ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಜಾರಿಗೊಳಿಸಲು ಹೊರಟಿರುವುದು ರಾಷ್ಟ್ರೀಯ ಕೋಮುವಾದಿ ಶಿಕ್ಷಣ ನೀತಿಯೋ?

|
Google Oneindia Kannada News

ಕೇಂದ್ರ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಹೊಸ ಶಿಕ್ಷಣ ನೀತಿಯಲ್ಲಿ ಇರುವಂತಹ ಬಹುತ್ವ ಮೌಲ್ಯಗಳ ವಿರೋಧಿ ಅಂಶಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಮಾಜಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪನವರು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪ್ರಮುಖಾಂಶ ಹೀಗಿದೆ:

ಸ್ವತಂತ್ರ ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಭಾರತದ ಜನರ ಸಂವಿಧಾನಾತ್ಮಕವಾದ ಬದುಕಿನ ಅನುಕೂಲಗಳಿಗೆ ತಕ್ಕಂತೆ ಹಲವಾರು ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ ಹಾಗೂ ಇನ್ನಷ್ಟು ನಿಯಮಗಳನ್ನು ಮಾರ್ಪಾಟುಗೊಳಿಸಲಾಗಿದೆ. ಇದರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೊಳಿಸಲಾದ ಬದಲಾವಣೆಗಳೂ ಕೂಡಾ ಪ್ರಮುಖವಾಗಿ ಸೇರಿದೆ.

ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್ ಖಾಸಗಿ ಶಾಲೆಗಳ ಶುಲ್ಕ ವಿವಾದ: ಜುಲೈ 22ಕ್ಕೆ ಆದೇಶ ಕಾಯ್ದಿರಿಸಿದ ಹೈಕೋರ್ಟ್

ಈ ಪೈಕಿ ಇದೀಗ ಭಾರತ ಸರ್ಕಾರವು ಜಾರಿಗೊಳಿಸಲು ಹೊರಟಿರುವ ಹೊಸ ಶಿಕ್ಷಣ ನೀತಿ - 2020. ದೇಶದ ಸಂವಿಧಾನಾತ್ಮಕ ಆಶಯಗಳಿಗೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ವ್ಯತಿರಿಕ್ತವಾಗಿದ್ದು ಶಿಕ್ಷಣದ ಮೂಲಕ ಸಾಧ್ಯವಾಗುವಂತಹ ಸಮೃದ್ಧ ಭಾರತದ ನಿರ್ಮಾಣಕ್ಕೆ ಪೂರಕವಾಗಿರದೇ ಮತ್ತೊಮ್ಮೆ ಬಹುತ್ವದ ಮೌಲ್ಯವನ್ನು ನಾಶ ಮಾಡುವ ಕೇಸರೀಕರಣದ ಉದ್ದೇಶವನ್ನು ಜಾರಿಗೊಳಿಸಲು ಹೊರಟಿದೆ.

ಇನ್ನು ಬದಲಾವಣೆ ಹೆಸರಿನಲ್ಲಿ ಬರುತ್ತಿರುವ ಈ ಹೊಸ ಶಿಕ್ಷಣ ನೀತಿಯು ಈ ದೇಶದ ಸಂವಿಧಾನಿಕ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಶೈಕ್ಷಣಿಕ ಮಾದರಿಯನ್ನು ಹಾಳು ಮಾಡುವ ಮತ್ತು ಮನುವಾದದ ಬಹುತೇಕ ರೀತಿ ನೀತಿಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಸೇರಿಸಲು ಮಾಡುತ್ತಿರುವಂತಹ ಹುನ್ನಾರವಾಗಿದೆ.

 ಬದಲಾವಣೆಯ ಸ್ವರೂಪ ಸಂವಿಧಾನ ವಿರೋಧಿ ಉದ್ದೇಶವನ್ನು ಒಳಗೊಂಡಿದೆ

ಬದಲಾವಣೆಯ ಸ್ವರೂಪ ಸಂವಿಧಾನ ವಿರೋಧಿ ಉದ್ದೇಶವನ್ನು ಒಳಗೊಂಡಿದೆ

ಶಿಕ್ಷಣ ವ್ಯವಸ್ಥೆಯಲ್ಲಿ ಮಾಡಲು ಹೊರಟಿರುವ ಈ ಮಾರ್ಪಾಟುಗಳ ಬಗ್ಗೆ ಕೇಳಿದರೆ, ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಬದಲಿಸುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವುದಕ್ಕೆ ಪೂರಕವಾಗಿ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಮಾತನ್ನು ಸರ್ಕಾರ ಹೇಳುತ್ತಿದೆ. ಆದರೆ ಈ ಹಿಂದಿನ ಬದಲಾಣೆಗಳು ಮತ್ತು ಈಗಿನ ಬದಲಾವಣೆಯ ಸ್ವರೂಪವನ್ನು ಗಮನಿಸುತ್ತಿದ್ದರೆ ಇದು ನಿಜಕ್ಕೂ ಒಮ್ಮೆ ಎಲ್ಲರೂ ಆತಂಕ ಪಡಬೇಕಾದಂತಹ ಸಂವಿಧಾನ ವಿರೋಧಿ ಉದ್ದೇಶವನ್ನು ಒಳಗೊಂಡಿದೆ.

 ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಇಂದಿರಾ ಗಾಂಧಿ ಅವರ ನೇತೃತ್ವ

ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಇಂದಿರಾ ಗಾಂಧಿ ಅವರ ನೇತೃತ್ವ

ದೇಶದ ಎಲ್ಲಾ ವರ್ಗದ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕುವಂತಹ ಶಿಕ್ಷಣ ವ್ಯವಸ್ಥೆಯ ನೀತಿಯಲ್ಲಿ ಈ ಹಿಂದೆ ಉಂಟಾಗಿರುವ ಬದಲಾವಣೆಗಳು ಮತ್ತದರ ಉದ್ದೇಶವನ್ನು ನಾವು ಗಮನಿಸುವುದಾದರೆ ಈ ಕೆಳಕಾಣಿಸಿದ ಅಂಶಗಳನ್ನು ಪರಿಗಣಿಸಬಹುದು: 1968 ರಲ್ಲಿ ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು.

 ರಾಜೀವ್ ಗಾಂಧಿ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆ

ರಾಜೀವ್ ಗಾಂಧಿ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆ

1968 ರ ಶಿಕ್ಷಣ ನೀತಿಯು ದೇಶದ ಸಮಗ್ರ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನೀತಿಗಳನ್ನು ರೂಪಿಸಿ, 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿ ಅದಾದ 18 ವರ್ಷಗಳ ಬಳಿಕ ಶಿಕ್ಷಣ ಕ್ಷೇತ್ರದ ಆಧುನಿಕತೆಗೆ ಅನುಸಾರವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆಗಳು ಆದವು.

 ಪರಿಶಿಷ್ಟ ಜಾತಿ ಸಮುದಾಯಗಳಿಂದಲೇ ಹೆಚ್ಚು ಹೆಣ್ಣು ಮಕ್ಕಳನ್ನು ಶಿಕ್ಷಕ ವೃತ್ತಿಗೆ

ಪರಿಶಿಷ್ಟ ಜಾತಿ ಸಮುದಾಯಗಳಿಂದಲೇ ಹೆಚ್ಚು ಹೆಣ್ಣು ಮಕ್ಕಳನ್ನು ಶಿಕ್ಷಕ ವೃತ್ತಿಗೆ

ಇದಾದ ತರುವಾಯ 1986 ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯು ನಿಜಕ್ಕೂ ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಕ್ರಾಂತಿಕಾರಕ ನಡೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಕಾರಣ ಈ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜೀವ್ ಗಾಂಧಿಯವರು ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಪರಿಶಿಷ್ಟ ಜಾತಿ ಸಮುದಾಯಗಳಿಂದಲೇ ಹೆಚ್ಚು ಹೆಣ್ಣು ಮಕ್ಕಳನ್ನು ಶಿಕ್ಷಕ ವೃತ್ತಿಗೆ ಬರುವಂತೆ ನಿಯಮಾವಳಿಗಳನ್ನು ರೂಪಿಸಿದರು.

 ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ, ನೆನೆಸಿಕೊಳ್ಳಬಹುದಾದಂತಹ ಕ್ರಮ

ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ, ನೆನೆಸಿಕೊಳ್ಳಬಹುದಾದಂತಹ ಕ್ರಮ

ಬಡ ಕುಟುಂಬದ ಮಕ್ಕಳು ದಿನನಿತ್ಯ ಶಾಲೆಗೆ ಬರಲು ಪೂರಕವಾಗುವಂತೆ ಪ್ರೋತ್ಸಾಹ ಧನ, ಹಾಸ್ಟೆಲ್ ವ್ಯವಸ್ಥೆ ಮತ್ತು ಇನ್ನಿತರೆ ಅನುಕೂಲಗಳನ್ನು ಜಾರಿಗೊಳಿಸಿದರು. ಇನ್ನು ಶಾಲೆಗೆ ಬರಲು ಸಾಧ್ಯವಾಗದ ಆದರೆ ಓದಲು ಆಸಕ್ತಿ ಉಳ್ಳ ಹೆಣ್ಣು ಮಕ್ಕಳಿಗಾಗಿ "ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ"ಗಳನ್ನು ತೆರೆದು ಹೆಣ್ಣುಥ ಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಲ್ಲರೂ ನೆನೆಸಿಕೊಳ್ಳಬಹುದಾದಂತಹ ಕ್ರಮಗಳನ್ನು ಜಾರಿಗೊಳಿಸಿದರು. ಇದೇ ಅವಧಿಯಲ್ಲಿ ದೇಶದ ಶಿಕ್ಷಣದ ಮೇಲೆ 6% ಜಿಡಿಪಿ ಯನ್ನು ವಿನಿಯೋಗಿಸಬೇಕೆಂಬ ಗಂಭೀರ ಆಲೋಚನೆಗಳು ಮುನ್ನಲೆಗೆ ಬಂದವು.

Recommended Video

Ethiopian Singer Betty G’s Music _ ಇಥಿಯೋಪಿಯನ್ ಸಂಗೀತಗಾರ ಬೆಟ್ಜ್_ನ ಸಂಗೀತ _ EP 04 _ OIDW
 ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ ಎಂದು ನಾವು ಹೇಳಬಹುದು

ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ ಎಂದು ನಾವು ಹೇಳಬಹುದು

ಒಟ್ಟಾರೆಯಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ - 2020 ನಿಜಕ್ಕೂ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಶಿಕ್ಷಣ ವ್ಯವಸ್ಥೆವನ್ನು ದುರ್ಬಲಗೊಳಿಸುವ ಮತ್ತು ಮೌಢ್ಯ ಮತ್ತು ಕೋಮುವಾದದ ಬೀಜಗಳನ್ನು ಶಿಕ್ಷಣದ ವ್ಯವಸ್ಥೆಯ ಮೂಲಕ ಭವಿಷ್ಯದ ಮಕ್ಕಳಲ್ಲಿ ಗಟ್ಟಿಗೊಳಿಸಲು ಹೊರಟಿರುವ ಈ ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ ಎಂದು ನಾವು ಹೇಳಬಹುದು. ಈ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ -2020 ರಲ್ಲಿ ಸಂವಿಧಾನಾತ್ಮಕ ಮತ್ತು ಬಹುತ್ವದ ಮೌಲ್ಯಗಳಿಗೆ ವಿರುದ್ಧವಾಗಿರುವ ಎಲ್ಲಾ ಅಂಶಗಳನ್ನು ತೆಗೆದುಹಾಕಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ಮಹದೇವಪ್ಪ ಪತ್ರದಲ್ಲಿ ಬರೆದಿದ್ದಾರೆ.

English summary
Congress Leader Dr HC Mahadevappa writes letter to CM Yediyurappa to immediately reconsider National Education Policy2020 which goes against the pluralism & constitutional values of our Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X