ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಗೃಹ ಕಚೇರಿಗೆ ಜಿಮ್ ಟ್ರೈನರ್ಸ್‌ಗಳ ಭೇಟಿ, ಆದೇಶ ಹಿಂಪಡೆಯಲು ಮನವಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 03: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

Recommended Video

ಸರ್ಕಾರದ ಹೊಸ ರೂಲ್ಸ್ ಗೆ ಜಿಮ್ ಮಾಲೀಕರ ಸಂಘ ಆಕ್ರೋಶ | Oneindia Kannada

ಅದರಲ್ಲಿ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್‌ಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿತ್ತು, ಈ ಆದೇಶವನ್ನು ಹಿಂಪಡೆಯುವಂತೆ ಜಿಮ್ ಟ್ರೈನರ್ಸ್‌ಗಳು ಮನವಿ ಮಾಡಿದರು.

ಕೋವಿಡ್ 2ನೇ ಅಲೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿಕೋವಿಡ್ 2ನೇ ಅಲೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ

ಶನಿವಾರ ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾಗೆ ಜಿಮ್‌ ಟ್ರೈನರ್ಸ್‌ಗಳು ಭೇಟಿ ನೀಡಿದ್ದರು, ಕೆಲ ಸಮಯಗಳ ಕಾಲ ಮಾತುಕತೆ ನಡೆಸಿದರು. ಐದು ಮಂದಿ ಜಿಮ್ ಟ್ರೈನರ್ಸ್‌ಗಳು ಆಗಮಿಸಿದ್ದರು.

Gym Trainers Visit CM Yediyurappa House, Requesting To Withdrawn Order To Close Gyms

ಜಿಮ್‌ಗಳಲ್ಲಿ ಕೊರೊನಾ ನಿಯಮ ಅಳವಡಿಕೆ ಆಗಿದೆ. ಆದರೂ ಕೊರೊನಾ ಸೋಂಕು ಹೆಚ್ಚಾಗಿದೆ ಎಂದು ಜಿಮ್‌ ಬಂದ್‌ಗೆ ಆದೇಶ ಮಾಡುವುದು ತಪ್ಪು, ಜಿಮ್‌ಗಳನ್ನು ಮಾಡಿರುವವರ ಸಮಸ್ಯೆ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಜಿಮ್, ಸ್ವಿಮ್ಮಿಂಗ್ ಪೂಲ್ ಮುಚ್ಚಲು ಆದೇಶ. ಯಾವುದೇ ಕಾರಣಕ್ಕೂ ಪ್ರತಿಭಟನೆ, ಜಾಥಗಳಿಗೆ ಅವಕಾಶವಿಲ್ಲ. ದೇವಾಲಯ, ಪ್ರಾರ್ಥನಾ ಮಂದಿರಕ್ಕೆ ಜನರು ಭೇಟಿ ನೀಡಲು ಅವಕಾಶ. ಆದರೆ, ಗುಂಪು ಸೇರುವ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿತ್ತು.

ಇನ್ನು, ಅಪಾರ್ಟ್‌ಮೆಂಟ್‌ಗಳಲ್ಲಿ ಜಿಮ್, ಪಾರ್ಟಿ ಹಾಲ್, ಕ್ಲಬ್, ಸ್ವಿಮ್ಮಿಂಗ್ ಫುಲ್ ಮುಚ್ಚಲು ಆದೇಶ , ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆಯು ನಿಗದಿಪಡಿಸಿದ ಆಸನದ ಸಂಖ್ಯೆಗಳನ್ನು ಮೀರುವಂತಿಲ್ಲ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಚಿತ್ರಮಂದಿರದಲ್ಲಿ ಶೇ 50ರಷ್ಟು ಸೀಟು ಭರ್ತಿ.

ಒಂದ್ ಬಿಟ್ಟು ಒಂದು (ಪರ್ಯಾಯ ಆಸನದಲ್ಲಿ ಕೂರಬೇಕು) ಮೈಸೂರು, ಕಲಬುರಗಿ ದಕ್ಷಿಣ ಕನ್ನಡ, ಉಡುಪಿ, ಬೀದರ್ ಮತ್ತು ಧಾರವಾಡಕ್ಕೂ ಇದು ಅನ್ವಯ ಎಂದು ಹೇಳಲಾಗಿದೆ.

English summary
Karnataka covid 119 guidelines, Gym Trainers Visit CM Yediyurappa House, Requesting To Withdrawn Order To Close Gyms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X