ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತೂ ಇಂತೂ ಕೇಂದ್ರ ಸರ್ಕಾರಿ ಸಮಾನ ಸಂಬಳ ಪಡೆದ ಹೈಕೋರ್ಟ್ ಸಿಬ್ಬಂದಿ

By Nayana
|
Google Oneindia Kannada News

ಬೆಂಗಳೂರು, ಮೇ 31: ಹೈಕೋರ್ಟ್ ಸಿಬ್ಬಂದಿಗೆ ಇನ್ನುಮುಂದೆ ಕೇಂದ್ರ ಸರ್ಕಾರಿ ನೌಕರರ ಸಮನಾದ ವೇತನ ದೊರೆಯಲಿದೆ. ರಾಜ್ಯ ಸರ್ಕಾರದ ಸಿಬ್ಬಂದಿಯ ವೇತನ ಪರಿಷ್ಕರಿಸಿ, ಏಪ್ರಿಲ್ ತಿಂಗಳ ಪರಿಷ್ಕೃತ ವೇತನವನ್ನು ಮಂಜೂರು ಮಾಡಿದೆ.

ಹೈಕೋರ್ಟ್ ವೇತನ ನೀಡದೆ ಇರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ತಕ್ಷಣವೇ ಪರಿಷ್ಕೃತ ವೇತನ, ಬಾಕಿಯನ್ನು ಬಿಡುಗಡೆ ಮಾಡಿ ವರದಿ ಸಲ್ಲಿಸುವಂತೆ ಹಣಕಾಸು ಇಲಾಖೆ ಕಾರ್ಯದರ್ಶಿ ಐಎಎಸ್‌ ಪ್ರಸಾದ್‌ಗೆ ಆದೇಶ ನೀಡಿತ್ತು. ಹಾಗಾಗಿ ಸದ್ಯಕ್ಕೆ ಒಂದು ತಿಂಗಳ ವೇತನವನ್ನು ಸಿಬ್ಬಂದಿಯ ಖಾತೆಗೆ ಜಮೆ ಮಾಡಲಾಗಿದೆ.

ಹೊಸ ಸರ್ಕಾರದ ಮುಂದೆ ಬೇಡಿಕೆ ಇಡಲು ಮುಂದಾದ ಗಾರ್ಮೆಂಟ್ಸ್ ನೌಕರರುಹೊಸ ಸರ್ಕಾರದ ಮುಂದೆ ಬೇಡಿಕೆ ಇಡಲು ಮುಂದಾದ ಗಾರ್ಮೆಂಟ್ಸ್ ನೌಕರರು

ಇದರಿಂದ ಈಗ ಹೈಕೋರ್ಟ್‌ನಲ್ಲಿರುವ ಸುಮಾರು 2500 ಸಿಬ್ಬಂದಿಗೆ ಹಾಗೂ ನಿವೃತ್ತಿಯಾಗಿರುವ ಒಂದು ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಪ್ರಯೋಜನವಾಗಲಿದೆ. ಸಿಬ್ಬಂದಿಯ ವೇತನಹ ನಾನಾ ಶ್ರೇಣಿಗಳಲ್ಲಿ ಶೇ.30ರಿಂದ 50ರಷ್ಟು = ಹೆಚ್ಚಳವಾಗಲಿದೆ. ಸೇವಾ ಅನುಭವ ಹಾಗೂ ಶ್ರೇಣಿ ಆಧರಿಸಿ ವೇತನವನ್ನು ನಿಗದಿಪಡಿಸಲಾಗಿದೆ.

HC employees finally get salary equal to central govt employees

ರಾಜ್ಯ ಸರ್ಕಾರ ಹೈಕೋರ್ಟ್‌ಗೆ ನೀಡಿದ್ದ ಭರವಸೆ ಇದೀಗ ಏಪ್ರಿಲ್ ತಿಂಗಳ ವೇತನವನ್ನು ಎಲ್ಲ ಸಿಬ್ಬಂದಿಯ ಖಾತೆಗೆ ಬುಧವಾರ ಜಮೆ ಮಾಡಿದ್ದು, ಇನ್ನೆರೆಡೆ ದಿನಗಳಲ್ಲಿ ಮೇ ತಿಂಗಳ ವೇತನ ಹಾಗೂ ಆನಂತರದ 2014ರ ಅಕ್ಟೋಬರ್‌ ನಿಂದ 2018ರ ಮಾರ್ಚ್‌ವರೆಗಿನ ಬಾಕಿ ವೇತನವನ್ನು ಬಿಡುಗಡೆ ಮಾಡಲಿದೆ ಎಂದು ಹೈಕೋರ್ಟ್‌ ಮೂಲಗಳು ತಿಳಿಸಿವೆ.

English summary
Around 2,500 employees of Karnataka high court have finally got salary of equal to central government employees after a 14 years old legal battle against state government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X