ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ವಿರುದ್ಧದ ದೇಶದ್ರೋಹ ಕೇಸ್ ರದ್ದು

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು,ಆ.15. ಆರು ವರ್ಷದ ಹಿಂದೆ ಪೊಲೀಸರು ಮುಷ್ಕರ ನಡೆಸಲು ಕುಮ್ಮಕ್ಕು ನೀಡಿದ ಕಾರಣಕ್ಕೆ ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್‌ ಮತ್ತಿತರರ ಮೂವರ ವಿರುದ್ಧದ ಹೂಡಿದ್ದ ದೇಶದ್ರೋಹ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಅಲ್ಲದೆ, ಸರ್ಕಾರದ ವಿರುದ್ಧ ಕೆಚ್ಚು ಅಥವಾ ದ್ವೇಷವನ್ನು ಮೂಡಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆನ್ನಲು ಯಾವುದೇ ಸಮರ್ಥನೀಯ ಸಾಕ್ಷ್ಯವಿಲ್ಲದೆ, ಸುಮ್ಮನೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಹಾಗಾಗಿ ಅದನ್ನು ಮಾನ್ಯ ಮಾಡಲಾಗದು ಎಂದೂ ನ್ಯಾಯಪೀಠ ತಿಳಿಸಿದೆ.

ವಿ. ಶಶಿಧರ್‌ ಮತ್ತಿತರರು ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಿರುವ ನ್ಯಾ. ಹೇಮಂತ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

"ಸರಕಾರದ ವಿರುದ್ಧ ದ್ವೇಷ ಅಥವಾ ನಿಂದನೆಯಾಗುವ ರೀತಿ ಅತೃಪ್ತಿಯನ್ನು ಸೃಷ್ಟಿಸುವ ಪ್ರಯತ್ನ ಮಾಡಿದರೆ ಅಂತಹ ವ್ಯಕ್ತಿಯನ್ನು ಭಾರತೀಯ ದಂಡ ಸಂಹಿತೆ ಸೆಕ್ಷನ್‌ 124ಎ (ದೇಶದ್ರೋಹ) ಆರೋಪ ಹೊರಿಸಬಹುದು. ಆದರೆ ಆರೋಪಪಟ್ಟಿಯಲ್ಲಿ, ಆರೋಪಿಗಳು ಪೊಲೀಸ್‌ ಇಲಾಖೆ ಕಳೆ ಹಂತದ ಸಿಬ್ಬಂದಿಯ ಜೊತೆ ಮಾತನಾಡಿ ಅಥವಾ ಲಿಖಿತ ರೂಪದಲ್ಲಿಅವರನ್ನಿಗೆ ಪ್ರಚೋದನೆ ನೀಡಲು ಪ್ರಯತ್ನಿಸಿದ್ದಾರೆನ್ನಲು ಯಾವುದೇ ಸಾಕ್ಷ್ಯವಿಲ್ಲ'' ಎಂದು ಹೇಳಿದೆ.

HC quashed case against Karnataka Police Mahasangha chief V. Shashidhar

ಅರ್ಜಿದಾರರು, ಎಲ್ಲ ಪೊಲೀಸ್‌ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ 2016ರ ಜೂ.4ರಂದು ಮುಷ್ಕರದಲ್ಲಿ ಭಾಗವಹಿಸಲು ಕರೆ ನೀಡಿ ಪ್ರಚೋದನೆ ನೀಡಿದ್ದಾರೆಂಬ ಆರೋಪವನ್ನು ಬಿಟ್ಟರೆ, ಅಪರಾಧಿಕ ಸಂಚು ಅಥವಾ ಪಿತೂರಿ ನಡೆಸಿದ್ದಾರೆಂಬ ಆರೋಪ ಪುಷ್ಟೀಕರಿಸಲು ಯಾವುದೇ ಸಾಕ್ಷ್ಯ ಅಥವಾ ಮೆಟಿರಿಯಲ್‌ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಜ್ಯ ಸರಕಾರ 2013ರ ಕರ್ನಾಟಕ ಅತ್ಯಗತ್ಯ ಸೇವೆಗಳ ನಿರ್ವಹಣಾ ಕಾಯಿದೆ(ಎಸ್ಮಾ) ಅಡಿಯಲ್ಲಿಪೊಲೀಸ್‌ ಪಡೆಯನ್ನು ಅಗತ್ಯ ಸೇವೆಯ ಎಂದು 2016ರ ಮೇ 31ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಘೋಷಿಸಿದೆ. ಆದರೆ ಆನಂತರ ಮುಷ್ಕರ ನಡೆದಿಲ್ಲಮತ್ತು ಎಸ್ಮಾ ಅಡಿಯಲ್ಲಿಯಾವುದೇ ಸಾಕ್ಷ್ಯವಿಲ್ಲದಿದ್ದರೂ ಅರ್ಜಿದಾರರ ವಿರುದ್ಧ 2016ರ ಜೂ.2ರಂದು ಎಫ್‌ ಐಆರ್‌ ದಾಖಲು ಮಾಡಿದೆ ಎಂಬ ಅಂಶವನ್ನು ನ್ಯಾಯಾಲಯ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ:

2016ರ ಜೂ.4ರಂದು ಪೊಲೀಸರು ಸಾಮೂಹಿಕ ರಜೆ ಹಾಕಿ ಮುಷ್ಕರಕ್ಕೆ ಕರೆ ನೀಡುವಂತೆ ಶಶಿಧರ್‌ ಪ್ರಚೋದನೆ ನೀಡಿದ್ದರು ಎಂದು ಆರೋಪಿಸಿ ಅವರ ವಿರುದ್ಧ ಕೇಸ್‌ ದಾಖಲಿಸಲಾಗಿತ್ತು. ವಜಾಗೊಂಡಿರುವ ಪೊಲೀಸ್‌ ಪೇದೆಯಾಗಿರುವ ಶಶಿಧರ್‌ ಅವರು, ಅಖಿಲ ಕರ್ನಾಟಕ ಪೊಲೀಸ್‌ ಮಹಾಸಂಘ ಸ್ಥಾಪಿಸಿಕೊಂಡು ಚುನಾಯಿತ ಸರಕಾರದ ವಿರುದ್ಧ ಪೊಲೀಸ್‌ ಪಡೆಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಸಾರ್ವಜನಿಕ ಭಾಷಣಗಳ ಮೂಲಕ ಪೊಲೀಸರಲ್ಲಿಮತ್ತು ಸಾರ್ವಜನಿಕರಲ್ಲಿದ್ವೇಷ ಭಾವನೆ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು.

ಆರ್ ಟಿಐ ವ್ಯಾಪ್ತಿಗೆ ಬರುತ್ತವೆಯೇ ನಿರ್ಧರಿಸಿ:

ಸೊಸೈಟಿಗಳು ನಡೆಸುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು ಮಾಹಿತಿ ಹಕ್ಕು ಕಾಯಿದೆ 2005ರ ವ್ಯಾಪ್ತಿಗೆ ಒಳಪಡುತ್ತವೆಯೇ ಆಥವಾ ಇಲ್ಲವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌, ಕರ್ನಾಟಕ ಮಾಹಿತಿ ಹಕ್ಕು ಆಯೋಗಕ್ಕೆ ನಿರ್ದೇಶನ ನೀಡಿದೆ.

ಆರ್‌ಟಿಐ ಆಯೋಗ ನೀಡಿರುವ ಆದೇಶ ರದ್ದು ಕೋರಿ ಮಲ್ನಾಡ್‌ ತಾಂತ್ರಿಕ ಶಿಕ್ಷಣ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯಪೀಠ ''ಕೋರ್ಟ್ ಮುಂದೆ ಎತ್ತಲಾಗಿರುವ ಪ್ರಶ್ನೆ ಕಾನೂನು ಮತ್ತು ವಾಸ್ತವ ಅಂಶಗಳ ಮಿಶ್ರಣದಿಂದ ಕೂಡಿದೆ, ಅದನ್ನು ಮಾಹಿತಿ ಹಕ್ಕು ಆಯೋಗ ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿ ನಿರ್ಧರಿಸಬೇಕು'' ಎಂದು ನ್ಯಾಯಾಲಯ ಸೂಚಿಸಿದೆ.

ಅರ್ಜಿಗಳನ್ನು ಭಾಗಶಃ ಮಾನ್ಯ ಮಾಡಲಾಗುವುದು, ಪ್ರತಿವಾದಿ ಮಾಹಿತಿ ಹಕ್ಕು ಆಯೋಗಕ್ಕೆ ಈ ವಿಚಾರವನ್ನು ವರ್ಗಾಯಿಸಲಾಗುವುದು, ಅದು ಹೊಸದಾಗಿ ಕಾನೂನು ರೀತಿಯಲ್ಲಿಎರಡೂ ಕಡೆಯ ವಾದ-ಪ್ರತಿವಾದ ಆಲಿಸಿ ಮೂರು ತಿಂಗಳಲ್ಲಿಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಅಗತ್ಯಬಿದ್ದರೆ ಆಯೋಗ ಯಾವುದೇ ಪ್ರಶ್ನೆಗಳನ್ನು ಎತ್ತಬಹುದು ಎಂದೂ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Recommended Video

Chamarajpeteಯಲ್ಲಿ Zameer ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಅದ್ಧೂರಿ ಚಾಲನೆ | *Karnataka |OneIndia Kannada

English summary
The High Court quashed the sedition case filed against Akhila Karnataka Police Mahasangha president V. Sashidhar and three others for aiding and abetting the police strike six years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X