ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕಕ್ಕೂ ಕಾಲಿಟ್ಟ ಮಹಾಮಾರಿ ಎಚ್ 1 ಎನ್ 1

|
Google Oneindia Kannada News

ಬೆಂಗಳೂರು, ಫೆ. 4: ಎಚ್ 1 ಎನ್ 1 ಮಹಾಮಾರಿ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ. ಹಂದಿ ಜ್ವರ ಸೋಂಕಿನಿಂದ ಬಳಲುತ್ತಿರುವ ಸಂಖ್ಯೆ ಕಳೆದ ಒಂದು ವಾರದಲ್ಲಿ ದ್ವಿಗುಣವಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ಒಂದು ವಾರದಲ್ಲಿ ಸೋಂಕಿನಿಂದ ಬಳಲುತ್ತಿರುವ 24 ಪ್ರಕರಣಗಳು ದಾಖಲಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 54 ಕ್ಕೆ ಏರಿದೆ. ಆದರೆ ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಜನವರಿ 1 ರಿಂದ ಫೆಬ್ರವರಿ 1 ಅಂದರೆ ಒಂದು ತಿಂಗಳ ಅವಧಿಯಲ್ಲಿ ಒಟ್ಟು 54 ಜನರಲ್ಲಿ ಹಂದಿ ಜ್ವರದ ಸೋಂಕು ಕಾಣಿಸಿಕೊಂಡಿದೆ.[191 ಜನರನ್ನು ಬಲಿ ತೆಗೆದುಕೊಂಡ ಎಚ್ 1 ಎನ್ 1]

h1n1

ಮಹಾನಗರದಲ್ಲಿ ಭೀತಿ
ಬೆಂಗಳೂರು ನಗರ ವ್ಯಾಪ್ತಿಯಲ್ಲೇ ಅತಿ ಹೆಚ್ಚು ಅಂದರೆ ಒಟ್ಟು 37 ಪ್ರಕರಣಗಳು ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಬಗೆಯ ರೋಗ ಲಕ್ಷಣಗಳುಳ್ಳ 268 ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿ ಬರಬೇಕಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ತುಮಕೂರಿನಲ್ಲೂ ಸಹ ರೋಗ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ.

ಉತ್ತರ ಭಾರತ ಮತ್ತು ಆಂಧ್ರ ಪ್ರದೇಶಕ್ಕೆ ಸೀಮಿತವಾಗಿದ್ದ ಮಹಾಮಾರಿ ಇದೀಗ ರಾಜ್ಯವನ್ನು ವ್ಯಾಪಿಸುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ದೇಶಾದ್ಯಂತ ಒಟ್ಟು 191 ಜನ ಎಚ್ 1 ಎನ್ 1 ಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಸರ್ಕಾರ ವರದಿ ಫೆಬ್ರವರಿ 3 ರಂದು ವರದಿ ನೀಡಿತ್ತು.

ಹಂದಿಜ್ವರದ ಲಕ್ಷಣಗಳೇನು
* ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು ಮತ್ತು ವಾಂತಿ ಮತ್ತು ಬೇಧಿ [ಹಂದಿಜ್ವರದ ಲಕ್ಷಣ ಮತ್ತು ಹರಡುವ ಬಗೆ ಹೇಗೆ?]
* ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ರೋಗ ಸಂಭವವಿರುತ್ತದೆ.
* ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ರೋಗ ಹರಡಬಹುದು.
* ಇದೊಂದು ಸಾಂಕ್ರಾಮಿಕ ಕಾಯಿಲೆ
* ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ಆಹಾರ ವಸ್ತುಗಳಿಗೆ ಸೇರಿದರೆ ಸೊಂಕು ತಗಲುವ ಸಾಧ್ಯತೆಯಿದೆ.
* ಮೂಗಿಗೆ ಸದಾ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯಬಹುದು.

English summary
In one week, the number of confirmed H1N1 cases in Karnataka has more than doubled. Health Department sources said that from the 24 positive cases reported last week, the number has now jumped to 54.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X