ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಕರ ಜಗಳದಲ್ಲಿ ಬಡವಾಗುತ್ತಿರುವ ಕುರುಬ ಸಮುದಾಯ

By Gururaj
|
Google Oneindia Kannada News

Recommended Video

ಸಿದ್ದರಾಮಯ್ಯ ಹಾಗು ಎಚ್ ವಿಶ್ವನಾಥ್ ಜಗಳದಲ್ಲಿ ಕುರುಬ ಸಮಾಜ ಬಡವಾಗ್ತಿದೆ

ಬೆಂಗಳೂರು, ಜುಲೈ 02 : ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ಕುರುಬ ಸಮುದಾಯಕ್ಕೆ ಹಿನ್ನಡೆ ಆಗುತ್ತಿದೆ. ಸಮಾಜದ ಹಿರಿಯರಾದ ಎಚ್.ವಿಶ್ವನಾಥ್‍ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ಮುಸುಕಿನ ಜಗಳದಲ್ಲಿ ಕುರುಬ ಸಮಾಜ ಬಡವಾಗುತ್ತಿದೆ ಎಂದು ಹಾಲುಮತ ಮಹಾಸಭಾ ಅಭಿಪ್ರಾಯಪಟ್ಟಿದೆ.

ಭಾರತ ದೇಶದಲ್ಲಿ 14 ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಕುರುಬ ಸಮಾಜ ಕರ್ನಾಟಕದಲ್ಲಿ 30 ಜಿಲ್ಲೆಗಳಲ್ಲೂ ವಿಸ್ತಾರವಾಗಿ ಹರಡಿಕೊಂಡಿದೆ. ಆದರೆ, ಸಮಾಜ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಿಲ್ಲದೇ ಇರುವುದು ದುರಂತ.

ಸಿದ್ದರಾಮಯ್ಯ ಮಾತ್ರ ಕುರುಬರೇ ನಾನು ಕುರುಬನಲ್ಲವೇ?: ವಿಶ್ವನಾಥ್ಸಿದ್ದರಾಮಯ್ಯ ಮಾತ್ರ ಕುರುಬರೇ ನಾನು ಕುರುಬನಲ್ಲವೇ?: ವಿಶ್ವನಾಥ್

ಇಂತಹ ಸ್ಥಿತಿಯಲ್ಲಿ ಕುರುಬರು ಜೀವಿಸುತ್ತಿರುವಾಗ ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯಮಂತ್ರಿಯಾಗಿದ್ದರು ಎಂಬುದು ಹೆಮ್ಮೆ ತರುವಂತದ್ದು. ಎಚ್. ವಿಶ್ವನಾಥ ಅವರ ಕೊಡುಗೆಯೂ ಸಮಾಜಕ್ಕೆ ಅಪಾರವಾದದ್ದು. ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪನೆ ಮಾಡುವಲ್ಲಿ ಸಂಸ್ಥಾಪನಾ ಅಧ್ಯಕ್ಷರಾಗಿ ಹಿರಿಯಣ್ಣನ ಸ್ಥಾನದಲ್ಲಿ ನಿಂತಿದ್ದರು ವಿಶ್ವನಾಥ್.

Halumatha Mahasabha open letter to all political leaders

ಸಮಾಜದಲ್ಲಿರುವ ಬೆರಳಣಿಕೆಯಷ್ಟು ರಾಜಕೀಯ ಮುಖಂಡರ ಏಳಿಗೆಯನ್ನು ಕುರುಬ ಸಮಾಜವು ಬಯಸುತ್ತಿದೆ. ಆದರೆ, ರಾಜಕೀಯ ವಿಷಯಗಳಿಗೆ ಸಂಬಂಧಪಟ್ಟಂತೆ ವೈಯಕ್ತಿಕ ಭಿನ್ನಾಭಿಪ್ರಾಯಗಳು
ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು. ಕುಗ್ಗಿರುವ ಸಮಾಜವನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡಿದೆ.

ಕನಕ ಗುರುಪೀಠದ ಸಂಸ್ಥಾಪಕರಾದ ಎಚ್.ವಿಶ್ವನಾಥ್ ಅವರು ಮಠದಲ್ಲಿ ಜಗದ್ಗುರುಗಳ ಜೊತೆ ಚರ್ಚೆ ನಡೆಸಬಹುದಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಅವರು ಬಂದಾಗ ಆಹ್ವಾನಿಸಿದ್ದು ಎಚ್. ವಿಶ್ವನಾಥ್‌ ಅವರು. ನಂತರ ರಾಜಕೀಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಗೆ ಕನಕ ಗುರುಪೀಠದ ಜಗದ್ಗುರುಗಳು ಹೊಣೆ ಹೇಗಾಗುತ್ತಾರೆ?.

ಜಗದ್ಗುರುಗಳು ಕುರುಬ ಸಮಾಜದ ಜಾಗೃತಿಗೆ, ಸಂಘಟನೆಗಾಗಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಅಷ್ಟಕ್ಕೂ ಕುರುಬ ಸಮಾಜದಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಳಾಗಿದ್ದರೂ ಎಂಬ ಹೆಮ್ಮೆ ಎಂಬುದನ್ನು ಬಿಟ್ಟರೆ ಕುರುಬ ಸಮಾಜಕ್ಕೆ ನಿರೀಕ್ಷಿತ ಮಟ್ಟದಲ್ಲಿ ಅನುದಾನಗಳು ಬಿಡುಗಡೆಯಾಗಿಲ್ಲ.

"ಸರ್ವರಿಗೂ ಸಮಪಾಲು ಸಮಬಾಳು" ಎಂಬ ಘೋಷಣೆಯಲ್ಲಿ ಅನ್ಯ ಸಮಾಜದ ಕಡೆ ಗಮನ ಹರಿಸಿದ ಸರ್ಕಾರಕ್ಕೆ ಕುರುಬರು ವಿಶೇಷವಾಗಿ ಕಂಡಿಲ್ಲ. ಸಮಾಜದ ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾಗ, ಸಮಾಜದ ಗುರುಪೀಠ ಅವರ ಪರವಾಗಿ ನಿಲ್ಲುವುದರಲ್ಲಿ ಯಾವುದೇ ತಪ್ಪಿಲ್ಲ. ಸಿದ್ದರಾಮಯ್ಯನವರ ಸ್ಥಾನದಲ್ಲಿ ಎಚ್. ವಿಶ್ವನಾಥ್ ಇದ್ದರೂ ಅವರ ಪರವಾಗಿಯೇ
ಧ್ವನಿಯಾಗುತ್ತಿದ್ದರು.

ಸಮಾಜದ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ಜಗದ್ಗುರುಗಳು ಹೇಳಿಕೆ ನೀಡಿರುವುದನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಜಗದ್ಗುರುಗಳು ಗೆದ್ದೆತ್ತಿನ ಬಾಲ ಹಿಡಿಯುವುದೇ ಆಗಿದ್ದಿದ್ದರೆ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಲ್ಲ. ಆಡಳಿತ ನಡೆಸುತ್ತಿರುವುದು ಎಚ್. ವಿಶ್ವನಾಥ್ ಅವರು ಪ್ರತಿನಿಧಿಸುತ್ತಿರುವ ಜೆಡಿಎಸ್ ಪಕ್ಷ.

ಸಮಾಜ ಯುವಶಕ್ತಿ ಜಾಗೃತವಾಗುತ್ತಿದೆ. ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಮಾರ್ಗದರ್ಶದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಸದೃಢರಾಗಲು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುತ್ತಿವೆ.

ರಾಜಕೀಯದ ಭಿನ್ನಾಭಿಪ್ರಾಯಗಳಿಗೆ ಕುರುಬ ಸಮಾಜವನ್ನು, ಸಮಾಜದ ಸ್ವಾಭಿಮಾನದ ಸಂಕೇತವಾಗಿರುವ ಶ್ರೀ ಕನಕ ಗುರುಪೀಠವನ್ನು ಜಗದ್ಗುರುಗಳನ್ನು ಹೊಣೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ.

ರಾಜಕೀಯ ಭಿನ್ನಾಭಿಪ್ರಾಯಗಳಿಂದ ಸಮಾಜದಲ್ಲಿ ಒಡಕು ಉಂಟಾಗುತ್ತದೆ. ಕುರುಬ ಸಮಾಜ ಸಂಘಟನೆಯಾಗಲು ಎಚ್. ವಿಶ್ವನಾಥ್ ಅವರ ಮಾರ್ಗದರ್ಶನವೂ ಅತ್ಯಗತ್ಯವಾಗಿದೆ. ಈ ರೀತಿಯ ಅಸಮಾಧಾನದ ಬಹಿರಂಗ ಹೇಳಿಕೆಗಳು ಸಮಾಜದ ಒಗ್ಗಟ್ಟಿನಲ್ಲಿ ಒಡಕು ಮೂಡಿಸುವಂತದ್ದು.

ದೇಶದಲ್ಲಿ 14 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಸಮಾಜವನ್ನು ಒಗ್ಗೂಡಿಸಿ ಎರಡನೇ ಹಂತದ ನಾಯಕರನ್ನು ಬೆಳೆಸುವ ರಾಜಕೀಯ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹಿಡಿತ ಸಾಧಿಸುವತ್ತ ಪ್ರಯತ್ನಗಳಾಗಲಿ ಎಂದು ಸಮಸ್ತ ಕುರುಬ ಸಮಾಜದ ಪರವಾಗಿ ಹಾಲುಮತ ಮಹಾಸಭಾ ರಾಜಕೀಯ ಮುಖಂಡರಿಗೆ ವಿನಂತಿ ಮಾಡಿಕೊಳ್ಳುತ್ತಿದೆ.

English summary
JD(S) leader H. Vishwanath accusing the Niranjanananda Puri Swamiji of Kaginele mutt for owing allegiance to Congress and former Chief Minister Siddaramaiah. Here is a letter of Halumatha Mahasabha to all political leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X