ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜ್ರದ ಶುದ್ಧತೆಯಲ್ಲೂ ನಕಲಿ: ಮಹಿಳಾ ಮಣಿಗಳಿಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಮೇ 16: ವಜ್ರದ ಆಭರಣಗಳ ಶುದ್ಧತೆಯ ಪರೀಕ್ಷಾ ಪ್ರಮಾಣಪತ್ರದಲ್ಲೂ ನಕಲು ನಡೆಯುತ್ತಿದೆ. ಶುದ್ಧತೆಯ ಪ್ರಮಾಣಪತ್ರ ನೀಡಲು ಕೆಲವು ಖಾಸಗಿ ಸಂಸ್ಥೆಗಳು ಸರ್ಕಾರದಿಂದ ಅನುಮೋದನೆ ಪಡೆದಿರುತ್ತವೆ. ಆದರೆ ಅವುಗಳ ಹೆಸರಿನಲ್ಲೇ ನಕಲಿ ಪ್ರಮಾಣ ಪತ್ರ ನೀಡಿದ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಇಬ್ಬರು ಮಹಿಳೆಯರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.

ಪ್ರಕರಣದ ಆರೋಪಿಗಳಾದ ಪ್ರತಿಕಾ ರೈ ಬೆಳ್ಯಾ ಮತ್ತು ಹರಿಣಿ ಶೆಟ್ಟಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ರಜಾಕಾಲದ ಏಕಸದಸ್ಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಅರ್ಜಿದಾರರನ್ನು ಪೊಲೀಸರು ಬಂಧಿಸಿದರೆ, ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಒಬ್ಬರ ಭದ್ರತಾ ಖಾತರಿ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

 HC grants anticipatory bail for two women in false Diamond purity certificate case

ತನಿಖೆ ಪೂರ್ಣಗೊಳಿಸಲು ತನಿಖಾಧಿಕಾರಿಗೆ ಅರ್ಜಿದಾರರು ಸಹಕರಿಸಬೇಕು. ತನಿಖಾಧಿಕಾರಿ ಕರೆದಾಗ ಅವರ ಮುಂದೆ ಹಾಜರಾಗಬೇಕು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು. ವಿಚಾರಣಾ ನ್ಯಾಯಾಲಯದ ಎಲ್ಲಾ ವಿಚಾರಣೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಆರೋಪಿಗಳಿಬ್ಬರಿಗೆ ಷರತ್ತು ವಿಧಿಸಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಪೀಠ "ಅರ್ಜಿದಾರರು ಮಹಿಳೆಯರಾಗಿದ್ದು, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾದ ಕೃತ್ಯಗಳಿಗೆ ಸಂಬಂಧಿಸಿದ ಆರೋಪಗಳು ಅವರ ಮೇಲಿಲ್ಲ. ಅರ್ಜಿದಾರರು ವಿತರಿಸಿದ್ದಾರೆನ್ನಲಾದ ನಕಲಿ ಪ್ರಮಾಣಪತ್ರಗಳು ದೂರುದಾರರ ಬಳಿಯಿದ್ದು, ಅವು ತನಿಖೆಗೆ ಲಭ್ಯವಿದೆ. ಹಾಗಾಗಿ, ಅರ್ಜಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ'' ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆರ್ಸೆಸ್ ಇಂಟರ್ ನ್ಯಾಷನಲ್ ಜೆಮೊಲಾಜಿಕಲ್ ಸಂಸ್ಥೆ, ವಜ್ರದ ಆಭರಣಗಳ ಶುದ್ಧತೆ ಪರೀಕ್ಷಿಸಿ ಪ್ರಮಾಣಪತ್ರ ನೀಡುತ್ತದೆ. ಅದಕ್ಕೆ ಅದು ಸಂಬಂಧಿಸಿದ ಸಂಸ್ಥೆಯಿಂದ ಅನುಮೋದನೆ ಪಡೆದಿದೆ.

ಅಶೋಕ ನಗರ ಪೊಲೀಸ್ ಠಾಣೆಗೆ 2022ರ ಮಾ.4ರಂದು ದೂರು ನೀಡಿದ ಆ ಸಂಸ್ಥೆಯ ಶಾಖಾ ವ್ಯವಸ್ಥಾಪಕ ಶಮಿಕ್ ಜವೇರಿ ಅವರು 2022ರ ಫೆ.1ರಂದು ಥರ್ಡ್ ಪಾರ್ಟಿ ಇ-ಮೇಲ್ ಮಾಡಿ, ಪ್ರತಿಕಾ ರೈ ಬೆಳ್ಯಾ ಮತ್ತು ಹರಿಣಿ ಶೆಟ್ಟಿ ತಮ್ಮಿಂದ 60 ಸಾವಿರ ಹಣ ಪಡೆದು ಎರಡು ಪ್ರಮಾಣಪತ್ರ ವಿತರಿಸಿದ್ದಾರೆ. ಅವುಗಳ ನೈಜತೆ ತಿಳಿಸುವಂತೆ ಕೋರಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಆರೋಪಿಗಳಿಬ್ಬರೂ ಸಂಸ್ಥೆ ಹೆಸರಿನಲ್ಲಿ ನಕಲಿ ಪ್ರಮಾಣಪತ್ರ ವಿತರಿಸಿದ್ದಾರೆಂಬುದು ತಿಳಿದು ಬಂದಿದೆ, ಹಾಗಾಗಿ ಅವರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರೋಪಿಸಿದ್ದರು.

ಪೊಲೀಸರು ನಕಲಿ ಮತ್ತು ವಂಚನೆ ಆರೋಪ ಸಂಬಂಧ ಎಫ್‌ಐಆರ್ ದಾಖಲಿಸಿದ್ದರು. ಹಾಗಾಗಿ ಬಂಧನ ಭೀತಿಯಿಂದ ಆರೋಪಿ ಮಹಿಳೆಯರು ನಿರೀಕ್ಷಣಾ ಜಾಮೀನುಗಾಗಿ ನಗರದ 24ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್‌ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರ
ು.

English summary
HC grants anticipatory bail for two women who are facing false Diamond purity certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X