ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರ! ಕೊರೊನಾ ವೈರಸ್ ಹರಡುವ ಅಪಾಯಕಾರಿ ಸ್ಥಳ ಜಿಮ್‌

|
Google Oneindia Kannada News

ಬೆಂಗಳೂರು, ಮಾರ್ಚ್ 12: ಕೊರೊನಾ ವೈರಸ್ ಹಿನ್ನಲೆಯಲ್ಲಿ ಜಿಮ್ ಹೋಗುವುದು ಅಪಾಯಕಾರಿಯೇ..?, ಜಿಮ್‌ಗೆ ಹೋದರೆ, ಕೊರೊನಾ ವೈರಸ್ ಹರಡುವ ಸಾಧ್ಯತೆ ಇರುತ್ತದೆಯೇ..? ಹೌದು ಅಂತಾರೆ ವೈದ್ಯರು.

ಕೊರೊನಾ ವೈರಸ್ ಪ್ರಪಂಚದಾದ್ಯಂತ ಹರಡಿದೆ. ವೈರಸ್ ಹರಡದೆ ಇರುವ ಹಾಗೆ ಮುಂಜಾಗ್ರತೆ ಕ್ರಮಗಳನ್ನು ಜನರು ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಆ ಅಂಶಗಳ ಪೈಕಿ ಜಿಮ್‌ಗೆ ಹೋಗದೇ ಇರುವುದು ಕೂಡ ಒಳ್ಳೆಯದು.

Coronavirus: ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ ಎಂದ ಪ್ರಧಾನಿ ಮೋದಿCoronavirus: ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ ಎಂದ ಪ್ರಧಾನಿ ಮೋದಿ

ಜಿಮ್‌ನಲ್ಲಿ ವರ್ಕೌಟ್ ಮಾಡುವುದು ಅನೇಕರ ದಿನನಿತ್ಯದ ಕೆಲಸ ಆಗಿರುತ್ತದೆ. ಇಂದಿನ ಯುವ ಜನತೆ ವಿಟ್ನೆಸ್ ಮೇಲೆ ಹೆಚ್ಚು ಗಮನ ನೀಡುತ್ತಾರೆ. ಬೆಂಗಳೂರಿನಲ್ಲಿ ನೂರಾರೂ ಜಿಮ್ ಗಳು ಇವೆ. ಅಲ್ಲಿ ಸಾವಿರಾರು ಜನರು ಪ್ರತಿದಿನ ಹೋಗುತ್ತಾರೆ. ಹೀಗಾಗಿ ಕೂಡ ಜಿಮ್ ಡೇಂಜರಸ್.

ಜಿಮ್ ಅಪಾಯಕಾರಿ ಸ್ಥಳ

ಜಿಮ್ ಅಪಾಯಕಾರಿ ಸ್ಥಳ

ಜಿಮ್ ನಲ್ಲಿ ಕೊರೊನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಿಮ್ ಸದ್ಯ ಅಪಾಯಕಾರಿ ಸ್ಥಳವಾಗಿ ಬಿಟ್ಟಿದೆ. ಜಿಮ್‌ಗೆ ಆರೋಗ್ಯ ಕಾಪಾಡುಕೊಳ್ಳಲು ಎಲ್ಲರೂ ಹೋಗುತ್ತಾರೆ. ಆದರೆ, ಕೊರೊನಾ ಹರಡಿರುವ ಈ ಪರಿಸ್ಥಿತಿಯಲ್ಲಿ ಜಿಮ್‌ಗೆ ಹೋದರೆ, ನಮ್ಮ ಆರೋಗ್ಯ ಅದಗೆಡುವ ಸಾಧ್ಯತೆ ಹೆಚ್ಚಿದೆ.

ಬೆವರು ಇದ್ದರೆ, ವೈರಸ್ ಹೆಚ್ಚು

ಬೆವರು ಇದ್ದರೆ, ವೈರಸ್ ಹೆಚ್ಚು

ದೇಹದಲ್ಲಿ ಬೆವರು ಹೆಚ್ಚಿದ್ದರೆ, ವೈರಸ್ ಹರಡುವ ಸಾಧ್ಯತೆ ಜಾಸ್ತಿ. ಜಿಮ್‌ನಲ್ಲಿ ವರ್ಕೌಟ್ ಮಾಡಿ ಎಲ್ಲರೂ ಬೆವರಿಳಿಸುತ್ತಾರೆ. ಆದರೆ, ದೇಹದಲ್ಲಿ ಬೆವರು ಹಾಗೂ ತೇವ ಇದ್ದರೆ, ಸೂಕ್ಷಜೀವಿಗಳು ಹರಡುತ್ತದೆ. ಹೀಗಾಗಿ, ಜಿಮ್‌ಗೆ ಹೋದರೆ, ಕೊರೊನಾ ವೈರಸ್ ಸೋಂಕು ತಗುಲುವ ಅವಕಾಶ ಜಾಸ್ತಿ ಇದೆ.

ಕೊರೊನಾ ಬಾರದಿರಲು ಏನೇನು ಮಾಡಬೇಕು, ಏಕೆ?: WHO ನೀಡಿದ 7 ಟಿಪ್ಸ್ಕೊರೊನಾ ಬಾರದಿರಲು ಏನೇನು ಮಾಡಬೇಕು, ಏಕೆ?: WHO ನೀಡಿದ 7 ಟಿಪ್ಸ್

ಉಪಕರಣಗಳ ಸ್ವಚ್ಚತೆ

ಉಪಕರಣಗಳ ಸ್ವಚ್ಚತೆ

ಒಂದು ಜಿಮ್‌ನಲ್ಲಿ ಇರುವ ಉಪಕರಣಗಳನ್ನು ಎಲ್ಲರೂ ಬಳಸುತ್ತಾರೆ. ನೂರಾರೂ ಜನರು ಒಂದೇ ಉಪಕರಣಗಳನ್ನು ಮುಟ್ಟುತ್ತಾರೆ. ಇದರಿಂದ ವೈರಸ್ ಹರಡುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿ ವರ್ಕೌಟ್ ಮಾಡುವ ಮುನ್ನ ಹಾಗೂ ನಂತರ ಆ ಉಪಕರಣವನ್ನು ಒರೆಸಬೇಕು. ಆದರೆ, ಅದನ್ನು ಕಾರ್ಯರೂಪಕ್ಕೆ ತರುವುದು ಸ್ವಲ್ಪ ಕಷ್ಟ.

ಕೆಮ್ಮು, ಸೀನು ಇದ್ದರೆ ಜಿಮ್‌ಗೆ ಹೋಗಬೇಡಿ

ಕೆಮ್ಮು, ಸೀನು ಇದ್ದರೆ ಜಿಮ್‌ಗೆ ಹೋಗಬೇಡಿ

ಕೆಮ್ಮು, ಸೀನು, ಜ್ವರ ಇದ್ದರೆ ಜಿಮ್‌ಗೆ ಹೋಗುವುದನ್ನು ನಿಲ್ಲಿಸಿ. ಇದರಿಂದ ವೈರಸ್ ಬೇರೆಯವರಿಗೆ ಹರಡುವುದು ತಪ್ಪುತ್ತದೆ. ಜಿಮ್‌ಗೆ ಬರುವ ಬೇರೆ ಯಾರೋ ಒಬ್ಬ ವ್ಯಕ್ತಿಗೆ ವೈರಸ್ ಇದ್ದರೆ ನಿಮಗೆ ಹರಡುವ ಸಾಧ್ಯತೆ ಇದೆ. ಕೊರೊನಾ ವೈರಸ್‌ನಿಂದ ದೂರ ಇರಲು ಮಾಸ್ಕ್ ಹಾಕಿಕೊಳ್ಳಬೇಕು. ಆದರೆ, ಜಿಮ್‌ನಲ್ಲಿ ಮಾಸ್ಕ್ ಧರಿಸಿ ವರ್ಕೌಟ್ ಮಾಡುವುದು ಅನೇಕರಿಗೆ ಕಷ್ಟವಾಗುತ್ತದೆ.

English summary
Coronavirus care: Gyms is dangerous place for spreading COVID19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X