ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಉತ್ಸವದ ವೈಭವ, ವಿಹಂಗಮ ನೋಟ ಇಲ್ಲಿದೆ

By Srinath
|
Google Oneindia Kannada News

ಹಂಪಿ (ಮಾಧ್ಯಮ ಕೇಂದ್ರ), ಜ. 11: ಕೆಲವರಿಗೆ ಕೈಯಿಲ್ಲ, ಇನ್ನು ಕೆಲವರಿಗೆ ಕಾಲೂ ಇಲ್ಲ, ಕಿವಿ ಕೇಳಲ್ಲ, ಕಣ್ಣು ಕಾಣಲ್ಲ.. ಆದರೆ ಇವರ ಮನೋಚೈತನ್ಯ, ಅದಮ್ಯ ಉತ್ಸಾಹ, ಸಂಭ್ರಮ, ಸಾಧಿಸುವ ಛಲದ ಮುಂದೆ ಎಲ್ಲವೂ ಗೌಣ.

ಬಿಲ್ಲುಗಾರಿಕೆಯಲ್ಲಿ ಇವರು ಹೂಡಿದ ಬಾಣ ನಿರ್ದಿಷ್ಟ ಗುರಿ ತಲುಪುತ್ತಿತ್ತು. ರೈಫಲ್‍ನಿಂದ ತೂರಿದ ಗುಂಡು ಗುರಿಗಾಗಿ ಇಟ್ಟಿದ್ದ ಮಾರ್ಕಿಂಗ್ ಪರದೆಯನ್ನು ಸೀಳಿ ಹೊರ ನಡೆದಿತ್ತು. ಕಬ್ಬಿಣದ ಚೆಂಡು (ಶಾಟ್ ಪುಟ್) ರಬ್ಬರ್ ಚೆಂಡಾಗಿ ಪುಟಿಯಿತು. ಇಡೀ ಕ್ರೀಡಾಂಗಣ ಸಂಭ್ರಮದ ಅಲೆಯಲ್ಲಿ ತೇಲುತ್ತಿತ್ತು.

ಇದು ಹಂಪಿ ಉತ್ಸವದ ಇತಿಹಾಸದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗಾಗಿ ಕಮಲಾಪುರ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಂಡು ಬಂದ ದೃಶ್ಯಾವಳಿಗಳು.

ಇಲ್ಲಿ ವಿಕಲಚೇತನರ ಮನೋಬಲದ ಮುಂದೆ ಅಂಗವಿಕಲತೆ ಶರಣಾಯಿತು. ಕಾರ್ಮಿಕ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಹಾಗೂ ಬಳ್ಳಾರಿ ಶಾಸಕರಾದ ಅನಿಲ್ ಲಾಡ್ ಅವರು ಬಿಲ್ಗಾರಿಕೆ ಹಾಗೂ ಗುಂಡೆಸೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಸಚಿವ ಪರಮೇಶ್ವರ ನಾಯಕ್ ಮಾತನಾಡಿ, ಹಂಪಿ ಉತ್ಸವದ ಇತಿಹಾಸದಲ್ಲಿ ವಿಕಲಚೇತನರಿಗಾಗಿಯೇ ಪ್ರಥಮ ಬಾರಿಗೆ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ. ಇದರಿಂದ ವಿಕಲಚೇತನರನ್ನು ಮುಖ್ಯವಾಹಿನಿಯೊಂದಿಗೆ ಕೊಂಡೊಯ್ಯಲು ಉತ್ತೇಜನ ನೀಡಿದಂತಾಗುತ್ತದೆ. ಹಂಪಿ ಉತ್ಸವದಲ್ಲಿ ಈ ಮೂಲಕ ವಿಕಲಚೇತನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕ್ರೀಡೆಯಲ್ಲಿ ವಿಜೇತರಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಲಿ ಎಂದು ಹಾರೈಸಿದರು.

ರಾಜ್ಯದ ನಾನಾ ಭಾಗದಿಂದ ಕ್ರೀಡಾಸ್ಪರ್ಧೆಯಲ್ಲಿ 559 ಪುರುಷರು ಹಾಗೂ 145 ಮಹಿಳಾ ಕ್ರೀಡಾಪಟುಗಳು ಸೇರಿದಂತೆ 703 ಕ್ರೀಡಾಪಟುಗಳು ಭಾಗವಹಿಸಿದ್ದು, ಎಂಟು ವಿಭಾಗದಲ್ಲಿ ಸ್ಪರ್ಧೆಗಳು ಜರುಗಲಿವೆ. ಪ್ರತಿ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ನೀಡಲಿದ್ದು, ಪ್ರಥಮ ಬಹುಮಾನವಾಗಿ 10 ಸಾವಿರ, ದ್ವಿತೀಯ 5 ಸಾವಿರ ಹಾಗೂ ತೃತೀಯ 2.5 ಸಾವಿರ ರೂ. ನಗದು ಬಹುಮಾನವನ್ನು ನೀಡಲಾಗುವುದು. ದೈಹಿಕ ಅಂಗವಿಕಲರಿಗಾಗಿ ಬಿಲ್ಲುಗಾರಿಕೆ ಹಾಗೂ ರೈಫಲ್ ಶೂಟಿಂಗ್, ಶ್ರವಣ ದೋಷದವರಿಗೆ ಲಾಂಗ್ ಜಂಪ್, ಹೈಜಂಪ್, ಶಾಟ್ ಪುಟ್ ಹಾಗೂ ಅಂಧರಿಗೆ ಮ್ಯೂಸಿಕಲ್ ಚಯರ್, ಬುದ್ಧಿಮಾಂದ್ಯರಿಗೆ ಚೆಂಡೆಸೆತ ಹಾಗೂ ಮ್ಯೂಸಿಕಲ್ ಚಯರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ವಿಕಲಚೇತನರ ಕ್ರೀಡಾ ಸ್ಪರ್ಧೆಗಾಗಿ ಧಾರವಾಡದಿಂದ ಹಂಪಿಗೆ ಬಂದಿದ್ದ ಸಾವಿತ್ರಿ, ಲಕ್ಷ್ಮೀಮೇಟಿ, ಬೆಂಗಳೂರಿನ ನಂಜುಂಡರಾವ್, ಮಂಡ್ಯದ ರತ್ನಮ್ಮ, ಯತೀಶ್ ಕುಮಾರ್ ಇವರಿಗೆ ಡಬಲ್ ಖುಷಿ. ಹಂಪಿ ಉತ್ಸವದಲ್ಲಿ ಅಂಗವಿಕಲರಿಗಾಗಿ ವಿಶೇಷ ಆದ್ಯತೆ ನೀಡಿದ್ದಕ್ಕೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಅಭಿನಂದನೆ ಮೂಲಕ ಮಾತು ಆರಂಭಿಸಿದ ಅವರು, ಈ ಕ್ರೀಡಾಕೂಟದಿಂದ ನಮ್ಮ ಆತ್ಮವಿಶ್ವಾಸ ಇಮ್ಮಡಿಸಿದೆ. ಕ್ರೀಡೆಯ ಜೊತೆಗೆ ಉತ್ಸವದಲ್ಲೂ ಪಾಲ್ಗೊಳ್ಳಲು ಅವಕಾಶವಾಗಿದೆ. ಇದರಿಂದ ವಿಕಲಚೇತನರ ಖಿನ್ನತೆ ದೂರವಾಗುತ್ತದೆ. ಇಂತಹ ಸ್ಪರ್ಧೆಗಳನ್ನು ಎಲ್ಲಾ ಜಿಲ್ಲಾ ಉತ್ಸವಗಳಲ್ಲೂ ಏರ್ಪಡಿಸಿದರೆ ಉತ್ತಮ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ಸಿಂಗ್, ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್, ರಾಜ್ಯ ವಿಕಲಚೇತನರ ಇಲಾಖೆ ನಿರ್ದೇಶಕ ಜಯವಿಭವ ಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ವಸಂತ ಇತರರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಚಾಲನೆ

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಚಾಲನೆ

ನಾಡು ನುಡಿ ಹಾಗೂ ಅಭಿವೃದ್ಧಿಯ ಅನಾವರಣಗೊಳಿಸಿದ ವಾರ್ತಾ ಇಲಾಖೆಯ ಪ್ರದರ್ಶನ ಮಳಿಗೆನಾಡು ನುಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ಸಾಧನೆ, ರಾಜ್ಯದ ವಿವಿಧ ಯೋಜನೆಗಳ ಮಾಹಿತಿಯನ್ನು ಒಳಗೊಂಡ ಜನಾಕರ್ಷಣೆಯ ವಾರ್ತಾ ಇಲಾಖೆಯ ಪ್ರದರ್ಶನ ಮಳಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯಕ್ ಅವರು ಚಾಲನೆ ನೀಡಿದರು.

ಪಂಪ ಪ್ರಶಸ್ತಿ ಪಡೆದ ಕನ್ನಡದ ಸಾಧಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಕನ್ನಡಿಗರು, ಪತ್ರಿಕೋದ್ಯಮ ಭೀಷ್ಮರಾದ ಮೊಹರೆ ಹನುಮಂತರಾಯ ಪ್ರಶಸ್ತಿ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತರ ಭಾವಚಿತ್ರಗಳು, ಅವರ ಸಾಧನೆಗಳ ಕಿರುಚಿತ್ರ ಪರಿಚಯ, ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ನಾಡ ಸೇವಕರ ಮಾಹಿತಿಯನ್ನು ಅನಾವರಣಗೊಳಿಸಿತು.

ಹಲವು ಭಾಗ್ಯ ಯೋಜನೆಗಳ ಪರಿಚಯ ಆಕರ್ಷಕ ಚಿತ್ರ ಅಭಿವೃದ್ಧಿಯ ಮಾಹಿತಿ

ಹಲವು ಭಾಗ್ಯ ಯೋಜನೆಗಳ ಪರಿಚಯ ಆಕರ್ಷಕ ಚಿತ್ರ ಅಭಿವೃದ್ಧಿಯ ಮಾಹಿತಿ

ನಾಡು-ನುಡಿ ಸೇವೆಯ ಜೊತೆ ಜೊತೆಗೆ ಕರ್ನಾಟಕ ಸರ್ಕಾರ ಜನರಿಗಾಗಿ ಜಾರಿಗೊಳಿಸಿರುವ ಅನ್ನಭಾಗ್ಯ, ಅಕ್ಕಿ ಭಾಗ್ಯ, ಬೆಳಕಿನ ಭಾಗ್ಯ, ವಸತಿ ಭಾಗ್ಯ, ಕ್ಷೀರಭಾಗ್ಯ, ಸಾಲಮುಕ್ತ, ಮನಸ್ವಿನಿ ಸೇರಿದಂತೆ ಹಲವು ಯೋಜನೆಗಳ ಕಿರು ಪರಿಚಯ ಆಕರ್ಷಕ ಚಿತ್ರದೊಂದಿಗೆ ಜನರಿಗೆ ಅಭಿವೃದ್ಧಿಯ ಮಾಹಿತಿಯನ್ನು ಒದಗಿಸಲಾಗಿದೆ.
ಅತ್ಯಂತ ಆಕರ್ಷಕವಾಗಿರುವ ಒಳ ವಿನ್ಯಾಸ, ಮಾಹಿತಿಯ ವಿನ್ಯಾಸ ಹಾಗೂ ಜೋಡಣೆ, ಹೊರ ಭಾಗದಲ್ಲಿ ಕ್ಷೀರಭಾಗ್ಯದ ಫಲಾನುಭವಿ ಶಾಲಾ ಬಾಲಕಿಯ ಸ್ತಬ್ಧಚಿತ್ರ ಜನಾಕರ್ಷಣೆಯಾಗಿದೆ. ಮಾಹಿತಿಯ ಫಲಕಗಳೊಂದಿಗೆ ನಾಡು ನುಡಿ ಹಾಗೂ ಅಭಿವೃದ್ಧಿಯ ಮಾಹಿತಿಯೊಂದಿಗೆ ಮುಖ್ಯಮಂತ್ರಿ ಅವರ ಸಂದೇಶ ಹೊತ್ತ ಕಿರುಚಿತ್ರ ಪ್ರದರ್ಶನ ಅನಕ್ಷರಸ್ಥ ವೀಕ್ಷಕರಿಗೂ ಮಾಹಿತಿ ಒದಗಿಸಲು ವಾರ್ತಾ ಇಲಾಖೆ ವ್ಯವಸ್ಥೆ ಮಾಡಿದೆ.
ಉದ್ಘಾಟನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಶಾಸಕ ಅನಿಲ್ ಲಾಡ್ ಅವರು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ಸಿಂಗ್, ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ವಸಂತ ಇತರರು ಉಪಸ್ಥಿತರಿದ್ದರು.

ಬಸವಣ್ಣ ದೇವಾಲಯದ ಹಂಪಿ ಬಜಾರಿನಲ್ಲಿ ಸಾಂಪ್ರದಾಯಿಕ ಆಹಾರ ಮೇಳ

ಬಸವಣ್ಣ ದೇವಾಲಯದ ಹಂಪಿ ಬಜಾರಿನಲ್ಲಿ ಸಾಂಪ್ರದಾಯಿಕ ಆಹಾರ ಮೇಳ

ಹಂಪಿ ಉತ್ಸವದ ಅಂಗವಾಗಿ ಎದುರು ಬಸವಣ್ಣ ದೇವಾಲಯ ಬಳಿಯ ಹಂಪಿ ಬಜಾರಿನಲ್ಲಿ ಆಯೋಜಿಸಿರುವ ಸಾಂಪ್ರದಾಯಿಕ ಆಹಾರ ಮೇಳ, ಪುಸ್ತಕ ಮೇಳ, ಕರಕುಶಲ ಮೇಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ ನಾಯಕ್ ಚಾಲನೆ ನೀಡಿದರು.

ಹಂಪಿ ಉತ್ಸವ ಉತ್ಸಾಹ, ಪುಸ್ತಕ ಮಳಿಗೆ, ವಸ್ತ್ರ ವೈವಿಧ್ಯ:

ಹಂಪಿ ಉತ್ಸವ ಉತ್ಸಾಹ, ಪುಸ್ತಕ ಮಳಿಗೆ, ವಸ್ತ್ರ ವೈವಿಧ್ಯ:

ಆಹಾರ ಮೇಳ: ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ತಿನಿಸುಗಳ ಸಾಂಪ್ರದಾಯಿಕ ಆಹಾರ ಮೇಳದಲ್ಲಿ ಹಲವು ಮಳಿಗೆಗಳು ತಿನಿಸು ಪ್ರಿಯರನ್ನು ಆಕರ್ಷಿಸುತ್ತಿವೆ. ವಿವಿಧ ಆಹಾರಗಳ ಆಕರ್ಷಕ ಜೋಡಣೆ ನೋಡುಗರನ್ನು ಸೆಳೆಯುತ್ತಿವೆ.
ಪುಸ್ತಕ ಮಳಿಗೆ: ಹಂಪಿ ವಿಶ್ವವಿದ್ಯಾಲಯದ ಪ್ರಕಟಣೆಗಳು ಸೇರಿದಂತೆ ವಿವಿಧ ಪ್ರಕಾಶಕರ ನೂರಾರು ಪುಸ್ತಕ ಮಳಿಗೆಗಳಲ್ಲಿ ಸಾಹಿತ್ಯ, ಸಂಸ್ಕøತಿ, ವಿಜ್ಞಾನ, ಕಲೆ, ಆರೋಗ್ಯ, ಸ್ಪರ್ಧಾತ್ಮಕ ಸೇರಿದಂತೆ ವೈವಿಧ್ಯಮಯ ಪುಸ್ತಕಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ವಸ್ತ್ರ ವೈವಿಧ್ಯ: ಪುಸ್ತಕ ಮಳಿಗೆಯ ಎದುರು ಭಾಗದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಿದ್ದು, ರಾಜ್ಯದ ವಿವಿಧ ಭಾಗದಿಂದ ಬಂದ ಕರಕುಶಲ ಉತ್ಪನ್ನಗಳನ್ನು ಮಾರಾಟಕ್ಕೆ ಇಡಲಾಗಿದೆ.
ರಂಗೋಲಿ ಸ್ಪರ್ಧೆ: ವಿರೂಪಾಕ್ಷ ದೇವಾಲಯದ ಮುಖಮಂಟಪದ ಎದುರು ಭಾಗದ ಇಕ್ಕೆಲೆಗಳಲ್ಲಿ ಮಹಿಳೆಯರ ಚಿತ್ತಾಕರ್ಷಕ ರಂಗೋಲಿ ಎಲ್ಲರ ಗಮನ ಸೆಳೆಯಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 50ಕ್ಕೂ ಅಧಿಕ ಸ್ಪರ್ಧಾಳುಗಳು ಹಂಪಿ ಉತ್ಸವದ ರಂಗಿಗೆ ರಂಗೋಲಿಯ ಚಿತ್ತಾರ ಬೆರೆಸಿದರು. ವಿದೇಶಿ ಮಹಿಳೆಯರೂ ಬಣ್ಣದ ಬೆರಗಿಗೆ ಮನಸೋತು ರಂಗೋಲಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ಸಿಂಗ್, ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ವಸಂತ ಇತರರು ಉಪಸ್ಥಿತರಿದ್ದರು.

ಹಂಪಿ ಎಟ್ ಸ್ಕೈ - ನೀಲಾಕಾಶದಿಂದ ಹಂಪಿ ಸೊಬಗಿನ ಸವಿಯೂಟ

ಹಂಪಿ ಎಟ್ ಸ್ಕೈ - ನೀಲಾಕಾಶದಿಂದ ಹಂಪಿ ಸೊಬಗಿನ ಸವಿಯೂಟ

ಹಂಪಿಯ ಸ್ಮಾರಕಗಳ ಸೊಬಗನ್ನು ಆಕಾಶದಿಂದ ಸವಿಯುವ ಅಪರೂಪದ ಅವಕಾಶವನ್ನು ಹಂಪಿ ಎಟ್ ಸ್ಕೈ' ಪ್ರವಾಸಿಗರಿಗೆ ಒದಗಿಸಿತು.
ಹೆಲಿಕಾಪ್ಟರ್ ಹಾರಾಟದ ಮೂಲಕ ಹಂಪಿ ಸ್ಮಾರಕಗಳನ್ನು ವೀಕ್ಷಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ಸಾರ್ವಜನಿಕರು ಉತ್ಸಾಹದಿಂದ ಹೆಲಿಕಾಪ್ಟರ್ ಯಾನದ ಅನುಭವದೊಂದಿಗೆ ಸ್ಮಾರಕಗಳನ್ನು ವೀಕ್ಷಿಸುವ ಸಂಭ್ರಮ ಅನುಭವಿಸಿದರು.
ಹೊಟೇಲ್ ಮಯೂರ ಭುವನೇಶ್ವರಿ ಅಂಗಳದಿಂದ ಆಗಸಕ್ಕೆ ಚಿಮ್ಮುತ್ತ ವಿರೂಪಾಕ್ಷ ದೇವಾಲಯ, ಸಾಸಿವೆ ಗಣಪತಿ, ರುದ್ರ ನರಸಿಂಹ, ವಿಜಯ ವಿಠ್ಠಲ ದೇವಾಲಯ, ಕಲ್ಲಿನ ರಥ, ಲೋಟಸ್ ಮಹಲ್, ಅಕ್ಕತಂಗಿಯರ ಗುಡ್ಡ, ಮಹಾನವಮಿ ದಿಬ್ಬ, ರಾಮನವಮಿ ದಿಬ್ಬ ಸೇರಿದತೆ ಸ್ಮಾರಕಗಳನ್ನು ಸುತ್ತುವ ಹೆಲಿಕಾಪ್ಟರ್ ಯಾನ ವೀಕ್ಷಕರಿಗೆ ಹೊಸ ಅನುಭವ ನೀಡಿತು.
ಹೆಲಿಕಾಪ್ಟರ್ ಹಾರಾಟದ ಬಳಿಕ ತಮ್ಮ ಅನುಭವವನ್ನು ಹಂಚಿಕೊಂಡ ಸಂಡೂರು ತಾಲೂಕಿನ ವಿಜಯ ಕುಮಾರ್ ಅವರು, ಹಂಪಿಗೆ ಹತ್ತಾರು ಬಾರಿ ಆಗಮಿಸಿದ್ದು, ಎಲ್ಲಾ ಸ್ಮಾರಕಗಳನ್ನು ವೀಕ್ಷಿಸಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಮೂಲಕ ಸ್ಮಾರಕಗಳನ್ನು ವೀಕ್ಷಿಸಿದ ಅನುಭವ ಜೀವಮಾನದಲ್ಲೇ ದೊರೆಯಲು ಸಾಧ್ಯವಿಲ್ಲ. ಹಂಪಿ ಸ್ಮಾರಕಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಹಂಪಿ ಎಟ್ ಸ್ಕೈ' ಒದಗಿಸಿತು ಎಂದು ಸಂತಸಪಟ್ಟರು.
ಹೆಲಿಕಾಪ್ಟರ್ ಮೂಲಕ ಹಂಪಿ ಸ್ಮಾರಕಗಳ ವೀಕ್ಷಣೆಯ ಹಂಪಿ ಎಟ್ ಸ್ಕೈ' ಉತ್ಸವದ ಮೂರು ದಿನಗಳ ಕಾಲ ನಡೆಯಲಿದ್ದು, ಪ್ರತಿಯೊಬ್ಬರಿಗೆ ಎರಡು ಸಾವಿರ ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಪ್ರಥಮ ದಿನವಾದ ಶುಕ್ರವಾರ 150ಕ್ಕೂ ಅಧಿಕ ಮಂದಿ ಆಕಾಶಯಾನದ ಅನುಭವ ಪಡೆದುಕೊಂಡರು.

ಹಂಪಿ ಉತ್ಸವದಲ್ಲಿ ಮೂರು ದಿನಗಳ ಸಾಹಸ ಕ್ರೀಡೆ

ಹಂಪಿ ಉತ್ಸವದಲ್ಲಿ ಮೂರು ದಿನಗಳ ಸಾಹಸ ಕ್ರೀಡೆ

ಸಾಹಸ ಕ್ರೀಡೆ: ರಾಣಿ ಸ್ನಾನ ಗೃಹದ ಬಳಿ ಆಯೋಜಿಸಲಾಗಿರುವ ಮೂರು ದಿನಗಳ ಸಾಹಸ ಕ್ರೀಡೆ ಹಾಗೂ ಗಾಳಿಪಟ ಪ್ರದರ್ಶನ ನೋಡುಗರನ್ನು ಸೆಳೆಯುತ್ತಿವೆ. ಸಾಹಸ ಜೀಪು ಸವಾರಿ, ಪಾಯಿಂಟ್ ಬಾಲ್, ಎಟಿಎ ಸಾಹಸಿಗರನ್ನು ಆಕರ್ಷಿಸುತ್ತಿವೆ. ಬಣ್ಣಬಣ್ಣದ ಗಾಳಿಪಟಗಳು ಬಾನಾಡಿಗಳೊಂದಿಗೆ ಸ್ಪರ್ಧೆಗೆ ಇಳಿದಂತೆ ಹಾರಾಡುತ್ತಿದ್ದು, ಚಿತ್ತಾಕರ್ಷಕವಾಗಿದ್ದವು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶೋಭಾ ಬೆಂಡಿಗೇರಿ, ಉಪಾಧ್ಯಕ್ಷೆ ಮಮತಾ ಸುರೇಶ್, ಹಂಪಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ವಾತಿ ಸಿಂಗ್, ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ನಾಯಕ್, ಜಿಲ್ಲಾ ಪಂಚಾಯತ್ ಸದಸ್ಯ ವಸಂತ ಇತರರು ಉಪಸ್ಥಿತರಿದ್ದರು.

ಹಂಪಿ ಉತ್ಸವ : ಜ. 11ರಂದು ನಡೆಯುವ ಕಾರ್ಯಕ್ರಮಗಳ ವಿವರ

ಹಂಪಿ ಉತ್ಸವ : ಜ. 11ರಂದು ನಡೆಯುವ ಕಾರ್ಯಕ್ರಮಗಳ ವಿವರ

ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಜನವರಿ 11ರಂದು ಸಂಜೆ 6 ಗಂಟೆಗೆ ವಿವಿಧ ಜಾನಪದ ಕಲಾ ತಂಡಗಳಿಂದ ಜನಪದ ಜಾತ್ರೆ (ಜಾನಪದ ನೃತ್ಯ), 7 ಗಂಟೆಗೆ ಬೆಂಗಳೂರಿನ ಅರ್ಚನ ಉಡುಪ ಅವರಿಂದ ಕನ್ನಡ ಗೀತೆಗಳ ಗಾಯನ, 8 ಗಂಟೆಗೆ ಒರಿಸ್ಸಾದ ಪ್ರಿನ್ಸ್ ನೃತ್ಯತಂಡದಿಂದ ಪ್ರತಿಭಾ ಪ್ರದರ್ಶನ, 8-30ಕ್ಕೆ ಬೆಂಗಳೂರಿನ ನಾಗರಾಜ್ ಕೋಟೆ ಅವರಿಂದ ಕನ್ನಡ ಹಾಸ್ಯ, 9-30ಕ್ಕೆ ಬೆಂಗಳೂರಿನ ದಿ ಸ್ವಿರ್ಲರ್ಸ್ ಆರ್ಟ್ ಆಫ್ ಡ್ಯಾನ್ಸ್ ಅವರಿಂದ ರೆಟ್ರೋ-ಟೂ-ಮೆಟ್ರೋ ಕನ್ನಡ ಲೆಡ್À ನೃತ್ಯ, 10 ಗಂಟೆಗೆ ಮುಂಬೈನ ಕುನಾಲ್ ಗಾಂಜಾವಾಲ ಅವರು ಹಿಂದಿ ಮತ್ತು ಕನ್ನಡ ಗೀತಗಾಯನ ಸುಧೆಯನ್ನು ಹರಿಸಲಿದ್ದಾರೆ.

ಶ್ರೀ ಎಂ.ಪಿ. ಪ್ರಕಾಶ್ ವೇದಿಕೆ (ಶ್ರೀ ಕೃಷ್ಣ ದೇವಸ್ಥಾನದ ಹಿಂಭಾಗ)

ಶ್ರೀ ಎಂ.ಪಿ. ಪ್ರಕಾಶ್ ವೇದಿಕೆ (ಶ್ರೀ ಕೃಷ್ಣ ದೇವಸ್ಥಾನದ ಹಿಂಭಾಗ)

ಶ್ರೀ ಎಂ.ಪಿ. ಪ್ರಕಾಶ್ ವೇದಿಕೆ (ಶ್ರೀ ಕೃಷ್ಣ ದೇವಸ್ಥಾನದ ಹಿಂಭಾಗ) ಜನವರಿ 11ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಎಂ.ಎಸ್. ಶೀಲಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 6-45ಕ್ಕೆ ಕೊಲ್ಕತ್ತಾದ ಪಂಡಿತ್ ಶುಧ್‍ದಶಿಲ್ ಚಟರ್ಜಿ ಅವರಿಂದ ಸಂತೂರ್ ವಾದನ, 7-15ಕ್ಕೆ ನವದೆಹಲಿಯ ಪ್ರತಿಭಾ ಪ್ರಹ್ಲಾದ್ ಅವರು ಭರತನಾಟ್ಯ, 8 ಗಂಟೆಗೆ ಬೆಂಗಳೂರಿನ ಷಾ ಹುಸೇನ್ ಪ್ರಾಜೆಕ್ಟ್- ವಸುಂಧರಾ ದಾಸ್ ಅವರು ಸೂಫಿ ಮತ್ತು ಫ್ಯೂಶನ್, 9 ಗಂಟೆಗೆ ಚೇತನಾಹರಿ ಅವರ ನಿರ್ದೇಶನದಲ್ಲಿ ಬೆಂಗಳೂರಿನ ನೂಪುರ್ ಪರ್‍ಫಾರ್ಮಿಂಗ್ ಆಟ್ರ್ಸ್ ಸೆ. ಅವರು ಕಥಕ್ ನೃತ್ಯ, 9-45ಕ್ಕೆ ಮುಂಬೈನ ತಲತ್ ಅಜೀಜ್ ಅವರು ಗಜಲ್, 10-45ಕ್ಕೆ ಬೆಂಗಳೂರಿನ ಅನಿತಾ ಕುಲಕರ್ಣಿ ಅವರು ಸಿತಾರ್ ವಾದನ, 11-15ಕ್ಕೆ ಬೆಂಗಳೂರಿನ ರಾಜಶೇಖರ್ ಮನ್ಸೂರ್ ಅವರು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ ಜರುಗಲಿದೆ

ಶ್ರೀ ವಿದ್ಯಾರಣ್ಯ ವೇದಿಕೆ: (ಬಸವಣ್ಣ ಮಂಟಪ ಎದುರು)

ಶ್ರೀ ವಿದ್ಯಾರಣ್ಯ ವೇದಿಕೆ: (ಬಸವಣ್ಣ ಮಂಟಪ ಎದುರು)

ಶ್ರೀ ವಿದ್ಯಾರಣ್ಯ ವೇದಿಕೆ: (ಎದುರು ಬಸವಣ್ಣ ಮಂಟಪ) ಜನವರಿ 11ರಂದು ಸಂಜೆ 6 ಗಂಟೆಗೆ ಬಳ್ಳಾರಿಯ ಎಸ್.ಕೆ.ಆರ್. ಜಿಲಾನಿಭಾಷಾ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, 6.30ಕ್ಕೆ ಬಳ್ಳಾರಿಯ ಕೆ. ಸುಧಾ ಅವರಿಂದ ಕರ್ನಾಟಕ ಸಂಗೀತ, 7ಕ್ಕೆ ತುಮಕೂರಿನ ಶ್ರೀಮತಿ ಬಾಲಾ ವಿಶ್ವನಾಥ ಅವರಿಂದ ಭರತ ನಾಟ್ಯ, 7.30ಕ್ಕೆ ಬೆಂಗಳೂರಿನ ಗಾಯತ್ರಿ ಶ್ರೀಧರ್ ಅವರಿಂದ ಸುಗಮ ಸಂಗೀತ, 8ಕ್ಕೆ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಅವರಿಂದ ಹಾಸ್ಯ ಕಾರ್ಯಕ್ರಮ, 8.30ಕ್ಕೆ ಹಗರಿಬೊಮ್ಮನಹಳ್ಳಿ ಕೋಗಳಿಯ ಹೆಚ್.ಎಂ. ಶಂಕರಯ್ಯ ಸುಗಮ ಸಂಗೀತ, 9ಕ್ಕೆ ಬಳ್ಳಾರಿಯ ನಾಡೋಜ ಸುಭದ್ರಮ್ಮ ಮನ್ಸೂರ್ ಮತ್ತು ಮರಿಯಮ್ಮನಹಳ್ಳಿಯ ಡಾ|| ಕೆ. ನಾಗರತ್ನಮ್ಮ ಅವರಿಂದ ರಂಗ ಗೀತೆಗಳು, 10ಕ್ಕೆ ಹೊಸಪೇಟೆಯ ಶ್ರೀ ಅಂಜಲಿ ಭರತನಾಟ್ಯ ಕಲಾ ಕೇಂದ್ರದವರಿಂದ ನೃತ್ಯ, 10.30ಕ್ಕೆ ಬಳ್ಳಾರಿಯ ಮೋಹನ್ ಕಲ್ಬುರ್ಗಿ ಅವರಿಂದ ವಾಯೋಲಿನ್ ವಾದನ, 11ಕ್ಕೆ ರಾಮನಗರದ ಎಂ.ಸಿ. ಸುಜೇಂದ್ರ ಬಾಬು ಮತ್ತು ಸಂಗಡಿಗರಿಂದ ಅನ್ನಮಾಚಾರ್ಯ ಸಂಕೀರ್ತನ ಕುರಿತು ಕೂಚಿಪುಡಿ ನೃತ್ಯ, 11.15ಕ್ಕೆ ಗುಲ್ಬರ್ಗಾದ ಜಸ್ವಿರ್ ಸಿಂಗ್ ಮತ್ತು ಸಂಗಡಿಗರಿಂದ ಹಿಂದಿ ಮತ್ತು ಕನ್ನಡದ ಗಾಯನ ನೃತ್ಯ, 12 ಗಂಟೆಗೆ ಹೊಸಪೇಟೆ ತಾ|| ಗಾದಿಗನೂರಿನ ಕೆ.ಎಂ. ಹಾಲಪ್ಪ ಮತ್ತು ತಂಡದವರು ರಕ್ತರಾತ್ರಿ ನಾಟಕ ನಡೆಯಲಿದೆ.

ಶ್ರೀ ಹಕ್ಕ-ಬುಕ್ಕ ವೇದಿಕೆ: ಕವಿ ಕಾವ್ಯ ಗಾಯನ

ಶ್ರೀ ಹಕ್ಕ-ಬುಕ್ಕ ವೇದಿಕೆ: ಕವಿ ಕಾವ್ಯ ಗಾಯನ

ಶ್ರೀ ಹಕ್ಕ-ಬುಕ್ಕ ವೇದಿಕೆ: ಜ.11ರಂದು ಬೆಳಿಗ್ಗೆ 10.30 ರಿಂದ 2 ಗಂಟೆವರೆಗೆ ಹಂಪಿ ಕನ್ನಡ ವಿವಿಯ ಕುಲಪತಿ ಡಾ|| ಹಿ.ಚಿ. ಬೋರಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಕವಿ ಕಾವ್ಯ ಗಾಯನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕವಿಗಳಾದ ಹೊಸಪೇಟೆಯ ಅಮರೇಶ್ ನುಗಡೋಣಿ, ಹಾವೇರಿಯ ನಿಂಗಪ್ಪ ಮುದೆನೂರು, ಬೆಂಗಳೂರಿನ ಡಾ|| ನಟರಾಜ ತಲಘಟ್ಟಪುರ, ರಾಯಚೂರಿನ ಚಿದಾನಂದ ಸಾಲಿ, ಬಳ್ಳಾರಿಯ ನಿಷ್ಠಿರುದ್ರಪ್ಪ, ಎ.ಎಂ. ಜಯಶ್ರೀ ಹಾಗೂ ಎಸ್. ಮಂಜುನಾಥ, ಕೊಪ್ಪಳದ ಡಾ|| ಕೆ.ಬಿ. ಬ್ಯಾಳಿ, ಕೊಟ್ಟೂರಿನ ಪ್ರವರ ಕೆ.ವಿ., ಕುಷ್ಠಗಿಯ ಠಿಡಿಚಿಪ್ರಮೋದ್ ತುರವಿಹಳ್ಳಿ ಕಾವ್ಯ ವಾಚನ ಮಾಡಲಿದ್ದಾರೆ. ಈ ಬೆಂಗಳೂರಿನ ಎನ್.ಎಸ್. ಪ್ರಸಾದ್ ಅವರ ಸಂಗೀತ ಸಂಯೋಜನೆಯಲ್ಲಿ ಗಾಯಕರಾದ ಬಳ್ಳಾರಿಯ ಕವಿತಾ ವಸಂತಕುಮಾರ್ ಹಾಗೂ ಕೆ.ಎಸ್. ಸತ್ಯನಾರಾಯ, ಹೊಸಪೇಟೆಯ ಅನುರಾಧ, ಓ. ಸುಜಾತ ಹಾಗೂ ಶರಣ ಬಸವ ವಠಾರ ಅವರು ಕವಿಗಳು ರಚಿಸಿದ ಕವನಗಳಿಗೆ ಧ್ವನಿಯಾಗಲಿದ್ದಾರೆ.

ಸಂಜೆ 4 ಗಂಟೆಯಿಂದ ನಡೆಯಲಿರುವ ಮಕ್ಕಳ ಉತ್ಸವ

ಸಂಜೆ 4 ಗಂಟೆಯಿಂದ ನಡೆಯಲಿರುವ ಮಕ್ಕಳ ಉತ್ಸವ

ಸಂಜೆ 4 ಗಂಟೆಯಿಂದ ನಡೆಯಲಿರುವ ಮಕ್ಕಳ ಉತ್ಸವದಲ್ಲಿ ಬೆಳಗಾವಿ ಜಿ|| ಕಿತ್ತೂರಿನ ಕು|| ರಜತ್ ರಾಜೇಶ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಗಾಯನ, 4.15ಕ್ಕೆ ಗುಲ್ಬರ್ಗಾದ ಕು|| ಶ್ರದ್ಧ ಎಸ್. ಪಾಟೀಲ್ ಅವರಿಂದ ಯೋಗ ಪ್ರದರ್ಶನ, 4.30ಕ್ಕೆ ಬಳ್ಳಾರಿಯ ಕು|| ಪ್ರಹ್ಲಾದ್ ಮತ್ತು ಅನುಕೃಪ ರೌಡೂರ್ ಅವರಿಂದ ಸುಗಮ ಸಂಗೀತ, 4.45ಕ್ಕೆ ಕು|| ಶ್ರೀವತ್ಸ ಹೆಮ್ಮಾಡಿ ಅವರಿಂದ ಜಾದೂ, 5ಕ್ಕೆ ಕು|| ಶ್ರೀರಕ್ಷಿತ ಲಹರಿಯಿಂದ ಭರತನಾಟ್ಯ, 5.15ಕ್ಕೆ ಕು|| ಭಾಗ್ಯಶ್ರೀ ಹೂಗಾರ್ ಅವರಿಂದ ವಚನ ಗಾಯನ ಮಾಡಲಿದ್ದಾರೆ.

English summary
Hampi Utsav 2014 got off to a colourful start yesterday (Jan 10). Physically disabled persons' sports meet exemplified and attracted the audience very much. Bellary incharge Minister PT Parameshwara Naik and Bellary MLA Anil Lad inaugurated the meet by throwing a shot put. Hampi Utsav is a three-day mega cultural festival of dance, music and drama at Hampi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X