'ಯುಗಾದಿ ಬಳಿಕ ಹೊಸ ಖುರ್ಚಿ, ಹೊಸ ಮಂತ್ರಿ ನೋಡೋಣ'

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07 : 'ಯುಗಾದಿ ರಾಜ್ಯ ಸರ್ಕಾರಕ್ಕೆ ಹೊಸತನ ತರಲಿದೆ. ಹೊಸ ಮಂತ್ರಿ, ಹೊಸ ಖುರ್ಚಿ ನೋಡೋಣ. ಕೆಲವು ಸಚಿವರು ಬದಲಾಗಬೇಕು ಎಂಬ ಶಾಸಕರ ಒತ್ತಾಯ ಸರಿಯಾಗಿದೆ' ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್.ವಿಶ್ವನಾಥ್ ಹೇಳಿದರು.

ಗುರುವಾರ ವಿಶ್ವನಾಥ್ ಅವರು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಭೇಟಿಯ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. [ಸಿದ್ದರಾಮಯ್ಯ ಸಂಪುಟ ಪುನಾಚರನೆ, 10ಕ್ಕೂ ಹೆಚ್ಚು ಸಚಿವರ ಬದಲಾವಣೆ]

h vishwanath

'ಯುಗಾದಿ ರಾಜ್ಯ ಸರ್ಕಾರಕ್ಕೆ ಹೊಸತನ ತರಲಿದೆ. ಹೊಸ ಖುರ್ಚಿ, ಹೊಸ ಮಂತ್ರಿ ನೋಡೋಣ. ಸರ್ಕಾರದಲ್ಲಿ ಕೆಲವು ಸಚಿವರು ಕಣ್ಣಿದ್ದೂ ಕುರುಡರಾಗಿದ್ದಾರೆ. ಯುಗಾದಿ ಮುಗಿದ ಬಳಿಕ ಸರ್ಕಾರಕ್ಕೆ ಹೊಸತನ ಬರಲಿದೆ' ಎಂದು ಹೇಳಿದರು. [ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ]

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಮಾಡಬೇಕು ಎಂಬ ಸಮಾನ ಮನಸ್ಕ ಶಾಸಕರ ಒತ್ತಾಯಕ್ಕೆ ಬೆಂಬಲ ನೀಡಿದ ಎಚ್.ವಿಶ್ವನಾಥ್ ಅವರು, 'ಶಾಸಕರ ಬೇಡಿಕೆ ಸರಿಯಾಗಿದೆ. ಸರ್ಕಾರದಲ್ಲಿ ಕೆಲವು ಸಚಿವರು ನಿಷ್ಟ್ರೀಯರಾಗಿದ್ದಾರೆ. ಅವರನ್ನು ಬದಲಾವಣೆ ಮಾಡುವುದು ಉತ್ತಮ' ಎಂದರು.

ಬಿರುಸಿನ ಚಟುವಟಿಕೆ : ಕರ್ನಾಟಕ ಕಾಂಗ್ರೆಸ್‌ನಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದ್ದು, ಏ.9ರಂದು ಸಮಾನ ಮನಸ್ಕ ಶಾಸಕರ ನಿಯೋಗ ದೆಹಲಿಗೆ ಭೇಟಿ ನೀಡಲಿದೆ. ಸಂಪುಟ ಪುನಾರಚನೆ ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಲಿದೆ.

ಏ.9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಸಭೆ ಕರೆದಿದ್ದು, ಸಂಪುಟ ಪುನಾರಚನೆ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಏ.10ರಂದು ಸಿದ್ದರಾಮಯ್ಯ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Senior Congress leader H.Vishwanath met Mallikarjun Kharge on April 7, 2016 at Bengaluru. H.Vishwanath extended his support for like-minded MLA's who demanding for Chief Minister Siddaramaiah cabinet reshuffle.
Please Wait while comments are loading...