ಬ್ರೇಕಿಂಗ್ ನ್ಯೂಸ್: ಗುಂಡ್ಲುಪೇಟೆ, ನಂಜನಗೂಡು ಉಪ ಚುನಾವಣೆ ದಿನಾಂಕ ನಿಗದಿ

Subscribe to Oneindia Kannada

ಬೆಂಗಳೂರು, ಮಾರ್ಚ್ 9: ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ದಿನಾಂಕ ಹೊರ ಬಿದ್ದಿದೆ.
ಏಪ್ರಿಲ್ 9 ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 13ರಂದು ಎರಡೂ ಕ್ಷೇತ್ರಗಳ ಫಲಿತಾಂಶ ಹೊರ ಬೀಳಲಿದೆ.

ಸಚಿವ ವಿ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ಮೈಸೂರಿನ ನಂಜನಗೂಡು ಹಾಗೂ ಸಚಿವ ಮಹದೇವ ಪ್ರಸಾದ್ ನಿಧನದಿಂದ ತೆರವಾಗಿರುವ ಚಾಮರಾಜನಗರದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.[ಏಪ್ರಿಲ್ ನಲ್ಲಿ ನಡೆಯಲಿದೆ ಗುಂಡ್ಲುಪೇಟೆ-ನಂಜನಗೂಡು ಉಪ ಚುನಾವಣೆ]

Gundlupet and Nanjangud by election on April 9

ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು ವಿವರಗಳು ಹೀಗಿವೆ,
ಮಾರ್ಚ್ 14 ರಿಂದ 21 - ನಾಮಪತ್ರ ಸಲ್ಲಿಕೆ
ಮಾರ್ಚ್ 22 - ನಾಮಪತ್ರ ಪರಿಶೀಲನೆ
ಮಾರ್ಚ್ 24 - ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ
ಏಪ್ರಿಲ್ 9 - ಮತದಾನ
ಏಪ್ರಿಲ್ 13 - ಮತ ಎಣಿಕೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Nanjangud and Gundlupet by election date has been announced by Election Commission of India. Election procedure starts from March 14 and will end on April 13 with the results.
Please Wait while comments are loading...