ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರಲ್ಲಿ ನೋಡಬೇಕಾದ 52 ಸ್ಥಳಗಳ ಪಟ್ಟಿಯಲ್ಲಿ ಹಂಪಿಗೆ 2ನೇ ಸ್ಥಾನ

|
Google Oneindia Kannada News

2019ರಲ್ಲಿ ನೋಡಬೇಕಾದ 52 ಸ್ಥಳಗಳ ಪಟ್ಟಿಯೊಂದನ್ನು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ್ದು, ಅದರಲ್ಲಿ ಎರಡನೇ ಸ್ಥಾನ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಹಂಪಿಗೆ ಸಂದಿದೆ. ಮೊದಲ ಸ್ಥಾನದಲ್ಲಿ ಪೋರ್ಟರಿಕೋ ಇದೆ. ಐತಿಹಾಸ ಸ್ಮಾರಕ, ತುಂಗಾಭದ್ರಾ ನದಿಯ ಕಣ್ಮನ ಸೆಳೆಯುವ ಸ್ಥಳಗಳು ಹಾಗೂ ಇಲ್ಲಿನ ಬಂಡೆಗಲ್ಲುಗಳ ಮೂಲಕ ಸೂಜಿಗಲ್ಲಿನಂತೆ ಸೆಳೆಯುವ ಜಾಗ ಹಂಪಿ ಎಂದು ಬಣ್ಣಿಸಲಾಗಿದೆ.

ಹದಿನಾರನೇ ಶತಮಾನದಲ್ಲಿ, ವಿಜಯನಗರದ ಅರಸರ ಆಳ್ವಿಕ ವೇಳೆ ಜಗತ್ತಿನ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ನಗರ ಎನಿಸಿಕೊಂಡಿತ್ತು ಹಂಪಿ. ಸಾವಿರಕ್ಕೂ ಹೆಚ್ಚು ಸ್ಮಾರಕಗಳನ್ನು ಒಳಗೊಂಡಿರುವ ಕರ್ನಾಟಕದ ಪಾಲಿಗೆ ಹಂಪಿಯು ಪಾರಂಪರಿಕ ಸ್ಥಳಗಳ ಕಿರೀಟ ಇದ್ದಂತೆ ಎಂದು ಅಗ್ಗಳಿಕೆಯನ್ನು ವಿವರವಾಗಿ ತಿಳಿಸಲಾಗಿದೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

ಹಂಪಿಗೆ ತಲುಪುವ ಮಾರ್ಗವನ್ನು ಸಹ ವಿವರಿಸಲಾಗಿದ್ದು, ಅಲ್ಲಿ ಪ್ರವಾಸಿಗರು ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ತಿಳಿಸಲಾಗಿದೆ. ಇವೆಲ್ಲದರ ಜತೆಗೆ ಹಂಪಿಗೆ ತೆರಳುವವರು ಅಲ್ಲಿ ಸುತ್ತ ಮುತ್ತ ಎಲ್ಲಿ ಉಳಿದುಕೊಳ್ಳಬಹುದು ಎಂಬ ಮಾಹಿತಿ ಕೂಡ ಇದೆ. ಅಂದಹಾಗೆ ಕೇವಲ ಭಾರತದಿಂದ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದ ಸ್ಥಳಗಳ ಪೈಕಿ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಸ್ಥಳ ಹಂಪಿ.

Hampi in 2nd place in 2019 must visit place list of New York Times

ಸ್ಮಾರಕಗಳ ರಕ್ಷಣೆ ಆಗಬೇಕು. ಅವುಗಳನ್ನು ಇನ್ನಷ್ಟು ಚೆಂದಕ್ಕೆ ಪ್ರದರ್ಶನ ಮಾಡಬೇಕು. ಪ್ರವಾಸೋದ್ಯಮ ದೃಷ್ಟಿಯಿಂದ ಇದು ಬಹಳ ಮುಖ್ಯ ಎಂದು ಪ್ರವಾಸಿಗರು ಅಭಿಪ್ರಾಯ ಪಡುತ್ತಾರೆ.

English summary
Karnataka state's Hampi is the only place of South Asia listed in 2019 must visit place list of New York Times. There 52 destinations listed by New York Times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X