ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಲೇಕೇರಿ ಕೇಸ್: ಅನಿಲ್ ಲಾಡ್ ಅಂಡ್ ಫ್ಯಾಮಿಲಿಗೆ ಜಾಮೀನು

By Mahesh
|
Google Oneindia Kannada News

ಬೆಂಗಳೂರು, ಡಿ. 15: ಬೇಲೇಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ, ಉದ್ಯಮಿ ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರಾಗಿದೆ. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟಿನ ಏಕಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.

ಸಿಬಿಐ ವರದಿಯಲ್ಲಿ ಅನಿಲ್ ಲಾಡ್ ಹಾಗೂ ಕುಟುಂಬಸ್ಥರ ಹೆಸರು ಇರುವುದರಿಂದ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್ ನಿಂದ ಜಾಮೀನು ಪಡೆದು ಬಂಧನ ಭೀತಿಯಿಂದ ಪಾರಾಗಿದ್ದಾರೆ.

HC grants anticipatory bail to MLA Anil Lad

ಅನಿಲ್ ಲಾಡ್ ಹಾಗೂ ಅವರ ಪತ್ನಿ ಆರತಿ ಲಾಡ್ ಮತ್ತು ವಿಎಸ್‍ಎಲ್ ಮೈನಿಂಗ್ ಕಂಪನಿ ತಲಾ 2 ಲಕ್ಷ ರೂ. ವೈಯಕ್ತಿಕ ಬಾಂಡ್, ಒಬ್ಬ ವ್ಯಕ್ತಿಯ ಶ್ಯೂರಿಟಿ ಒದಗಿಸಬೇಕು ಭದ್ರತಾ ಖಾತ್ರಿ(ಶ್ಯೂರಿಟಿ)ಯನ್ನು ಡಿ.30ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಸಾಕ್ಷಿ ನಾಶಕ್ಕೆ ಯತ್ನಿಸಬಾರದು ಎಂದು ಷರತ್ತು ವಿಧಿಸಲಾಗಿದೆ.

ವಿಎಸ್‍ಎಲ್ ಮೈನಿಂಗ್ ಕಂಪನಿ ಮೂಲಕ ಅನಿಲ್ ಲಾಡ್ ಅವರು ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪ ಹೊತ್ತಿದ್ದಾರೆ. 2012ರಿಂದ 2013ರ ನಡುವೆ 50 ಸಾವಿರ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿದೆ ಎಂದು ಆರೋಪ ಹೊರೆಸಿ, ಅನಿಲ್ ಲಾಡ್ ಹಾಗೂ ಕಂಪನಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ತಂಡ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಚಾರ್ಜ್ ಶೀಟ್ ಹಾಕಿತ್ತು. ಹೀಗಾಗಿ ಬಂಧನ ಭೀತಿ ಎದುರಿಸಿದ್ದ ಅನಿಲ್ ಲಾಡ್ ಅವರು ಜಾಮೀನು ಕೋರಿ ಅರ್ಜಿ ಹಾಕಿದ್ದರು.

English summary
Karnataka High Court on Monday granted conditional anticipatory bail to Anil Lad, Congress MLA from Ballari city and mining baron, and his wife Aarthi, in connection with their names being mentioned in the CBI report on illegal mining.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X