ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ರಣದೀಪ್‌ ಸಿಂಗ್ ಸುರ್ಜೇವಾಲಾ ಭೇಟಿಯಾದ ಎಚ್. ವಿಶ್ವನಾಥ್!

ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​​​ ಸುರ್ಜೇವಾಲ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿದ್ದಾರೆ.

|
Google Oneindia Kannada News

ಬೆಂಗಳೂರು, ಜನವರಿ 27; ಮಾಜಿ ಸಚಿವ, ಬಿಜೆಪಿ ನಾಯಕ ಎಚ್. ವಿಶ್ವನಾಥ್ ಮತ್ತೊಮ್ಮೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದರು. ವಿಧಾನಸಭೆ ಚುನಾವಣೆ ಘೋಷಣೆಯಾಗುವ ವೇಳೆಗೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.

ಶುಕ್ರವಾರ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​​​ ಸುರ್ಜೇವಾಲ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಹ ಉಪಸ್ಥಿತರಿದ್ದರು.

ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ನನಗೆ ಹಣ ಕೊಡಲು ಬಂದಿದ್ದ: ಹೆಚ್. ವಿಶ್ವನಾಥ್ ಬಿಜೆಪಿ ಸೇರ್ಪಡೆಗೆ ವಿಜಯೇಂದ್ರ ನನಗೆ ಹಣ ಕೊಡಲು ಬಂದಿದ್ದ: ಹೆಚ್. ವಿಶ್ವನಾಥ್

ಎಚ್. ವಿಶ್ವನಾಥ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹಬ್ಬಿದೆ. ಪದೇ ಪದೇ ಅವರು ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದರು.

Breaking; ಡಿಕೆ ಶಿವಕುಮಾರ್ ಭೇಟಿಯಾದ ಎಚ್‌. ವಿಶ್ವನಾಥ್! Breaking; ಡಿಕೆ ಶಿವಕುಮಾರ್ ಭೇಟಿಯಾದ ಎಚ್‌. ವಿಶ್ವನಾಥ್!

H Vishwanath Meets Randeep Singh Surjewala At Mysuru

ಎಚ್. ವಿಶ್ವನಾಥ್ ರಣದೀಪ್ ಸಿಂಗ್​​​ ಸುರ್ಜೇವಾಲ ಜೊತೆ ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಸಿದ್ದಾರೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಒಂದು ವೇಳೆ ಅವರು ಕಾಂಗ್ರೆಸ್ ಸೇರಿದರೆ ಎಲ್ಲಿಂದ ಟಿಕೆಟ್ ಸಿಗಲಿದೆ? ಎಂಬುದು ಚರ್ಚೆಯ ವಿಚಾರ.

ಮೈಸೂರು ದಸರಾದ ಖರ್ಚಿನ ಲೆಕ್ಕ ಕೊಡಿ; ಎಚ್. ವಿಶ್ವನಾಥ್ ಆಗ್ರಹಮೈಸೂರು ದಸರಾದ ಖರ್ಚಿನ ಲೆಕ್ಕ ಕೊಡಿ; ಎಚ್. ವಿಶ್ವನಾಥ್ ಆಗ್ರಹ

'ಹಳ್ಳಿಹಕ್ಕಿ' ಎಂದು ಖ್ಯಾತಿ ಪಡೆದಿರುವ ಎಚ್. ವಿಶ್ವನಾಥ್ ಕಳೆದ ಕೆಲವು ತಿಂಗಳಿನಿಂದ ಸ್ವಪಕ್ಷ ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಆರೋಪ ಮಾಡುತ್ತಾ ಬಂದಿದ್ದು, ಪಕ್ಷ ಬಿಡುವ ಸೂಚನೆ ಸಿಕ್ಕಿದೆ. ಇದರ ನಡುವೆಯೇ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು‍ನ ಖರ್ಗೆ ಭೇಟಿ ಮಾಡಿದ್ದ ಅವರು ಬಳಿಕ ಬೆಂಗಳೂರಿಗೆ ಬಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು.

ಎಚ್.ವಿಶ್ವನಾಥ್ ಯಾವುದೇ ಪಕ್ಷಕ್ಕೆ ಹೋದರೂ ಪಕ್ಷ ನಿಷ್ಠೆಯನ್ನು ಮರೆತು ಪಕ್ಷದ ವಿರುದ್ಧವೇ ಮಾತನಾಡುತ್ತಾರೆ ಎಂಬ ಆರೋಪಗಳಿವೆ. ಆದ್ದರಿಂದ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾದ ವಿಷಯನ್ನು ಸಾರ್ವಜನಿಕವಾಗಿ ಮಾತನಾಡಿ ನಾಯಕರಿಗೂ ಮುಜುಗರ ತರುತ್ತಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಎಚ್. ವಿಶ್ವನಾಥ್ ಕಾಂಗ್ರೆಸ್‌ನಲ್ಲಿ ಮೂಲೆ ಗುಂಪಾದರು. ಆಗ ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ವಿಶ್ವನಾಥ್‌ಗೆ ಮನ್ನಣೆ ನೀಡಲಿಲ್ಲ. ಆಗ ಕಾಂಗ್ರೆಸ್ ತೊರೆದು ಅವರು ಜೆಡಿಎಸ್ ಸೇರಿದರು.

2018ರ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಗೆದ್ದರು. ಜೆಡಿಎಸ್ ರಾಜ್ಯಾಧ್ಯಕ್ಷರೂ ಆದರು. 2019ರ ಲೋಕಸಭೆ ಚುನಾವಣೆ ಬಳಿಕ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷ ತೊರೆದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬೀಳಿಸಿ, ಬಿಜೆಪಿ ಸೇರಿದರು. ಹುಣಸೂರು ಉಪ ಚುನಾವಣೆಯಲ್ಲಿ ಸೋತರು. ಆದರೂ ಪಕ್ಷ ಎಂಎಲ್‌ಸಿ ಮಾಡಿತು.

English summary
BJP leader and MLC H. Vishwanath met Karnataka Congress in-charge Randeep Singh Surjewala at Mysuru. He may join Congress soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X