ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮಾ ಗಾಂಧಿ ಎನ್ನುವುದೇ ಒಂದು ಅಸಾಧಾರಣ ಶಕ್ತಿ: ಎಚ್‌ಸಿ ಮಹಾದೇವಪ್ಪ

|
Google Oneindia Kannada News

ಜಗತ್ತಿನ ಯಾವುದೇ ಮೂಲೆಯಲ್ಲಿ ತನಗೆ ಬೇಕಾದಂತ ಇಷ್ಟದ ಬದುಕನ್ನು ಬದುಕುವಂತಹ ಎಲ್ಲಾ ಅವಕಾಶ ಮತ್ತು ಸೌಲಭ್ಯಗಳನ್ನು ಪಡೆದಿದ್ದ ಗಾಂಧೀಜಿ ವೈಯಕ್ತಿಕ ಬದುಕನ್ನು ಬದಿಗಿಟ್ಟು ಜನ ಸಾಮಾನ್ಯರಿಗಾಗಿ ಬದುಕು, ಬರಹ ಮತ್ತು ಹೋರಾಟವನ್ನು ನಡೆಸಿದ್ದು ಇಂದು ನೆಮ್ಮದಿಯ ಬದುಕನ್ನು ಕಾಣುತ್ತಿರುವ ನಾವೆಲ್ಲರೂ ಸಹ ಮರೆಯದೇ ಗೌರವಿಸಬೇಕಾದ ಸಂಗತಿ.

ನೂರು ಬಾರಿ ಅವಮಾನಿತನಾಗಿದ್ದರೂ ಸಹ ಮತ್ತೆ ಮತ್ತೆ ಹಲ್ಲು ಕಿರಿಯುತ್ತಾ ತನ್ನ ಅಹಂ ಅನ್ನು ಬದಿಗಿಟ್ಟು ಬ್ರಿಟಿಷರ ಅಹಂಗೆ ಮನಮುಟ್ಟುವಂತಹ ಪೆಟ್ಟುಕೊಟ್ಟ ಗಾಂಧೀಜಿಯ ಕಾರಣದಿಂದಾಗಿ ಭಾರತವು ನಡೆಸಿದ ಅವಿರತ ಹೋರಾಟಕ್ಕೆ ಸ್ವಾತಂತ್ರ್ಯ ರೂಪದಲ್ಲಿ ಒಂದು ತಾರ್ಕಿಕ ಅಂತ್ಯ ಸಿಕ್ಕಿತು.

HC Mhadevappa

ಹೌದು ಈ ಹೋರಾಟದಲ್ಲಿ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಚಂದ್ರ ಶೇಖರ್ ಆಜಾದ್, ಪಟೇಲ್, ಎಲ್ಲರೂ ಇದ್ದರು. ಇವರೊಂದಿಗೆ ಗಾಂಧಿಯೂ ಇದ್ದರು. ಆದರೆ ಇವರುಗಳಿಂದ ಬ್ರಿಟಿಷರು ಬಹುಬೇಗ ದೇಶ ಬಿಡುವಷ್ಟು convince ಆದರು ಎಂದು ನನಗೆ ಅನ್ನಿಸುವುದಿಲ್ಲ ಎಂದು ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ.

ಅದರಲ್ಲೂ ಭಗತ್ ಸಿಂಗ್ ಸಂಸತ್ತಿನ ಮೇಲೆ ಬಾಂಬ್ ಎಸೆದಾಗ, ಸುಭಾಷ್ ಚಂದ್ರ ಬೋಸ್ ಮತ್ತು ಆಜಾದರ ಆದಿಯಾಗಿ ತಮ್ಮ ಹೋರಾಟಕ್ಕಾಗಿ ಮದ್ದು ಗುಂಡು ಶಸ್ತ್ರಾಸ್ತ್ರಗಳನ್ನು ಹಿಡಿಯಲು ಆರಂಭಿಸಿದ್ದ ವೇಳೆ ಭಾರತೀಯರ ಹೋರಾಟವನ್ನು ಹುಟ್ಟಡಗಿಸಲೆಂದೇ ಸಿದ್ಧರಾಗಿದ್ದ ಬ್ರಿಟಿಷರು ನಮ್ಮಿಂದ ಲೂಟಿಗೈದ ಸಂಪತ್ತಿನಿಂದಲೇ ಒಂದರ ಎದುರು ಹತ್ತರಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಇಟ್ಟುಕೊಂಡಿದ್ದರು ಮತ್ತು ಅವುಗಳನ್ನು ಯಾವುದೇ ಮುಲಾಜಿಲ್ಲದೇ ಬಳಸಲು ಸಿದ್ಧರಾಗಿದ್ದರು.

ಇನ್ನು ಐಕ್ಯತೆಯ ಪ್ರಜ್ಞೆ ಮರೆತು ಗುಲಾಮರಂತೆ ಬ್ರಿಟಿಷರಿಗೆ ಅನುಕೂಲ ಸಿಂಧುಗಳಾಗಿದ್ದ ಇಂದಿನ so called ದೇಶಪ್ರೇಮಿಗಳ ಬಗ್ಗೆ ಒಂದು ಸ್ಪಷ್ಟ idea ಹೊಂದಿದ್ದ ಬ್ರಿಟಿಷರಿಗೆ ಇನ್ನೊಂದು ನೂರು ವರ್ಷಗಳ ಕಾಲ ಭಾರತವನ್ನು ನಿಯಂತ್ರಿಸಲು ಕಷ್ಟವೇನೂ ಆಗಿರಲಿಲ್ಲ.

ಆದರೆ ಈ ಬರಿ ಮೈ ಫಕೀರ ಅದಕ್ಕೆ ಅವಕಾಶ ಕೊಡಲಿಲ್ಲ. ತನ್ನನ್ನು ನೂರು ಬಾರಿ ಅಣಕಿಸಿ, ಅವಮಾನಿಸಿ, ಬೂಟು ಕಾಲಲ್ಲಿ ಒದ್ದರೂ ಸಹ ಮತ್ತೆ ಮತ್ತೆ ಬ್ರಿಟಿಷರ ಕೋಪ ಮತ್ತು ಕ್ರೌರ್ಯವೇ ನಾಚುವಂತೆ ಅವರೆದುರು ನಿಂತರು. ತಾನು ಇಂಗ್ಲೆಂಡಿನಲ್ಲಿ ಕಲಿತ ಕಾನೂನು ವಿದ್ಯಾಭ್ಯಾಸ ಮತ್ತು ರೂಢಿಸಿಕೊಂಡಿದ್ದ ಇಂಗ್ಲಿಷರ ನಡವಳಿಕೆಯ ಮೂಲಕವೇ ಅತ್ಯಂತ ಅವರೊಂದಿಗೆ ಅಹಿಂಸಾ ಮಾರ್ಗದಲ್ಲಿ ಸಂವಾದ ಮತ್ತು ಪ್ರತಿರೋಧ ನಡೆಸಿದ. ಬಹುಶಃ ನನ್ನ ಗ್ರಹಿಕೆಯ ಪ್ರಕಾರ ಗಾಂಧಿಯನ್ನು ಅವಮಾನಿಸಿದ ಬ್ರಿಟೀಷರೇ ಮುಂದೆ ಆತನ ಮಾನವೀಯತೆಯ ಮತ್ತು ಹಿಂಸೆ ಮಾಡದೇ ನಿರಂತರ ಹೋರಾಟ ನಡೆಸುವ ಪರಿಗೆ ಶರಣಾಗಿದ್ದು ಸುಳ್ಳಲ್ಲ.

ಹೀಗಾಗಿಯೇ ನಮ್ಮಲ್ಲಿದ್ದ ಕೆಲ ದೇಶದ್ರೋಹಿಗಳು ಹೋರಾಟದ ಮಹತ್ವವನ್ನು ಅರಿಯದೇ ಗಾಂಧಿಯನ್ನು ಕಾರಣವಿಲ್ಲದೇ ಕೊಂದಾಗ ಇಡೀ ಜಗತ್ತೇ ಬೇಸರ ವ್ಯಕ್ತಪಡಿಸಿತು. ಅಲ್ಲದೇ ಮೊದಲ ಬಾರಿಗೆ ತಮ್ಮ ದೇಶದ ಬಾವುಟವನ್ನು ಅರ್ಧಕ್ಕೆ ಇಳಿಸಿ ಶೋಕವನ್ನು ಆಚರಿಸಿತು.

ಇನ್ನು ಇಂಗ್ಲೆಂಡಿನ ವಿನ್ಸ್ ಸ್ಟನ್ ಚರ್ಚಿಲ್ ಕೂಡಾ "ನಾವು ಸ್ವತಂತ್ರ ಪೂರ್ವದಲ್ಲಿ ಬಂಧನದಲ್ಲೂ ಸಹ ಜೋಪಾನವಾಗಿ ಉಳಿಸಿಕೊಂಡಿದ್ದ ಸಹನಾ ಮೂರ್ತಿಯಾದ ಗಾಂಧಿಯನ್ನು, ಸ್ವತಂತ್ರದ ನಂತರದ ಭಾರತ ಕೊಂದು ಹಾಕಿತು" ಎಂದು ಉದ್ಗರಿಸುತ್ತಾನೆ. ಅಂತಹ ಶಾಂತ ಮತ್ತು ಪರಿಣಾಮಕಾರಿ ಪ್ರತಿರೋಧದ ಮೂಲಕ ಎದುರಾಳಿಯನ್ನು ಗೆದ್ದ ಶಕ್ತಿ ಗಾಂಧಿ

ಒಂದು ಪಕ್ಷ ಗಾಂಧಿ ಇಲ್ಲದೇ ಹೋಗಿದ್ದರೆ ಏನಾಗುತ್ತಿತ್ತೋ ಊಹಿಸುವುದು ಕಷ್ಟ. ಆದರೆ ಮನುಷ್ಯನ ನೂರೆಂಟು ಭಿನ್ನಾಭಿಪ್ರಾಯಗಳು, ಸಿಟ್ಟು, ಸೆಡವು ಮತ್ತು ಅಹಂಕಾರಗಳ ನಡುವೆ ಸ್ವಾತಂತ್ರ್ಯಕ್ಕಾಗಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋದ ಆ ಸ್ವಾತಂತ್ರ್ಯ ಐಕ್ಯತಾ ಹೋರಾಟವು ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ.

ಈ ಎಲ್ಲಾ ಸೂಕ್ಷ್ಮಗಳಿಗಾಗಿ ಮತ್ತು ತನ್ನ ವೈಯಕ್ತಿಕ ಬದುಕಿನ ಸ್ವಾರ್ಥವನ್ನು ಮೀರಿ ಒಂದು ಸೈದ್ಧಾಂತಿಕ ಪ್ರತಿಮೆಯಾಗಿ ಬೆಳೆದು ಮುಂದೆ ಭಾರತದಲ್ಲಿ ಸಂವಿಧಾನವೆಂಬ ಅಮೃತವು ಸೃಷ್ಟಿಯಾಗುವಂತಹ ದಾಸ್ಯ ರಹಿತ ವಾತಾವರಣ ಸೃಷ್ಟಿಸಿದ ಗಾಂಧಿಯೆಂದರೆ ನನಗೆ ವಿಶೇಷ ಪ್ರೀತಿ ಮತ್ತು ಗೌರವ.

ಇಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯ ಜಯಂತಿಯಂದು ಅವರನ್ನು ಮನದುಂಬಿ ನೆನೆಯುತ್ತೇನೆ-ಎಚ್‌ಸಿ ಮಹಾದೇವಪ್ಪ

English summary
Dr. HC Mahadevappa Says Mahatma Gandhi is a phenomenon, role model for Next generations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X