಾಕಿ ಉಳಿದಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸಿತು. ಪೊಲೀಸರು ಶೋಧ ಕಾರ್ಯ ನಡೆಸಿದಾಗ ಅರ್ಜಿದಾರರು ವೇಶ್ಯಾವಾಟಿಕೆಯಲ್ಲಿ ಗ್ರಾಹಕರು ಎಂಬುದು ವಿವಾದವಾಗಿಲ್ಲ. ವೇಶ್ಯಾಗೃಹದಲ್ಲಿರುವ ಗ್ರಾಹಕನನ್ನು ಕ್ರಿಮಿನಲ್ ಮೊಕದ್ದಮೆಗಳಿಗೆ ಎಳೆಯಲಾಗುವುದಿಲ್ಲ ಎಂಬುದು ಈ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡಿವೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಪ್ರಾಸಿಕ್ಯೂಷನ್ ಪ್ರಕಾರ, 2021ರ ಸೆ.23ರಂದು ಖಚಿತ ಮಾಹಿತಿ ಆಧರಿಸಿ ಮಾನವ ಕಳ್ಳ ಸಾಗಾಣೆ ತಡೆ ಕಾಯಿದೆ ಮತ್ತು ಐಪಿಸಿ ಕಲಂ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕಿಯೆ ಆರಂಭಿಸಿದರು. ಅವರು ದಾಳಿ ನಡೆಸಿದಾಗ ಆ ಮನೆಯ ಆವರಣದಲ್ಲಿ ಅರ್ಜಿದಾರರೂ ಸಹ ಇದ್ದರು.

ಕಾಯಿದೆಯ ಸೆಕ್ಷನ್ 3ರ ಪ್ರಕಾರ ವೇಶ್ಯಾಗೃಹವನ್ನು ಇಟ್ಟುಕೊಳ್ಳುವುದಕ್ಕೆ ಅಥವಾ ಆವರಣವನ್ನು ವೇಶ್ಯಾಗೃಹವಾಗಿ ಬಳಸಲು ಅನುಮತಿಸುವುದಕ್ಕೆ ಶಿಕ್ಷೆ ವಿಧಿಸುತ್ತದೆ. ಸೆಕ್ಷನ್ 4ರಂತೆ ವೇಶ್ಯಾವಾಟಿಕೆಯಿಂದ ಹಣ ಗಳಿಕೆ ಮಾಡಿ ಜೀವನ ಸಾಗಿಸುವವರಿಗೆ ಶಿಕ್ಷೆ ನೀಡುತ್ತದೆ. ಸೆಕ್ಷನ್ 5ರ ಪ್ರಕಾರ ವೇಶ್ಯಾವಾಟಿಕೆಗಾಗಿ ವ್ಯಕ್ತಿ ಸಾಗಣೆ, ಪ್ರಚೋದಿಸುವುದು ಅಥವಾ ಕರೆದೊಯ್ಯುವುದಕ್ಕೆ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಸೆಕ್ಷನ್ 6ರಂತೆ ವೇಶ್ಯಾವಾಟಿಕೆ ನಡೆಸುತ್ತಿರುವ ಸ್ಥಳದಲ್ಲಿ ವ್ಯಕ್ತಿಯನ್ನು ಬಂಧಿಸ ಬಹುದಾಗಿದೆ. ಆದರೆ ಈ ಯಾವ ಚಟುವಟಿಕೆಗಳನ್ನು ಅರ್ಜಿದಾರರು ನಡೆಸಿದ್ದಾರೆಂಬುದನ್ನು ದೂರಿನಲ್ಲಿ ಆರೋಪಿಸಿಲ್ಲ. ಹಾಗಾಗಿ ಪ್ರಕರಣ ಊರ್ಜಿತವಾಗದು ಎಂದು ನ್ಯಾಯಪೀಠ ಹೇಳಿದೆ.

English summary
Karnataka High Court Reiterates Customer Found In Brothel At Time Of Raid Can't Be prosecute in criminal case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X