• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್

By ನಿಸಾರ ಅಹ್ಮದ ಖಾಜಿ, ಕರ್ನಾಟಕ ರಾಜ್ಯ ಮುಸ್ಲ
|

ದೇಶಭಕ್ತ ಹಜರತ್ ಟಿಪ್ಪು ಸುಲ್ತಾನರು ನಾಡು, ನುಡಿ, ಧರ್ಮ ರಕ್ಷಣೆ ಜೊತೆಗೆ ಹಿಂದೂ ದೇವಾಲಯಗಳನ್ನು ಪುನರುಜ್ಜೀವನಗೊಳಿಸಿ, ಬ್ರಿಟಿಷರನ್ನು ಹೊಡೆದೋಡಿಸಿ ದೇಶವನ್ನು ಸ್ವಾತಂತ್ರ್ಯಗೊಳಿಸಬೇಕೆಂಬ ನಿಟ್ಟಿನಲ್ಲಿ ದೇಶ ರಕ್ಷಣೆಗಾಗಿಯೇ ಹುತಾತ್ಮರಾಗಿದ್ದಾರೆ.

ಹಜರತ್ ಟಿಪ್ಪು ಸುಲ್ತಾನರ ಕುರಿತು ನಾವೆಲ್ಲ ಪ್ರಾಥಮಿಕ ಶಾಲೆ ಹಂತದಿಂದಲೇ ಶೈಕ್ಷಣಿಕವಾಗಿ ಅಭ್ಯಾಸ ಮಾಡಿದ್ದೇವೆ. ಅವರನ್ನು ವಿರೋಧಿಸುತ್ತಿರುವ ಇಂದಿನ ನಾಯಕರೂ ಅದನ್ನೇ ಅಭ್ಯಾಸ ಮಾಡಿದ್ದಾರೆ. ಆದರೆ, ಅವರ ವಿರುದ್ಧ ಕೆಲವರು ಮಾತ್ರ ತಿರುಗಿ ಬೀಳಲು ಅವರು ಮಾಡಿರುವ ಅಪರಾಧವಾದರೂ ಏನು ಎಂಬುದು ಯಕ್ಷ ಪ್ರಶ್ನೆಯಾಗಿದೆ.

ದೇಶದ ಜನರ ಅನುಕೂಲತೆಗಾಗಿ ಹಲವಾರು ಬೃಹತ್ ಯೋಜನೆಗಳನ್ನು ನಿರ್ಮಿಸಿ ಯಶಸ್ವಿಗೊಳಿಸುವ ಜೊತೆಗೆ ಹಿಂದೂ ಮುಸ್ಲೀಂರ ನಡುವೆ ಅತ್ಯಂತ ಸುಮಧುರ ಬಾಂಧವ್ಯ ಮೂಡಿಸಿದ್ದ ಅಪ್ರತಿಮ ದೇಶಭಕ್ತ ಹಜರತ್ ಟಿಪ್ಪು ಸುಲ್ತಾನರ ಜನ್ಮ ದಿನಾಚರಣೆಯನ್ನು ಸರಕಾರ ಮಾಡುತ್ತಿರುವುದನ್ನು ಕೆಲವರು ವಿರೋಧಿಸುತ್ತಿರುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರನ್ನು ಚಿಂತೆಗೀಡು ಮಾಡಿದೆ.

ಕನ್ನಡ ಪ್ರೇಮಿ ಟಿಪ್ಪು: ಹಜರತ್ ಟಿಪ್ಪು ಸುಲ್ತಾನ ಅವರು 1750 ನವೆಂಬರ 10 ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಹೈದರಾಲಿ, ತಾಯಿ ಪಾತೀಮಾ ಫಕರುನ್ನೀಸಾ. ಅವರು ಬಾಲ್ಯದಲ್ಲಿಯೇ ಅನೇಕ ಯುದ್ಧ ಕೌಶಲ್ಯಗಳನ್ನು ತಮ್ಮ ತಂದೆ ಹೈದರಾಲಿ ಅವರೊಂದಿಗಿದ್ದ ಫ್ರೆಂಚ್ ಅಧಿಕಾರಿಗಳು ಹಾಗೂ ಅವರ ಗುರು ಮೊಹ್ಮದ ಫಲಕ್ಅಲಿ ಅವರಿಂದ ಕಲಿತಿದ್ದರು.

ಹಿಂದೂ ಮುಸ್ಲಿಂ ಭಾವೈಕ್ಯತೆ ಭಾವೈಕ್ಯತೆ ರೂಢಿಸಿಕೊಂಡಿದ್ದ ಅವರು ಕನ್ನಡ ಪ್ರೇಮಿಯಾಗಿದ್ದರು ಎಂಬುದು ಅವರ ಆಡಳಿತ ಭಾಷೆ ಕನ್ನಡವೇ ಆಗಿತ್ತು ಎಂಬುದು ಇತಿಹಾಸ.

ಅಪ್ರತಿಮ ಸೇನಾ ನಾಯಕ

ಅಪ್ರತಿಮ ಸೇನಾ ನಾಯಕ

ಇತಿಹಾಸದಲ್ಲಿ ಮೈಸೂರು ಹುಲಿ ಎಂದೇ ಹೆಸರಾಗಿರುವ ಹಜರತ್ ಟೀಪೂ ಸುಲ್ತಾನರ ಮೂಲ ಹೆಸರು ಫಾತ್ ಅಲಿಖಾನ್ ಬಹದ್ದೂರ. ಅತಿ ಚಿಕ್ಕ ವಯಸ್ಸಿನಲ್ಲಿಯೇ 1767ರಲ್ಲಿ ನಡೆದ ಯುದ್ಧದಲ್ಲಿ ಸೇನೆಯ ಅಶ್ವ ದಳದ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ 1775 ರಿಂದ 1779ರ ಅವಧಿಯಲ್ಲಿ ಪೂರ್ಣ ಪ್ರಮಾಣದ ಸೇನಾ ನಾಯಕರಾಗಿ ಅವರು ಪ್ರಸಿದ್ಧಿ ಪಡೆದರು.

15ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯ ಜೊತೆ ಪ್ರಥಮ ಮೈಸೂರು ಯುದ್ಧದಲ್ಲಿ ಭಾಗವಹಿಸಿ ಸೇನಾ ತುಕಡಿಯ ನಾಯಕರಾಗಿ ಕೆಲಸ ಮಾಡಿದರು. 1782ರ ಫೆಬ್ರುವರಿಯಲ್ಲಿ ಆಂಗ್ಲ ಸೇನಾ ನಾಯಕನಾಗಿದ್ದ ಬ್ರಾತ್ ವೈಟ್ನನ್ನು ಸೋಲಿಸಿದರೆಂಬುದು ಅವರ ಧೈರ್ಯ ಶೌರ್ಯಕ್ಕೆ ಸಾಕ್ಷಿ.

ಅತ್ಯಾಧುನಿಕ ರಾಕೆಟ್, ಫಿರಂಗಿಗಳನ್ನು ಪರಿಚಯಿಸಿದರು

ಅತ್ಯಾಧುನಿಕ ರಾಕೆಟ್, ಫಿರಂಗಿಗಳನ್ನು ಪರಿಚಯಿಸಿದರು

ಯುದ್ಧ ಕೌಶಲ್ಯಗಳನ್ನು ತನ್ನ ಸೈನ್ಯಕ್ಕೆ ನೀಡುತ್ತಿದ್ದ ಅವರು ಅತ್ಯಾಧುನಿಕ ರಾಕೆಟ್, ಫಿರಂಗಿಗಳನ್ನು ಮೊಟ್ಟಮೊದಲು ಬಳಕೆಗೆ ತಂದರು.

ಹಜರತ್ ಟಿಪ್ಪು ಸುಲ್ತಾನರು ತಮ್ಮ ಜೀವಿತದ 48 ವರ್ಷಗಳಲ್ಲಿ ಬ್ರಿಟೀಷರ ವಿರುದ್ಧ ದೇಶ ಸಂರಕ್ಷಣೆಗಾಗಿ 9 ವರ್ಷ ಯುಧ್ಧ ಮಾಡಿದರೆ, ಇನ್ನುಳಿದ 24 ವರ್ಷಗಳ ಕಾಲ ಅವರು ಮಾಡಿದ್ದು ಜನಪರ ಕಾರ್ಯಗಳೇ.

ದೇಶ ರಕ್ಷಣೆಗಾಗಿಯೇ ಅವರು ಮೈಸೂರು ಬಳಿಯ ಶ್ರೀರಂಗಪಟ್ಟಣದಲ್ಲಿ 1799 ಮೇ 4 ರಂದು ತಮ್ಮ 48ನೇ ವಯಸ್ಸಿನಲ್ಲಿ ಹುತಾತ್ಮರಾದರು.

ಜನಪರ ಕಾರ್ಯಗಳು

ಜನಪರ ಕಾರ್ಯಗಳು

1792ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಉಳುವವನಿಗೆ ಭೂಮಿ ಸಿಗಬೇಕು ಎಂಬುದು ಅವರ ಕೃಷಿ ನೀತಿಯಾಗಿತ್ತು. ಇದರಿಂದ ಊಳಿಗ ಮಾನ್ಯ ಶಕ್ತಿಗಳ ಭೂ ಒಡೆತನ ಮುರಿದು ಬಿತ್ತು.

ಮೈಸೂರು ಸಂಸ್ಥಾನದಲ್ಲಿ 39 ಸಾವಿರ ಕೆರೆಗಳು, 14 ಸಾವಿರ ಬಾವಿಗಳು ಇದ್ದವು. ಟೀಪೂ ಸುಲ್ತಾನರು ನದಿಗಳಿಗೆ 24 ಒಡ್ಡುಗಳನ್ನು ಕಟ್ಟಿ ಕಾಲುವೆ ಮೂಲಕ ನೀರು ಹರಿಸಿ ಕೃಷಿಗೆ ಸಹಾಯ ಮಾಡಿದ್ದಾರೆ. ಕೆರೆ ಕಟ್ಟೆಗಳಲ್ಲಿ ನೀರು ಬಿಡುವುದಕ್ಕೆ ದಲಿತರನ್ನು ನೇಮಿಸಿದ್ದರು ಎಂಬುದನ್ನು ಇತಿಹಾಸಕಾರರು ಹೇಳಿದ್ದಾರೆ.

ಧಾರ್ಮಿಕ ಸಹಿಷ್ಣುತೆ

ಧಾರ್ಮಿಕ ಸಹಿಷ್ಣುತೆ

ಸ್ವಧರ್ಮದಲ್ಲಿ ಪರಮ ನಿಷ್ಠೆ, ಹಿಂದೂ ಸೇರಿದಂತೆ ಪರ ಧರ್ಮಗಳಲ್ಲಿ ಸಹಿಷ್ಣುತೆಯನ್ನು ಹೊಂದಿದ್ದ ಹಜರತ್ ಟೀಪೂ ಸುಲ್ತಾನ್ ಅವರು, 1782ರಲ್ಲಿ ತಮ್ಮ ತಂದೆ ಹೈದರಾಲಿ ನಿಧನರಾದ ಬಳಿಕ ಮೈಸೂರು ಸುಲ್ತಾನರಾಗಿ ಅಧಿಕಾರ ಸ್ವೀಕರಿಸಿದ ಅವರು ಬ್ರಿಟೀಷರ ಅಟ್ಟಹಾಸ ತಡೆಯಲು ಹಲವಾರು ರಾಜಕೀಯ ಕೌಶಲ್ಯ, ತಂತ್ರಗಾರಿಕೆಯನ್ನು ಅನುಸರಿಸುತ್ತ ಬಂದರು.

ಹಜರತ್ ಟಿಪ್ಪು ಸುಲ್ತಾನರ ದೇಶಭಕ್ತಿ, ಧಾರ್ಮಿಕ ಸಹಿಷ್ಣುತೆ, ಕನ್ನಡ ಭಾಷಾ ಪ್ರೇಮ ಎಂತಹದ್ದು ಎಂಬುದನ್ನು ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಧಕ್ಕೆ ತರುವಂತಹ ಚಟುವಟಿಕೆಗಳಿಗೆ ಪ್ರಚೋಧನೆ ನೀಡದೇ ದೇಶವಾಸಿಗಳು ಮೊದಲು ಹಜರತ್ ಟೀಪೂ ಸುಲ್ತಾನರ ಇತಿಹಾಸವನ್ನು ಅರ್ಥೈಸಿಕೊಳ್ಳಬೇಕಿದೆ.

ಯಾವ ಧರ್ಮವನ್ನೂ ದ್ವೇಷಿಸಿದವರಲ್ಲ

ಯಾವ ಧರ್ಮವನ್ನೂ ದ್ವೇಷಿಸಿದವರಲ್ಲ

ಶೃಂಗೇರಿ ಶಾರದಾಂಬೆ ದೇವಾಲಯಗಳು ಸೇರಿದಂತೆ ಅನೇಕ ಹಿಂದೂ ದೇವಾಲಯಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ಹಜರತ್ ಟೀಪ್ಪು ಸುಲ್ತಾನರು ಜೀರ್ಣೋದ್ಧಾರ ಮಾಡಿದರು. ಪಾಶ್ಚಾತ್ಯ ಇತಿಹಾಸಕಾರರು ಬರೆದಿರುವಂತೆ ಹಜರತ್ ಟಿಪ್ಪು ಸುಲ್ತಾನರು ಯಾವ ಧರ್ಮವನ್ನೂ ದ್ವೇಷಿಸಿದವರಲ್ಲ.

ಹಿಂದೂ ಧರ್ಮವನ್ನಂತೂ ಎಂದೂ ದ್ವೇಷಿಸಲಿಲ್ಲ. ಬದಲು ಹಿಂದೂ ಧರ್ಮದ ಬಗ್ಗ ಅಪಾರ ಗೌರವ ಹೊಂದಿದ್ದರು ಎಂಬುದಕ್ಕೆ ಅನೇಕ ನಿದರ್ಶನಗಳಿವೆ. ಹಿಂದೂ ದೇವಾಲಯಗಳ ಅಭಿವೃದ್ಧಿ ಹಾಗೂ ಅವರು ಹಿಂದೂ ದೇವಾಲಯ, ಮಠಮಾನ್ಯಗಳಿಗೆ ನೀಡಿದ ದಾನ ಧರ್ಮಗಳೂ ಸೇರಿದಂತೆ ಅವರ ಸರ್ವಮತ ಸಹಿಷ್ಣತೆ, ಹಿಂದೂ ಧರ್ಮಾಭಿಮಾನಕ್ಕೆ ಅವರು ಮಾಡಿದ ಕಾರ್ಯಗಳೇ ಸಾಕ್ಷಿಯಾಗಿವೆ.

ಚಿತ್ರದಲ್ಲಿ: ಲೇಖಕ ನಿಸಾರ್ ಅಹ್ಮದ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tipu Sultan Birth Anniversary special article : Legendary Ruler defeated the foreign invaders in the First and Second Anglo Mysore War. Tipu is pioneer when it comes to utilizing rocket artillery. Tipu protected communal harmony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more