ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರ್ತಾರಂತೆ ಶಾಮನೂರು; ಗಾಳಿಸುದ್ದಿ ಬಗ್ಗೆ ಶಿವಶಂಕರಪ್ಪ ಹೇಳಿದ್ದೇನು?

By Sachhidananda Acharya
|
Google Oneindia Kannada News

ದಾವಣಗೆರೆ, ಮಾರ್ಚ್ 21: ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ತಮ್ಮ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜತೆ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡುವ ತೀರ್ಮಾನ ತೆಗೆದುಕೊಂಡ ಬೆನ್ನಲ್ಲೆ ಈ ಸುದ್ದಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಹುಟ್ಟಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇದೇ ಮಾರ್ಚ್ 26, 27ರಂದು ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು 'ಮೂಲ'ಗಳನ್ನು ಉಲ್ಲೇಖಿಸಿ ಕೇಳಿ ಬರುತ್ತಿದ್ದವು.

ಲಿಂಗಾಯತ ಪ್ರತ್ಯೇಕ ಧರ್ಮ : ಶಾಮನೂರು ಶಿವಶಂಕರಪ್ಪ ಹೇಳುವುದೇನು? ಲಿಂಗಾಯತ ಪ್ರತ್ಯೇಕ ಧರ್ಮ : ಶಾಮನೂರು ಶಿವಶಂಕರಪ್ಪ ಹೇಳುವುದೇನು?

ಆದರೆ ಈ ಸುದ್ದಿಗಳನ್ನು ಶಾಮನೂರು ಶಿವಶಂಕರಪ್ಪ ಸಾರಸಗಟಾಗಿ ತಳ್ಳಿ ಹಾಕಿದ್ದಾರೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಹೇಳಿದ್ದಾರೆ. ಬಿಜೆಪಿಯಲ್ಲಿ ಜೈಲಿಗೆ ಹೋಗದವರು ಇದ್ದರೆ ಹೇಳಿ ನಾವೇ ಕಾಂಗ್ರೆಸಿಗೆ ಸೇರ್ಪಡೆಗೊಳಿಸುತ್ತೇವೆ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

have not gone anywhere: Shamanoor Shivashankarappa clarified on joining BJP

ಸಂಪುಟ ಸಭೆಯ ತೀರ್ಮಾನಗಳ ಬಗೆಗಿನ ವಿರೋಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು, 'ಅದೆಲ್ಲಾ ಈಗ ಮುಗಿದ ಕಥೆ' ಎಂದು ಹೇಳಿದ್ದಾರೆ. ನಾವು ಜೆಡಿಎಸ್ ಗೂ ಹೋಗಲ್ಲ, ಬಿಜೆಪಿಗೂ ಹೋಗಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

English summary
It is said to be that, senior Congress leader Shamanoor Shivashankarappa is expected to join BJP with his son and minister SS Mallikarjun. But they have rejected this news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X