ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಭ ಸುದ್ದಿ: ಎಚ್ಎಎಲ್ ನಾಗರಿಕ ವಿಮಾನಯಾನಕ್ಕೆ ಸಿದ್ಧ

By Mahesh
|
Google Oneindia Kannada News

ಬೆಂಗಳೂರು, ಜುಲೈ 08: ಹಿಂದೂಸ್ಥಾನ್ ಏರೋ ನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಾಗರಿಕ ವಿಮಾನಯಾನಕ್ಕೆ ಬೇಕಾದ ಸಕಲ ಸೌಲಭ್ಯ ಹಾಗೂ ಮೂಲ ಸೌಕರ್ಯ ಒದಗಿಸಲು ಸಿದ್ಧ ಎಂದು ಹೈಕೋರ್ಟಿಗೆ ತಿಳಿಸಿದೆ. ಈ ಮೂಲಕ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಮರು ಚಾಲನೆ ಸಿಗುವ ಲಕ್ಷಣಗಳು ಕಂಡು ಬಂದಿದೆ.

ವಿಮಾನಯಾನ ಪ್ರಾಧಿಕಾರದ ಉದ್ಯೋಗಿ(ಎಎಐ) ಗಳು ಎಚ್ಎಎಲ್ ವಿಮಾನ ನಿಲ್ದಾಣ ಪುನರ್ ಆರಂಭಕ್ಕೆ ಅನುಮತಿ ಕೋರಿ ಹೈಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಬಗ್ಗೆ ವಿವರಣೆ ನೀಡುವಂತೆ ಎಚ್ಎಎಲ್ ಸಂಸ್ಥೆಗೆ ಸೂಚಿಸಿತ್ತು. [ಎಚ್ಎಎಲ್ ನೂತನ ಅಧ್ಯಕ್ಷ ಸುವರ್ಣ ರಾಜು ಸಂದರ್ಶನ]

ಇದಕ್ಕೆ ಉತ್ತರಿಸಿದ ಎಚ್ಎಎಲ್ ನ ವಿಮಾನ ಸೇವಾ ಕೇಂದ್ರದ ಮುಖ್ಯಸ್ಥ ರಾಜೇಂದ್ರ ಶರ್ಮ ಅವರು ಹೈಕೋರ್ಟಿಗೆ ಎಚ್ಎಎಲ್ ವಿಮಾನ ನಿಲ್ದಾಣ ಎಲ್ಲಾ ರೀತಿಯ ವಿಮಾನ ಹಾರಾಟಕ್ಕೆ ಸೂಕ್ತವಾಗಿದೆ ಹಾಗೂ ಜನದಟ್ಟಣೆ ನಿಭಾಯಿಸುವ ಶಕ್ತಿಯಿದೆ ಎಂದು ಉತ್ತರಿಸಿದ್ದಾರೆ.

HAL Airport ready for reopening of passenger flights, court told

ಈ ಹಿಂದೆ ಎಚ್‍ಎಎಲ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಅಗತ್ಯ ಈಗ ಹೆಚ್ಚಾಗಿದೆ ಈ ಬಗ್ಗೆ ಗಮನ ಹರಿಸಿ ಎಂದು ಎಚ್ಎಎಲ್ ನಿರ್ದೇಶಕ ಆರ್.ಕೆ ತ್ಯಾಗಿ ಮಾಡಿದ ಮನವಿಗೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿ ತಲೆಯಾಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದಾದ ಬಳಿಕ ಹಿಂದೂಸ್ಥಾನ್ ಏರೋ ನಾಟಿಕ್ಸ್ ಲಿಮಿಟೆಡ್ ನ ನೂತನ ಅಧ್ಯಕ್ಷರಾಗಿ 56 ವರ್ಷದ ಟಿ. ಸುವರ್ಣ ರಾಜು ಅಧಿಕಾರ ವಹಿಸಿಕೊಂಡಿದ್ದರು. ವಿಮಾನ ನಿಲ್ದಾಣ ಪುನರಾರಂಭಕ್ಕೆ ಒಲವು ತೋರಿದ್ದರು. [ಎಚ್ ಎಎಲ್ ಪುನರ್ ಅರಂಭ ಸಾಧ್ಯವೇ?]

ಎಚ್‍ಎಎಲ್ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸುವ ಅಗತ್ಯದ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕೂಡಾ ಬೆಂಬಲ ವ್ಯಕ್ತಪಡಿಸಿ ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಣಪತಿ ರಾಜು ಅವರಿಗೆ ಪತ್ರ ಬರೆದಿದ್ದರು.

ಎಚ್ಎಎಲ್ ವಿಮಾನ ನಿಲ್ದಾಣ 3,307 ಮೀಟರ್ ರನ್ ವೇ ಹೊಂದಿದ್ದು, ದೇಶದಲ್ಲೇ ಅತಿ ವಿಸ್ತೃತ ರನ್ ವೇಗಳಲ್ಲಿ ಒಂದೆನಿಸಿದೆ. ಬೋಯಿಂಗ್ 747 ನಂಥ ದೊಡ್ಡ ವಿಮಾನಗಳನ್ನು ನಿಭಾಯಿಸಬಲ್ಲದು. 2008ರಲ್ಲಿ ಎಚ್ಎಎಲ್ ನಲ್ಲಿ ನಾಗರಿಕ ವಿಮಾನ ಯಾನ ನಿಲ್ಲಿಸಲಾಗಿದೆ. ಇದರಿಂದಾಗಿ ಸುಮಾರು 1,500 ಕೋಟಿ ರು ಎಚ್ಎಎಲ್ ಗೆ ಹಾಗೂ ಎಎಐ ಗೆ 700 ಕೋಟಿ ರು ನಷ್ಟವುಂಟಾಗಿದೆ.

ಕೆಂಪೇಗೌಡ ಅಂತಾರಾಷ್ರೀಯ ವಿಮಾನ ನಿಲ್ದಾಣದಲ್ಲಿ ಹೆಚ್ಚುತ್ತಿರುವ ವಿಮಾನ ಹಾರಾಟ ಹಾಗೂ ಜನಸಂದಣಿ ತಗ್ಗಿಸಲು ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ.

ಮಾರ್ಚ್ 23,2008ರಂದು ವಾಣಿಜ್ಯ ಉದ್ದೇಶಿತ ವಿಮಾನಯಾನವನ್ನು ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಸರ್ಕಾರ ಹಾಗೂ ಈ ಹಿಂದಿನ ಬಿಐಎಎಲ್(ಈಗಿನ ಕೆಐಎ) ನಡುವೆ ಆದ ಒಪ್ಪಂದದ ಪ್ರಕಾರ ದೇವನಹಳ್ಳಿ ವಿಮಾನ ನಿಲ್ದಾಣದಿಂದ 150 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಮತ್ತೊಂದು ವಾಣಿಜ್ಯ ಉದ್ದೇಶಿತ ವಿಮಾನ ನಿಲ್ದಾಣ ತಲೆ ಎತ್ತುವಂತಿಲ್ಲ. ಈ ಒಪ್ಪಂದದ ಅವಧಿ 2029ರ ತನಕ ಇದೆ.

English summary
Hindustan Aeronautics Ltd. (HAL) on Tuesday(July 07) told the High Court of Karnataka that it would provide all facilities and infrastructure at HAL Airport if it was allowed to operate domestic or international flights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X