ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಎಫ್‌ಐಆರ್, ರದ್ದುಗೊಳಿಸಲು ಹೈಕೋರ್ಟ್ ನಕಾರ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜು.4: ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ ಪುರದಲ್ಲಿರುವ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ವಿರುದ್ಧ ದಾಖಲಾಗಿದ್ದ 14 ಲೈಂಗಿಕ ಕಿರುಕುಳ ಪ್ರಕರಣಗಳ ಪ್ರಥಮ ಮಾಹಿತಿ ವರದಿಗಳ (ಎಫ್‌ಐಆರ್)ಗಳನ್ನು ರದ್ದುಗೊಳಸಿಲು ಹೈಕೋರ್ಟ್ ನಿರಾಕರಿಸಿದೆ.

ಅಲ್ಲದೆ, ಶಿಕ್ಷಕರ ಮೂರ್ನಾಲ್ಕು ತಿಂಗಳ ಕಾಲ ಹಲವು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವುದರಿಂದ, ಇದು ಗಂಭೀರ ವಿಚಾರ ಹಾಗಾಗಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೇಶಿಸಿದೆ. ಇದರಿಂದಾಗಿ ಶಿಕ್ಷಕ ಕೆ.ಟಿ.ಪ್ರಭುನಾಯ್ಕ ಇದೀಗ ತನಿಖೆಯನ್ನು ಎದುರಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಶಿಕ್ಷಕ ಸಲ್ಲಿಸಿದ್ದ ಅರ್ಜಿಗಳನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಆದೇಶ ನೀಡಿದೆ. ಬಿಇಒ ನೀಡಿದ ದೂರಿನ ಆಧಾರದ ಮೇಲೆ 2022 ರ ಜ.15ರಂದು ಮೊದಲ ಎಫ್‌ಐಆರ್ ನೋಂದಣಿಯ ನಂತರ ವಿದ್ಯಾರ್ಥಿನಿಯರ ಪೋಷಕರ ದೂರುಗಳ ಆಧಾರದ ಮೇಲೆ ಇತರ 13 ವಿವಿಧ ಎಫ್‌ಐಆರ್‌ಗಳ ನೋಂದಣಿಯ ಕಾನೂನುಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಬ್ಲಾಕ್ ಶಿಕ್ಷಣಾಧಿಕಾರಿ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು ನೀಡಿದ ಲೈಂಗಿಕ ಕಿರುಕುಳ/ಹಲ್ಲೆ ದೂರುಗಳನ್ನು ನೀಡಿದ್ದಾರೆ. ಪೋಷಕರ ದೂರಿನ ಆಧಾರದ ಮೇಲೆ ಶಾಲೆಯ ಶಿಕ್ಷಕರೊಬ್ಬರು ವರದಿ ಕಳುಹಿಸಿದ ನಂತರ ಅರ್ಜಿದಾರರ ವಿರುದ್ಧ ಬಿಇಒ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ಎ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ2012ರ ಸೆಕ್ಷನ್ 8, 10 ಮತ್ತು 12 ರ ಅಡಿಯಲ್ಲಿ ಎಫ್ಐಆರ್ ಹೂಡಲಾಗಿದೆ.

HC refuse to quash 14 FIRs against a NR Pura teacher facing sexual assault against students

ಅರ್ಜಿದಾರರ ವಾದ ನಿರಾಕರಣೆ: ಒಂದೇ ಘಟನೆಯ ಮೇಲೆ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಲು ಸಾಧ್ಯವಿಲ್ಲ ಎಂಬ ಅರ್ಜಿದಾರರ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. ಎಫ್‌ಐಆರ್‌ಗಳ ವಿಷಯಗಳು ಇದು ಒಂದು ನಿರ್ದಿಷ್ಟ ದಿನದಂದು ನಡೆದ ಒಂದೇ ಒಂದು ಘಟನೆಯಲ್ಲ ಎಂಬುದನ್ನು ಬಹಿರಂಗಪಡಿಸುತ್ತದೆ. ದೂರುಗಳ ಪ್ರಕಾರ 2021ರ ಸೆಪ್ಟೆಂಬರ್ 1 ಮತ್ತು 2022ರ ಜನವರಿ 3ರ ನಡುವೆ ಒಂದರಿಂದ ಮೂರು ತಿಂಗಳವರೆಗೆ ಕಿರುಕುಳ ಘಟನೆಗಳು ನಡೆದಿವೆ ಎಂದು ನ್ಯಾಯಾಲಯ ಹೇಳಿದೆ.

ಈ ಎಲ್ಲಾ ಪ್ರಕರಣಗಳಲ್ಲಿ ಸಂತ್ರಸ್ತರು ಸಾಮಾನ್ಯರಲ್ಲ ಆದರೆ ವಿಭಿನ್ನವಾಗಿರುವುದರಿಂದ, ಪ್ರತಿ ಸಂತ್ರಸ್ತರು ದೂರು ದಾಖಲಿಸಿದ್ದಾರೆ. ಅದು ವಿಭಿನ್ನ ಅವಧಿಯ ಘಟನೆಗಳನ್ನು ಹೇಳುತ್ತದೆ. ಈ ಪ್ರಕರಣಗಳ ವಿಚಿತ್ರ ಸಂಗತಿಗಳನ್ನು ಒಳಗೊಂಡಿರುವುದರಿಂದ ಅಪರಾಧಗಳನ್ನು ಹಲವು ಎಫ್‌ಐಆರ್‌ಗಳಲ್ಲಿ ದಾಖಲಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರತಿಯೊಬ್ಬ ಸಂತ್ರಸ್ತರ ವಿರುದ್ಧದ ಆಪಾದಿತ ಕೃತ್ಯಗಳಿಗೆ ಅರ್ಜಿದಾರನು ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕು, ಏಕೆಂದರೆ ಅರ್ಜಿದಾರರು ಬಿಇಒ ದೂರಿನ ಆಧಾರದ ಮೇಲೆ ದಾಖಲಾದ ಎಫ್‌ಐಆರ್ ಅನ್ನು ಪ್ರಶ್ನಿಸಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ಅಸಂಬದ್ಧ: ಶಾಲೆಯಲ್ಲಿ ತನ್ನ ವಿರುದ್ಧ ದ್ವೇಷ ಸಾಧಿಸುವ ವ್ಯಕ್ತಿಗಳು ಪೋಷಕರಿಗೆ ಆಮಿಷವೊಡ್ಡುವ ಮೂಲಕ ದೂರುಗಳನ್ನು ಸೃಷ್ಟಿಸಲಾಗುತ್ತದೆ ಅಥವಾ ಬೆಳೆಸಲಾಗುತ್ತದೆ ಎಂಬ ಅರ್ಜಿದಾರರ ವಾದ ಅಸಂಬದ್ಧವಾಗಿದೆ ಎಂದು ಕೋರ್ಟ್ ಹೇಳಿದೆ.

Recommended Video

Bumrah ದಾಖಲೆಯ ಆಟ ನೋಡಿ ಟೀಮ್ ಇಂಡಿಯಾ ಆಟಗಾರರೆಲ್ಲರೂ ಖುಷ್ | *Cricket | OneIndia Kannada

ಯಾವುದೇ ಕಾರಣವಿಲ್ಲದೆ ತನ್ನ ಮಗುವನ್ನು ಲೈಂಗಿಕವಾಗಿ ನಿಂದಿಸಲಾಗಿದೆ ಎಂದು ಆರೋಪಿಸಿ ಯಾವ ತಂದೆಯೂ ದೂರು ದಾಖಲಿಸುವುದಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

English summary
Karnataka High Court refuse to quash 14 FIRs against a Government school teacher who is facing sexual assault against students in NR Pura, Chikkamagaluru District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X