ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಶಸ್ವಿನಿ ಯೋಜನೆ ರದ್ದು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By Nayana
|
Google Oneindia Kannada News

ಬೆಂಗಳೂರು, ಮೇ 29: ರಾಜ್ಯ ಸರ್ಕಾರ ರದ್ದುಪಡಿಸಲು ಮುಂದಾಗಿರುವ ಯಶಸ್ವಿನಿ ಯೋಜನೆ ಕುರಿತಾಗಿ ಪ್ರತಿಕ್ರಿಯೆ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಯೂನಿವರ್ಸಲ್ ಹೆಲ್ತ್ ಕೇರ್ ಎಂಬ ವಿನೂತನ ಯೋಜನೆ ಮೂಲಕ ರಾಜ್ಯದಲ್ಲಿ ಎಲ್ಲ ವರ್ಗ, ಜಾತಿ, ಸಮುದಾಯ ಹಾಗೂ ಆರ್ಥಿಕ ಸ್ಥಿತಿವಂತ ವರ್ಗಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸಲು ರೂಪಿಸಲಾಗಿರುವ ಯೂನಿವರ್ಸಲ್ ಹೆಲ್ತ್ ಕೇರ್ ಯೋಜನೆಯ ಕಾರಣದಿಂದ ಉಳಿದೆಲ್ಲಾ ಆರೋಗ್ಯ ವಿಮೆ ಹಾಗೂ ಆರೋಗ್ಯ ನೆರವು ಯೋಜನೆಗಳನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಗೋವಾದಲ್ಲೂ ಶುರುವಾಯ್ತು ಮಾರಣಾಂತಿಕ ನಿಪಾಹ್ ವೈರಸ್ ಭೀತಿಗೋವಾದಲ್ಲೂ ಶುರುವಾಯ್ತು ಮಾರಣಾಂತಿಕ ನಿಪಾಹ್ ವೈರಸ್ ಭೀತಿ

ಈ ಹಿನ್ನೆಲೆಯಲ್ಲಿ ಯಶಸ್ವಿನಿ ಯೋಜನೆ ಕೂಡ ರದ್ದಾಗಲಿದ್ದು, ರಾಜ್ಯದ 65 ಲಕ್ಷ ಸಹಕಾರಿ ಸಂಸ್ಥೆಗಳ ಸದಸ್ಯರುಗಳು ಈ ಯೋಜನೆಯ ರದ್ದತಿಯಿಂದ ಲಾಭವನ್ನು ಕಳೆದುಕೊಳ್ಳಲಿದ್ದಾರೆ.

HC issues notice to govt on Yashaswini health scheme

ಇದನ್ನು ಪ್ರಶಸ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್ ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆ ರದ್ದುಗೊಳಿಸದರೆ ಅದರಿಂದ ಸಾರ್ವಜನಿಕರಿಗೆ, ಸಹಕಾರಿ ಸಂಘಗಳ ಸದಸ್ಯರಿಗೆ ದೊರಕಬಹುದಾದ ಯೋಜನೆಯ ಲಾಭ ಕುರಿತಂತೆ ಸಮಗ್ರವಾಗಿ ಉತ್ತರಿಸುವಂತೆ ಜೂನ್ 6 ರೊಳಗಾಗಿ ಉತ್ತರಿಸುವಂತೆ ಮಂಗಳವಾರ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

English summary
High court has issued notice to state government seeking clarification on closing decision of Yashaswini health scheme on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X