ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ.ಎಚ್.ಪಿ. ಸಂದೇಶ್‌ಗೆ ಪೊಲೀಸ್ ಭದ್ರತೆ ಹೆಚ್ಚಳ ಕೋರಿದ್ದ ಅರ್ಜಿ ವಜಾ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜು.25: ಭ್ರಷ್ಟಾಚಾರ ನಿಗ್ರಹ ದಳದ ವಿರುದ್ಧ ಸಮರ ಸಾರಿರುವ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿಗೆ ಗರಿಷ್ಠ ಪೊಲೀಸ್ ಭದ್ರತೆ ನೀಡುವಂತೆ ಕೋರಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅಲ್ಲದೆ, ನ್ಯಾ.ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಹಾಕಿರುವ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಮಾಡಿದ್ದ ಮನವಿಯನ್ನೂ ಸಹ ತಿರಸ್ಕರಿಸಿದೆ.

ತುಮಕೂರು ಮೂಲದ ವಕೀಲ ಎಲ್. ರಮೇಶ್ ನಾಯಕ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯಪೀಠದ ಮುಂದೆ ಬಂದಿತು. ಆಗ ಅರ್ಜಿದಾರರ ವಾದವನ್ನು ಸಮಗ್ರವಾಗಿ ಆಲಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ.

ಎಸಿಬಿ ವಿರುದ್ಧ ಸಮರ ಸಾರಿರುವ ನ್ಯಾ.ಸಂದೇಶ್‌ಗೆ ಪೊಲೀಸ್ ಭದ್ರತೆ ನೀಡಲು ಅರ್ಜಿಎಸಿಬಿ ವಿರುದ್ಧ ಸಮರ ಸಾರಿರುವ ನ್ಯಾ.ಸಂದೇಶ್‌ಗೆ ಪೊಲೀಸ್ ಭದ್ರತೆ ನೀಡಲು ಅರ್ಜಿ

ನ್ಯಾ.ಎಚ್.ಪಿ. ಸಂದೇಶ್ ಅವರಿಗೆ ಝಡ್ ಝಡ್ ಪ್ಲಸ್ ಅಥವಾ ವೈ ಪ್ಲಸ್ ಸೆಕ್ಯೂರಿಯಟಿ ನೀಡುವಂತೆ ಪೊಲೀಸ್ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಆದರೆ ಈಗಿರುವ ಭದ್ರತೆ ಹೇಗಿದೆ, ಏಕೆ ಅದನ್ನು ಹೆಚ್ಚಿಸಬೇಕು ಎಂಬುದಕ್ಕೆ ಸೂಕ್ತ ಕಾರಣವನ್ನು ನೀಡಿಲ್ಲ. ಹಾಗಾಗಿ ಈ ಮನವಿಯನ್ನು ಮಾನ್ಯ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

ಅಲ್ಲದೆ, ನ್ಯಾ.ಎಚ್. ಪಿ. ಸಂದೇಶ್ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಆದರೆ ಈ ಕುರಿತ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಬಾಕಿ ಇದೆ. ಜೊತೆಗೆ ಏಕಸದಸ್ಯಪೀಠ ಈಗಾಗಲೇ ಜಾಮೀನು ಅರ್ಜಿಗಳನ್ನು ವಜಾಗೊಳಿಸುವ ಮೂಲಕ ವಿಲೇವಾರಿ ಮಾಡಲಾಗಿದೆ. ಹಾಗಾಗಿ ಆ ಅಂಶವನ್ನು ಪರಿಗಣಿಸಲಾಗದು ಎಂದು ನ್ಯಾಯಪೀಠ ಆದೇಶಿಸಿದೆ.

HC dismissed PIL Seeking highest security for Justice HP Sandesh

ಸ್ವತಃ ವಾದ ಮಂಡಿಸಿದ ಅರ್ಜಿದಾರ ರಮೇಶ್ ನಾಯಕ್, ಎಸಿಬಿ ವಿರುದ್ಧ ವಾಗ್ದಾಳಿ ನಡೆಸಿರುವ ನ್ಯಾ. ಸಂದೇಶ್ ಅವರಿಗೆ ಸೂಕ್ತ ಅಂದರೆ ಝಡ್ ಝಡ್ ಪ್ಲಸ್ ಅಥವಾ ವೈ ಪ್ಲಸ್ ಸೆಕ್ಯೂರಿಟಿಯನ್ನು ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಬೇಕು. ಜೊತೆಗೆ ಅವರು ಭ್ರಷ್ಟಾಚಾರ ನಿಗ್ರಹ ದಳ ಮತ್ತು ಅದರ ಮುಖ್ಯಸ್ಥರ ವಿರುದ್ಧ ಟೀಕೆ ಮಾಡುವ ಮೂಲಕ ಅಲ್ಲಿನ ಹುಳುಕುಗಳನ್ನು ಸಮಾಜಕ್ಕೆ ಎತ್ತಿ ತೋರಿಸಿದ್ದಾರೆ.

ಆದರೆ ಅವರಿಗೆ ವರ್ಗಾವಣೆ ಮಾಡಿಸುವ ಬೆದರಿಕೆ ಹಾಕಿರುವುದರಿಂದ ನ್ಯಾಯಾಂಗಕ್ಕೆ ಬೆದರಿಕೆಯೊಡ್ಡಿದಂತೆ, ಹಾಗಾಗಿ ಹಾಗೆ ಅವರಿಗೆ ಬೆದರಿಕೆ ಹಾಕುರುವ ಬಗ್ಗೆ ತನಿಖೆ ನಡೆಸಲು ಎಸ್ ಐಟಿ ರಚಿಸಬೇಕು ಎಂದು ಕೋರಿದ್ದರು.

ಬೆದರಿಕೆ ಘಟನೆ ವಿವರ ಬಹಿರಂಗ: ಆನಂತರ ನ್ಯಾಯಮೂರ್ತಿ ಎಚ್.ಪಿ.ಸಂದೇಶ್‌ ರಿಗೆ ಬೆದರಿಕೆ ವಿಚಾರ ಸಹ ನ್ಯಾಯಮೂರ್ತಿ ಹೇಳಿದ್ದನ್ನು ಬಹಿರಂಗಪಡಿಸಿದರು.

ಸಿಜೆ ನಿವೃತ್ತಿ ಹಿನ್ನೆಲೆ ಬೀಳ್ಕೊಡುಗೆ ವ್ಯವಸ್ಥೆ ಮಾಡಲಾಗಿತ್ತು ಜುಲೈ1 ರಂದು ಡಿನ್ನರ್ ವೇಳೆ ಹಾಲಿ ನ್ಯಾಯಮೂರ್ತಿ ಪಕ್ಕ ಬಂದು ಕುಳಿತರು ದೆಹಲಿಯಿಂದ ನನಗೆ ಒಂದು ಕರೆ ಬಂದಿದೆ ಎಂದು ಹೇಳಿದರು. ಕರೆ ಮಾಡಿದವರು ನಿಮ್ಮ ಬಗ್ಗೆ ವಿಚಾರಿಸಿದರೆಂದು ಹೇಳಿದರು, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲವೆಂದು ಹೇಳಿದೆ ಆದರೆ ಆ ನ್ಯಾಯಮೂರ್ತಿ ವಿಷಯ ಅಲ್ಲಿಗೇ ನಿಲ್ಲಿಸಲಿಲ್ಲ ಎಡಿಜಿಪಿ ಉತ್ತರ ಭಾರತದವರು, ಪವರ್ ಫುಲ್ ಆಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ಉದಾಹರಿಸಿದರು ಎಂದು ಹೇಳಿದರು.

ಸಿಂಗ್ ವಿರುದ್ಧ ವಾಗ್ದಾಳಿ: ಲಂಚ ಪ್ರಕರಣದಲ್ಲಿ ಜಾಮೀನು ಕೋರಿದ ಉಪ ತಹಶೀಲ್ದಾರ್ ಮಹೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿತ್ತು, ಅವರೇ ಕಳಂಕಿತರು ಅವರು ಹೇಗೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಸೀಮಂತ್ ಕುಮಾರ್ ಸೇವಾ ದಾಖಲೆ ಸಲ್ಲಿಸಲು ಆದೇಶಿಸಿದ್ದರು. ಅದರ ವಿರುದ್ಧ ಎಸಿಬಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಲ್ಲಿ ವಿಚಾರಣೆ ನಡೆಯುತ್ತಿದೆ.

ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧ: ನ್ಯಾಯಮೂರ್ತಿ ಕಳದ ವಿಚಾರಣೆ ವೇಳೆ, ಎಸಿಬಿಯಲ್ಲಿನ ಅಕ್ರಮಗಳ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ನನಗೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದರು.

''ಅಲ್ಲದೆ, ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿಯಾದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ. 50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು; 50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತುಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ'' ಎಂದು ನುಡಿದರು.

English summary
Karnataka High Court dismissed PIL Seeking highest security for Justice HP Sandesh, who blasts at ACB's conduct. Earlier a petition filed in HC seeking police protection to Justice HP Sandesh and also seeking SIT probe on threat of transfer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X