ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಗರದಲ್ಲಿ ಎಚ್1ಎನ್1 ಭೀತಿ ಮತ್ತೆ ಆವರಿಸುತಿದೆ!

By Srinath
|
Google Oneindia Kannada News

ಬೆಂಗಳೂರು, ಜೂನ್ 23: ಎಚ್1 ಎನ್1 ಮಹಾಮಾರಿ ಭೀತಿ ಮತ್ತೆ ಆವರಿಸುತ್ತಿದೆ. ಸಣ್ಣಗೆ ಜ್ವರ, ಶೀತ, ಕೆಮ್ಮು. ಮೈಕೈ ನೋವಿನ ಮೂಲಕ ಕಾಣಿಸಿಕೊಳ್ಳುವ ಹಂದಿಜ್ವರ ಹೆಸರಿನ H1N1 ಅಥವಾ influenza ಕಾಯಿಲೆ ಈ ವರ್ಷ 14 ಮಂದಿ ಪ್ರಾಣಕ್ಕೆ ಸಂಚಕಾರ ತಂದಿದೆ.

ಇಂತಹ ವಿಷಯ ಲಕ್ಷಣಗಳುಳ್ಳ ಕಾಯಿಲೆ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡದೆ 36 ಗಂಟೆಗಳೊಳಗಾಗಿ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ಇದುವರೆಗೂ ಎಚ್1ಎನ್1 (ಹಂದಿಜ್ವರ) ಪ್ರಕರಣಗಳು 164 ಪತ್ತೆಯಾಗಿವೆ. ಇನ್ನು 2013ರಲ್ಲಿ ರಾಜ್ಯದಲ್ಲಿ ಕೇವಲ 122 ಹಂದಿಜ್ವರ ಪ್ರಕರಣಗಳು ಪತ್ತೆಯಾಗಿದ್ದವು. ಬೆಂಗಳೂರು, ಮೈಸೂರು, ಉಡುಪಿ ಮತ್ತು ಶಿವಮೊಗ್ಗದಲ್ಲಿ ಹಂದಿಜ್ವರ ಪ್ರಕರಣಗಳು ದುಪ್ಪಟ್ಟಾಗಿವೆ. ಉಡುಪಿಯಲ್ಲಿ 6 ಮತ್ತು ಮೈಸೂರಿನಲ್ಲಿ 3 ಮಂದಿ ಅಸುನೀಗಿದ್ದಾರೆ.

h1n1-cases-surge-across-karnataka-and-bangalore-worst-hit

ಬೆಂಗಳೂರಿನಲ್ಲಿ ಅಲ್ಲಲ್ಲಿ ಎಚ್1 ಎನ್1 ಕಾಣಿಸಿಕೊಂಡಿದೆ. ಸಾಂಕ್ರಾಮಿಕವಾಗುವ ಹಂತಕ್ಕೆ ತಲುಪಿಲ್ಲ. ಎಲ್ಲೆಲ್ಲಿ ರೋಗ ಕಾಣಿಸಿಕೊಂಡಿದೆಯೋ ಅಲ್ಲೆಲ್ಲಾ ಸುಮುತ್ತಲ 50 ಮನೆಗಳಲ್ಲಿ ಪರೀಕ್ಷೆ ಮಾಡಲಾಗಿದೆ ಬಿಬಿಎಂಪಿಯ ಎಲ್ಲಾ ವಾರ್ಡುಗಳಲ್ಲಿಯೂ ಆರೋಗ್ಯ ಇನ್ಸಪೆಕ್ಟರುಗಳನ್ನು ಜಾಗೃತವಾಸ್ಥೆಯಲ್ಲಿಡಲಾಗಿದೆ. ದೈನಂದಿನ ಮಟ್ಟದಲ್ಲಿ ವರದಿ ತರಿಸಿಕೊಂಡು ಅಧ್ಯಯನ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ವ್ಯಾಪ್ತಿಯ ಸಾಂಕ್ರಾಮಿಕ ರೋಗಗಳ ನೋಡಲ್ ಅಧಿಕಾರಿ ಡಾ. ಮಂಜುನಾಥ್ ಹೆಗ್ಡೆ ಅವರು ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಸಾಂಕ್ರಾಮಿಕ ರೋಗಗಳ ನೋಡಲ್ ಅಧಿಕಾರಿ ಡಾ. ಸುಮಿತ್ರಾ ದೇವಿ ಅವರು 'ಆಶಾ ಮತ್ತು ಸಂಪರ್ಕ ಕಾರ್ಯಕರ್ತರ ನೆರವು ಪಡೆದು ಎಲ್ಲೆಲ್ಲಿ ಎಚ್1 ಎನ್1 ತಲೆಯೆತ್ತಿದೆಯೋ ಆ ಭಾಗಗಳಲ್ಲಿ ವಿಶೇಷವಾಗಿ ಗಮನ ಹರಿಸಲಾಗಿದೆ. ಈ ರೋಗಕ್ಕೆ ತುತ್ತಾದವರು ದೇಹಸ್ಥಿತಿ ವಿಷಯಗೊಂಡ ಬಳಿಕ ಆಸ್ಪತ್ರೆಗೆ ಧಾವಿಸಿ ಬರುತ್ತಾರೆ. ಹೆಚ್ಚು ನಿರ್ಲಕ್ಷ ಮಾಡಿದರೆ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಕೊನೆಗೆ ಸಾವಿನಲ್ಲಿ ಅಂತ್ಯಗೊಳ್ಳುತ್ತದೆ' ಎಂದು ಎಚ್ಚರಿಸಿದ್ದಾರೆ.

ತಮ್ಮ ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಎಚ್1 ಎನ್1 ಕಾಣಿಸಿಕೊಂಡಿದ್ದು, 34 ಪ್ರಕರಣಗಳು ಪತ್ತೆಯಾಗಿವೆ ಎಂದು ಉಡುಪಿ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಮಚಂದ್ರ ಬಾಯಿರಿ ಅವರು ಹೇಳಿದ್ದಾರೆ. (ಐದು ಜಿಲ್ಲೆಗಳಲ್ಲಿ ಡೆಂಗ್ಯೂ ಪರೀಕ್ಷಾ ಕೇಂದ್ರ)

ಎಲ್ಲಾ ವೈದ್ಯರು ಮತ್ತು ವೈದ್ಯಕೀಯ ಕಾಲೇಜುಗಳ ಸಿಬ್ಬಂದಿಗೆ ಎಚ್1 ಎನ್1 ಲಕ್ಷಣ ಬಗ್ಗೆ ತಾಳ್ಮೆಯಿಂದ ವಿವರಿಸುವಂತೆ ಸೂಚಿಸಿದ್ದೇನೆ. 36 ಗಂಟೆಗಳ ನಂತರವೂ ರೀಗ ಲಕ್ಷಣಗಳು ಕಡಿಮೆಯಾಗದಿದ್ದರೆ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿಲಾಗಿದೆ ಎಂದು ಡಾ. ಬಾಯಿರಿ ಅವರು ತಿಳಿಸಿದ್ದಾರೆ.

ಮಣಿಪಾಲದ ಕಸ್ತೂರ್ ಬಾ ಕಾಲೇಜಿನಲ್ಲಿ ಮೂವರು ನರ್ಸುಗಳು, ಒಬ್ಬ ಸಿಬ್ಬಂದಿ, ಸ್ವತಃ ಒಬ್ಬ ವೈದ್ಯರಲ್ಲು ಎಚ್1 ಎನ್1 ಕಾಣಿಸಿಕೊಂಡಿದೆ. Tamiflu ಗುಳಿಗೆಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿದೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ.

English summary
H1N1 Cases Surge Across Karnataka and Bangalore Worst Hit - Communicable Diseases, Health Department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X