ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್1ಎನ್ 1 ಲಕ್ಷಣಗಳೇನು? ಮುನ್ನೆಚ್ಚರಿಕೆ ವಿಧಾನಗಳೆನು?

By Mahesh
|
Google Oneindia Kannada News

ಬೆಂಗಳೂರು, ಫೆ.8: ಹಂದಿಜ್ವರ ಸೋಂಕು ಕರ್ನಾಟಕ ಸೇರಿ ದೇಶದ ಹಲವೆಡೆ ವ್ಯಾಪಕ ಹರಡುತ್ತಿದ್ದು, ಭಾರತೀಯ ವೈದ್ಯಕೀಯ ಸಂಘ ಹಾಗೂ ಕರ್ನಾಟಕದ ಅರೋಗ್ಯ ಇಲಾಖೆ ರೋಗದ ಬಗ್ಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ಪ್ರಕಟಿಸಿವೆ.

ಕರ್ನಾಟಕದಲ್ಲಿ ಶೀತ ವಾತಾವರಣ ಮುಂದುವರೆದಿರುವ ಹಿನ್ನೆಲೆಯಲ್ಲಿ ರೋಗ ಹರಡುವ ಭೀತಿ ಹೆಚ್ಚಾಗಿದ್ದು, ಜನತೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ವೈದಾಧಿಕಾರಿಗಳು ಹೇಳಿದ್ದಾರೆ.

ಸಾಮಾನ್ಯವಾಗಿ ಗಾಳಿಯಲ್ಲಿ ಹರಡುವ ರೋಗಾಣುಗಳು ಚಿಕ್ಕಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಸೋಂಕಿದರೆ ಅದು ಮಾರಣಾಂತಿಕವಾಗಿ ಪರಿಣಮಿಸುತ್ತದೆ. ಹೀಗಾಗಿ ಕೆಮ್ಮು, ಜ್ವರ ಬಾಧಿತರು ತಕ್ಷಣವೇ ಜಿಲ್ಲಾ ಅಥವಾ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು.ಸೂಕ್ತ ಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಜೀವಕ್ಕೇ ಆಪತ್ತು ಎಂದು ವೈದ್ಯರು ಎಚ್ಚರಿಸಿದ್ದಾರೆ. [ವೈಟ್ ಫೀಲ್ಡ್ ನಲ್ಲಿ ಹಂದಿಜ್ವರಕ್ಕೆ ಮೊದಲ ಬಲಿ]

ಎಲ್ಲಿ ಹರಡಿದೆ ಭೀತಿ?: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರ 12 ಹೊಸ ಪ್ರಕರಣಗಳು ಪತ್ತೆಯಾಗಿವೆ.ಉಳಿದಂತೆ ದಾವಣಗೆರೆ, ತುಮಕೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಂದೊಂದು ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಕನ್ನಡದಲ್ಲಿನ ಪ್ರಕರಣವನ್ನು ಮಣಿಪಾಲ್‌ನಲ್ಲಿನ ಮಣಿಪಾಲ್‌ ಆಸ್ಪತ್ರೆಯ ಪ್ರಯೋಗಾಲವು ದೃಢಪಡಿಸಿದರೆ, ಬೆಂಗಳೂರು ನಗರ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಕರಣಗಳು ದಾಖಲಾಗಿವೆ.

Minor fever with breathlessness can be swine flu: IMA


ಹಂದಿಜ್ವರದ ಲಕ್ಷಣಗಳೇನು?

* ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಗಾಳಿಯ ಮೂಲಕ ರೋಗಾಣುಗಳು ಹರಡುತ್ತವೆ.
* ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು ಮತ್ತು ವಾಂತಿ ಮತ್ತು ಬೇಧಿ.

* ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ರೋಗ ಸಂಭವವಿರುತ್ತದೆ.
* ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ರೋಗ ಹರಡಬಹುದು.
* ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ಆಹಾರ ವಸ್ತುಗಳಿಗೆ ಸೇರಿದರೆ ಸೊಂಕು ತಗಲುವ ಸಾಧ್ಯತೆಯಿದೆ.
* ಮೂಗಿಗೆ ಸದಾ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯಬಹುದು.

ಎಚ್ಚರಿಕೆ ಕ್ರಮಗಳು:

* ಮನೆಯಲ್ಲಿ ಬಿಸಿನೀರನ್ನು ಸೇವಿಸುವುದು, ಸಣ್ಣ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು, ನೀರಿನಲ್ಲಿ ಆಡಲು ಬಿಡಬಾರದು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
* ನದಿ ಪಾತ್ರದ ಪ್ರವಾಸಿತಾಣಗಳಿಗೆ ಹೋಗುವಾಗ, ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವೇಳೆ ಮುಖಕ್ಕೆ ಮಾಸ್ಕ್ ಧರಿಸಬೇಕು.
* ಮನೆಯಲ್ಲಿ ಯಾರಿಗಾದರೂ ಎಚ್1ಎನ್1 ಸೋಂಕಿದರೆ ಇತರೆ ಸದಸ್ಯರು ಮಾಸ್ಕ್‌ಗಳನ್ನು ಧರಿಸಬೇಕು.
* ಸೋಂಕು ತಗುಲಿದವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಹೆಚ್ಚಾಗಿ ಅವರೊಂದಿಗೆ ಸಂಪರ್ಕ ಬೆಳೆಸಬಾರದು ಮತ್ತು ಸೇವಿಸುವ ಆಹಾರ ಪಾತ್ರೆಗಳನ್ನೂ ಸಹ ಕ್ರಿಮಿನಾಶಕ ಅಥವಾ ಉಪ್ಪು ನೀರಿನಿಂದ ತೊಳೆಯಬೇಕು.
* ಈ ರೋಗದ ಸೋಂಕಿರುವ ಸ್ಥಳಗಳಲ್ಲಿ ಮೂಗು, ಬಾಯಿಯನ್ನು ಕರವಸ್ತ್ರ ಅಥವಾ ಮಾಸ್ಕ್‌ನಿಂದ ಮುಚ್ಚಿಕೊಳ್ಳಬೇಕು. ಕೈ ತೊಳೆಯದೆ ಯಾವುದೇ ಆಹಾರ ಸೇವನೆ ಮಾಡಬಾರದು. ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು.

English summary
The Indian Medical Association (IMA), Karnataka Health department issued a set of guidelines to tackle swine flu and urged citizens not to neglect minor cases of fever with breathlessness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X