ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈ ತಪ್ಪಿದ ಬಿಜೆಪಿ ಟಿಕೆಟ್; ಎಚ್. ವಿಶ್ವನಾಥ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಜೂನ್ 18 : ಕರ್ನಾಟಕ ವಿಧಾನಸಭೆಯಿಂದ 7 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಜೂನ್ 29ರಂದು ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲಲು ಸಾಧ್ಯವಿರುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

Recommended Video

MLC ಟಿಕೆಟ್ ಕೈ ತಪ್ಪಿದ್ದಕ್ಕೆ ಎಚ್ ವಿಶ್ವನಾಥ್ ಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ | Siddaramaiah | H Vishwanath

ಮಾಜಿ ಸಚಿವ, ಜೆಡಿಎಸ್‌ನಿಂದ ಬಿಜೆಪಿಗೆ ಬಂದ ಎಚ್. ವಿಶ್ವನಾಥ್‌ಗೆ ವಿಧಾನ ಪರಿಷತ್ ಟಿಕೆಟ್ ಸಿಗಲಿದೆ ಎಂಬ ಸುದ್ದಿಗಳು ಹಬ್ಬಿತ್ತು. ಎಂಟಿಬಿ ನಾಗರಾಜ್, ಆರ್. ಶಂಕರ್ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದು, ವಿಶ್ವನಾಥ್‌ಗೆ ನಿರಾಸೆಯಾಗಿದೆ.

ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು! ಪರಿಷತ್ ಟಿಕೆಟ್ ಘೋಷಣೆ; ಸಿದ್ದರಾಮಯ್ಯ ಮನೆಗೆ ನಾಯಕರ ದಂಡು!

ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಎಚ್. ವಿಶ್ವನಾಥ್ ಭೇಟಿಯಾಗಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನಾನು ಬಿಜೆಪಿಗೆ ಹೊಸಬ, ಪಕ್ಷದ ಆಳ, ಅಗಲ ಗೊತ್ತಿಲ್ಲ. ಇದರಿಂದ ನಾನು ಹತಾಶನಾಗಿಲ್ಲ. ಯಡಿಯೂರಪ್ಪ ಅವರ ಮೇಲೆ ಭರವಸೆ ಇದೆ" ಎಂದು ಹೇಳಿದರು.

ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬಿಜೆಪಿ ಆರ್. ಶಂಕರ್, ಎಂಟಿಬಿ ನಾಗರಾಜ್, ಪ್ರತಾಪಸಿಂಹ ನಾಯಕ್ ಮತ್ತು ಮಾಜಿ ಶಾಸಕ ಸುನಿಲ್ ವಲ್ಯಾಪುರೆ ಅವರನ್ನು ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ವಿಧಾನಸಭೆಯಲ್ಲಿ 116 ಶಾಸಕರ ಬಲ ಹೊಂದಿರುವ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಸುಲಭವಾಗಿ ಜಯಗಳಿಸಲಿದೆ.

ವಿಶ್ವನಾಥ್ ಗೆ ಎಂಎಲ್ಸಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆವಿಶ್ವನಾಥ್ ಗೆ ಎಂಎಲ್ಸಿ ಟಿಕೆಟ್ ಮಿಸ್: ಶ್ರೀನಿವಾಸ್ ಪ್ರಸಾದ್ ಪ್ರತಿಕ್ರಿಯೆ

ಎಲ್ಲರೂ ಈಜಿ ದಡ ಸೇರಿದ್ದಾರೆ

ಎಲ್ಲರೂ ಈಜಿ ದಡ ಸೇರಿದ್ದಾರೆ

"ನನ್ನ ಜೊತೆ ಬಂದವರೆಲ್ಲಾ ಈಜಿ ದಡ ಸೇರಿದ್ದಾರೆ, ನಾನೂ ಇನ್ನೂ ಸೇರಿಲ್ಲ. ನಾನು ಹಿಂದುಳಿದ ವರ್ಗದ ನಾಯಕ ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಗೊತ್ತಿಲ್ಲ" ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದ್ದಾರೆ.

ಯಡಿಯೂರಪ್ಪ ಮೇಲೆ ಭರವಸೆ ಇದೆ

ಯಡಿಯೂರಪ್ಪ ಮೇಲೆ ಭರವಸೆ ಇದೆ

"ಟಿಕೆಟ್ ಕೈ ತಪ್ಪಿದ್ದರಿಂದ ನಾನು ಹತಾಶನಾಗಿಲ್ಲ. ಈಗಲೂ ಯಡಿಯೂರಪ್ಪ ಮೇಲೆ ಭರವಸೆ ಇದೆ. ರಾಜ್ಯ ನಾಯಕರು ನಾಲ್ಕು ಹೆಸರನ್ನು ದೆಹಲಿಗೆ ಕಳಿಸಿದ್ದರು. ಇದೀಗ ನನ್ನ ಹೆಸರು ಕೈ ಬಿಡಲಾಗಿದೆ. ಕಡೆ ಘಳಿಗೆವರೆಗೂ ಯಡಿಯೂರಪ್ಪ ನನ್ನ ಪರವಾಗಿ ಪ್ರಯತ್ನ ಮಾಡಿದ್ದಾರೆ" ಎಂದು ವಿಶ್ವನಾಥ್ ಹೇಳಿದರು.

ಕಾದು ನೋಡೋಣ ಎಂದು ತಿಳಿಸಿದ್ದಾರೆ

ಕಾದು ನೋಡೋಣ ಎಂದು ತಿಳಿಸಿದ್ದಾರೆ

"ದೆಹಲಿಯಲ್ಲಿ ನನಗೆ ಟಿಕೆಟ್ ಕೈ ತಪ್ಪಿದೆ. ಇದರ ಹಿಂದೆ ಯಾರಿದ್ದಾರೆ ಗೊತ್ತಿಲ್ಲ. ಇದು ನನಗೆ ಹೊಸತೇನೂ ಅಲ್ಲ. ಇಂತಹ ಸಂಕಷ್ಟಗಳನ್ನು ಎದುರಿಸಿಯೇ ನಾನು ಈ ಹಂತಕ್ಕೆ ಬಂದಿದ್ದೇನೆ. ಯಡಿಯೂರಪ್ಪ ಕಾದು ನೋಡೋಣ ಎಂದು ಹೇಳಿದ್ದಾರೆ" ಎಂದು ವಿಶ್ವನಾಥ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾತು ಉಳಿಸಿಕೊಂಡ ಬಿಎಸ್‌ವೈ

ಮಾತು ಉಳಿಸಿಕೊಂಡ ಬಿಎಸ್‌ವೈ

ಬಿಜೆಪಿ ಸರ್ಕಾರ ರಚನೆ ಸಮಯದಲ್ಲಿ ಸಹಾಯ ಮಾಡಿದ ಎಂಟಿಬಿ ನಾಗರಾಜ್, ಆರ್. ಶಂಕರ್‌ಗೆ ಕೊಟ್ಟ ಮಾತನ್ನು ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ ಎಚ್. ವಿಶ್ವನಾಥ್‌ಗೆ ಮಾತ್ರ ಟಿಕೆಟ್ ಕೈ ತಪ್ಪಿದೆ.

English summary
H. Vishwanath missed the legislative council election BJP ticket. He also lost the Hunsur by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X