ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾವೇರಿ ಕೂಗು' ವಿವಾದ: ತನಿಖೆಗೆ ಅಧಿಕಾರಿ ನೇಮಿಸಲು ಕೋರ್ಟ್ ಸೂಚನೆ

|
Google Oneindia Kannada News

ಚೆನ್ನೈ, ಮಾರ್ಚ್ 9: 'ಕಾವೇರಿ ಕೂಗು' ಹೆಸರಿನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಪೌಂಡೇಷನ್ ಅಥವಾ ಈಶಾ ಔಟ್‌ರೀಚ್, ಸಾರ್ವಜನಿಕರಿಂದ ಹಣ ಸಂಗ್ರಹಣೆ ಮಾಡಿದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲು ಇಚ್ಛೆ ಇದೆಯೇ ಎಂಬ ಬಗ್ಗೆ ಹೇಳಿಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮೌಖಿಕ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠ, 'ಇದು ಸರ್ಕಾರಿ ಯೋಜನೆ ಎಂದು ಬಿಂಬಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಸಲು ನಿಮಗೆ ಉದ್ದೇಶವಿದೆಯೇ? ನೀವು ತನಿಖೆ ನಡೆಸುತ್ತೀರಾ?' ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿದೆ.

'ಕಾವೇರಿ ಕೂಗು' ನಮ್ಮದಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ'ಕಾವೇರಿ ಕೂಗು' ನಮ್ಮದಲ್ಲ: ರಾಜ್ಯ ಸರ್ಕಾರದ ಸ್ಪಷ್ಟನೆ

ಕಾವೇರಿ ಕೂಗು ಯೋಜನೆಯು ಈಶಾ ಫೌಂಡೇಷನ್/ ಈಶಾ ಔಟ್‌ರೀಚ್ ಯೋಜನೆಯಾಗಿದೆಯೇ ವಿನಾ, ಸರ್ಕಾರದ್ದಲ್ಲ. ರಾಜ್ಯ ಸರ್ಕಾರವು ಈ ಯೋಜನೆಗೆ ಯಾವುದೇ ಅನುದಾನ ಅಥವಾ ಖಾಸಗಿ ಭೂಮಿಯನ್ನು ನೀಡಿಲ್ಲ ಎಂದು ಸರ್ಕಾರದ ಪರ ವಕೀಲರು ಕೋರ್ಟ್‌ಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್, ಈ ಬಗ್ಗೆ ತನಿಖೆ ತನಿಖೆ ನಡೆಸಲು ಉದ್ದೇಶವಿದೆಯೇ ಎಂದು ಕೇಳಿತು.

HC Asks State Govt Will You Probe Allegation Of Fund Raising In Cauvery Calling Project

'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್‌ಗೆ ಹೈಕೋರ್ಟ್ ತರಾಟೆ'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್‌ಗೆ ಹೈಕೋರ್ಟ್ ತರಾಟೆ

Recommended Video

Karnataka Budget 2021 : ಯಡಿಯೂರಪ್ಪ ಅವರ 2021 ಬಜೆಟ್ ! | Oneindia Kannada

ಕಾವೇರಿ ಕೂಗು ಸರ್ಕಾರದ ಯೋಜನೆಯಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಸರ್ಕಾರ ಪ್ರತಿಕ್ರಿಯೆ ನೀಡಿತು. 'ನೀವು ಅದನ್ನು ಸ್ಪಷ್ಟಪಡಿಸಿದ್ದೀರಿ. ಹಲವು ಆದೇಶಗಳನ್ನು ಹೊರಡಿಸಿದ ಬಳಿಕ ನೀವು ನಿರ್ಧಾರ ತೆಗೆದುಕೊಂಡಿದ್ದೀರಿ. ಅವರು (ಪ್ರತಿವಾದಿಗಳು) ಕೂಡ ಇದು ಸರ್ಕಾರದ ಯೋಜನೆಯಲ್ಲ ಎಂದು ತಡವಾಗಿ ನಿಲುವು ತೆಗೆದುಕೊಂಡಿದ್ದಾರೆ. ಈ ಸಂಬಂಧ ನೀವು ಹೇಳಿಕೆ ನೀಡಿದರೆ ಅರ್ಜಿ ವಿಲೇವಾರಿ ಮಾಡಬಹುದು. ಇದು ಸರ್ಕಾರಿ ಯೋಜನೆ ಎಂದು ಹೇಳಿ ಎರಡನೆಯ ಅಥವಾ ಮೂರನೇ ಪ್ರತಿವಾದಿಗಳು ಯಾವುದಾದರೂ ಸಂದರ್ಭದಲ್ಲಿ ಹಣ ಸಂಗ್ರಹಿಸಿದ್ದಾರೆಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲು ಅಧಿಕಾರಿಯೊಬ್ಬರನ್ನು ನೇಮಿಸಿ' ಎಂದು ನ್ಯಾಯಪೀಠ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಮಾರ್ಚ್ 24ಕ್ಕೆ ನಿಗದಿಗೊಳಿಸಿತು.

English summary
Karnataka High Court asked the state government, will you inquire allegation of fund collection against Isha foundation by projecting Cauvery Calling as state project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X