ಶಂಕರ ಬಿದರಿ ಮಾತಿಗೆ ಕುಮಾರಣ್ಣ ಸಾಥ್
ಬೆಂಗಳೂರು, ಅ. 28: ಮರಳು ಮಾಫಿಯಾದಿಂದ ಸರ್ಕಾರದ ವಿವಿಧ ಮಂತ್ರಿಗಳಿಗೆ ಪ್ರತಿನಿತ್ಯ 4 ಕೋಟಿ ರೂ. ಲಂಚ ಸಂದಾಯವಾಗುತ್ತಿದೆ ಎಂದು ಆರೋಪಿಸಿರುವ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಮಾತಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ.
ಈ ಬಗ್ಗೆ ನಾನು ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಅಕ್ರಮದಲ್ಲಿ ಸಚಿವರು ಮತ್ತು ಅವರ ಪುತ್ರರು ಭಾಗಿಯಾಗಿದ್ದಾರೆ ಎಂದು ಹೇಳಿದ್ದೆ. ಆಗ ಮತ್ತು ಈಗ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿರುವುದುನ್ನು ನೋಡಿದರೆ ಇಡೀ ಸರ್ಕಾರವೇ ಅಕ್ರಮದಲ್ಲಿ ಭಾಗಿಯಾದಂತೆ ಕಾಣುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.[ಗೌಡರ ಕುಟುಂಬ ಗಾಜಿನ ಮನೆಯಲ್ಲಿಲ್ಲ, ಬೀದಿಯಲ್ಲಿದೆ!]
ಯಾವ ಸಚಿವರು ಈ ಬಗ್ಗೆ ಪ್ರತಿಕ್ರಿಯಿಸದಿದ್ದರೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಲಿದ್ದೇನೆ. ಸರ್ಕಾರ ಈ ರೀತಿ ನಿರ್ಲಜ್ಜ ಭಾವನೆ ತಳೆದರೆ ಜನರಿಗೆ ಉತ್ತರ ನೀಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
ಶೂನ್ಯ ಭ್ರಷ್ಟಾಚಾರದ ಮೋದಿ ಸರ್ಕಾರ!
ಕುಮಾರಸ್ವಾಮಿ ಶಂಕರ್ ಬಿದರಿಯವರನ್ನು ಹೊಗಳುವ ಭರದಲ್ಲಿ ಮೋದಿ ಸರ್ಕಾರವನ್ನು ಹೊಗಳಿದ್ದಾರೆ. ಶೂನ್ಯ ಭ್ರಷ್ಟಾಚಾರವಿರುವ ಮೋದಿ ಸರ್ಕಾರ ಬೆಂಬಲಿಸಿ ಶಂಕರ್ ಬಿದರಿ ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಹೇಳಿದ್ದಾರೆ.[ಬಿಜೆಪಿಗೆ ಸೆಲ್ಯೂಟ್ ಹೊಡೆದ ಶಂಕರ ಬಿದರಿ]
'ಕಾಂಗ್ರೆಸ್ ಕತ್ತೆಗಳಿಗೆ ಸನ್ಮಾನ'
ಬೆಂಗಳೂರು ಜೆಡಿಎಸ್ ಯುವ ಘಟಕ ಅಕ್ಟೋಬರ್ 29 ರಂದು ಬೆಳಿಗ್ಗೆ 11.30ಕ್ಕೆ ಆನಂದರಾವ್ ವೃತ್ತದ ಸಮೀಪದ ಗಾಂಧಿ ಪ್ರತಿಮೆ ಬಳಿ "ಕಾಂಗ್ರೆಸ್ ಕತ್ತೆಗಳಿಗೆ ಸನ್ಮಾನ" ಎಂಬ ಹಸರಿನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಘಟಕದ ಅಧ್ಯಕ್ಷ ರಮೇಶ್ ಗೌಡ ತಿಳಿಸಿದ್ದಾರೆ.