ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗೈ ಸಂತ ಖರ್ಗೆಗೆ ಈ ಬಾರಿಯೂ ಮತದಾರ ಶರಣು?

By Srinath
|
Google Oneindia Kannada News

ಗುಲ್ಬರ್ಗ, ಮಾರ್ಚ್ 18- ಶರಣರು ಮತ್ತು ಸೂಫೀ ಸಂತರ ನಾಡಾದ ಗುಲ್ಬರ್ಗಾದಲ್ಲಿ ಮತ ಸಮರ ಜೋರಾಗಿಯೇ ಇದೆ. ತಾಪಮಾನ 45ರ ಗಡಿ ದಾಟಲಿದ್ದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮರ ತಾರಕಕ್ಕೇರಲಿದೆ. ಜತೆಗೆ ಆಮ್ ಆದ್ಮಿ ಪಕ್ಷವೂ ಕಣದಲ್ಲಿ ಕಂಡುಬಂದಿದೆ.

ಶರಣರು ಮತ್ತು ಸೂಫೀ ಸಂತರ ಮಾರ್ಗದರ್ಶನದಲ್ಲಿ ಸಾಮರಸ್ಯದಿಂದ ಬದುಕು ಸಾಗಿಸುತ್ತಿರುವ ಇಲ್ಲಿನ ಜನ 1992ರಲ್ಲಿ ದೊಡ್ಡ ಪ್ರಮಾಣದ ಕೋಮುಗಲಭೆಯನ್ನು ಕಂಡಿದ್ದರು. ಆ ನಂತರ ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯಲ್ಲಿ ಕೋಮು ಗಲಾಟೆ ವರ್ಜ್ಯವೆಂದಿದ್ದಾರೆ.

ಡಜನ್ ಗೆಲುವುಗಳ ಸರದಾರ?: ಹೈದರಾಬಾದ್ ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಗುಲ್ಬರ್ಗಾ, ಇತ್ತೀಚಿನ ದಶಕಗಳಲ್ಲಿ ಎಂ ಮಲ್ಲಿಕಾರ್ಜುನ ಖರ್ಗೆ ಎಂಬ ಅಪ್ಪಟ ಕಾಂಗ್ರೆಸ್ ಮುಖಂಡನಿಗೆ ಆಶ್ರಯತಾಣವಾಗಿದೆ. 11 ಬಾರಿ ಚುನಾವಣೆಗಳನ್ನು ಗೆದ್ದಿರುವ ಖರ್ಗೆ ಈ ಬಾರಿಯೂ 'ಕರಾ'ಮತ್ತು ಮಾಡುತ್ತಾರಾ?

ಕೇಂದ್ರ ರೈಲ್ವೆ ಸಚಿವರೂ ಆಗಿರುವ 71 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ಸಿನಿಂದ, ಮಾಜಿ ಸಚಿವ ರೇವೂ ನಾಯ್ಕ್ ಬೆಳಮಗಿ ಅವರು ಬಿಜೆಪಿಯಿಂದ, ಆಮ್ ಆದ್ಮಿ ಪಕ್ಷದಿಂದ ಬಿಟಿ ಲಲಿತಾ ನಾಯಕ್ ಅವರು ಕಣಕ್ಕಿಳಿಯಲಿದ್ದಾರೆ. ಜಿಲ್ಲೆಯಲ್ಲಿ ನೆಲೆ ಹೊಂದಿರುವ ಜೆಡಿಎಸ್ ಇನ್ನಷ್ಟೇ ತನ್ನ ಅಭ್ಯರ್ಥಿ ಯಾರೆಂಬುದನ್ನು ಬಹಿರಂಗಪಡಿಸಬೇಕಿದೆ.

71 ವರ್ಷದ ಖರ್ಗೆ ಹೆಗಲ ಮೇಲೆ ಭದ್ರವಾಗಿ/ಸುರಕ್ಷಿತವಾಗಿ:

71 ವರ್ಷದ ಖರ್ಗೆ ಹೆಗಲ ಮೇಲೆ ಭದ್ರವಾಗಿ/ಸುರಕ್ಷಿತವಾಗಿ:

ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ (ಆರ್ಟಿಕಲ್ 371ಕ್ಕೆ ತಿದ್ದುಪಡಿ) ಕಲ್ಪಿಸುವುದನ್ನು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಸಾಕಾರಗೊಳಿಸಿದ್ದೇ ಜನ ಈಗಾಗಲೇ ಕಾಂಗ್ರೆಸ್ಸಿಗೆ ಶರಣಾಗಿರಲೂಬಹುದು. ಅದರ ಜತೆಗೆ ಗುಲ್ಬರ್ಗಾದಲ್ಲಿ ರೈಲ್ವೆ ವಿಭಾಗೀಯ ಕೇಂದ್ರ ಸ್ಥಾಪನೆ ಮತ್ತು ತೀರಾ ಇತ್ತೀಚೆಗೆ ಇಎಸ್ ಐ ಸ್ಥಾಪನೆಗೊಂಡಿದ್ದು ಜನ ಕಾಂಗ್ರೆಸ್ಸಿಗೆ ಫಿದಾ ಆಗಿದ್ದಾರೆ ಅನ್ನಬಹುದು.

ಏಕೆಂದರೆ 1996 (ಜನತಾ ದಳದ ಖಮರುಲ್ ಇಸ್ಲಾಂ) ಮತ್ತು 1998ರಲ್ಲಿ (ಬಿಜೆಪಿಯ ಬಸವರಾಜ ಪಾಟೀಲ ಸೇಡಂ) ಮಾತ್ರ ಕಾಂಗ್ರೆಸ್ಸೇತರ ಅಭ್ಯರ್ಥಿಗಳಿಗೆ ಇಲ್ಲಿನ ಜನ ಮಣೆ ಹಾಕಿದ್ದಾರಷ್ಟೇ. ಅದಾದನಂತರ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರ ಹೆಗಲ ಮೇಲೆ ಭದ್ರವಾಗಿ/ ಸುರಕ್ಷಿತವಾಗಿ ನೆಲೆಸಿದೆ.

ಇಂದಿರಮ್ಮಗೆ ಜನ ಎದ್ನೋಬಿದ್ನೋ ಅಂತ ಎದ್ದುಬಂದು ಮತ ಹಾಕಿದ್ದರು:

ಇಂದಿರಮ್ಮಗೆ ಜನ ಎದ್ನೋಬಿದ್ನೋ ಅಂತ ಎದ್ದುಬಂದು ಮತ ಹಾಕಿದ್ದರು:

ಗುಲ್ಬರ್ಗಾ ಕ್ಷೇತ್ರವು ಕಾಂಗ್ರೆಸ್ಸಿನವರನ್ನು ಎಂದೆಂದಿಗೂ ಕೈಹಿಡಿದಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರು ಅದೊಮ್ಮೆ ತಮ್ಮ ಆಪ್ತ ಸಿಎಂ ಸ್ಟೀಫನ್ ದಿಲ್ಲಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೆದುರು ಸೋತಾಗ ಗುಲ್ಬರ್ಗಾದಲ್ಲಿ ಉಪಚುನಾವಣೆಗೆ ವೇದಿಕೆ ನಿರ್ಮಾಣ ಮಾಡಿ, ಸ್ಟೀಫನ್ ಅವರಿಗೆ ಸ್ಪರ್ಧಿಸಿಲು ಆದೇಶಿಸಿದ್ದರು. ಇಂದಿರಮ್ಮ ಆಪ್ತ ಚುನಾವಣೆಗೆ ನಿಂತಿರುವಾಗ ಜನ ಎದ್ನೋಬಿದ್ನೋ ಎಂದು 1 ಲಕ್ಷ ಮತ ಅಂತದಿಂದ ಆರಿಸಿ ಕಳುಹಿಸಿದ್ದರು.

ಈ ಬಾರಿ ಮೀಸಲು ಕ್ಷೇತ್ರ ಯಾರಿಗೆ ಮೀಸಲು

ಈ ಬಾರಿ ಮೀಸಲು ಕ್ಷೇತ್ರ ಯಾರಿಗೆ ಮೀಸಲು

ಈಗಲೂ ಅಷ್ಟೇ... ದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಗ್ಗೆ ಜನಕ್ಕೆ ಅಷ್ಟಕ್ಕಷ್ಟೇ ಇರುವಾಗ ಗುಲ್ಬರ್ಗಾ ಜನ ಮತ್ತೊಮ್ಮೆ ಖರ್ಗೆ ಅವರಿಗೆ ಜೈ ಅನ್ನುತ್ತಾರಾ ಅಥವಾ ಸಂಪ್ರದಾಯ ಪಕ್ಕಿಕ್ಕಿಟ್ಟು ಬಿಜೆಪಿ ಜಟ್ಟಿ ರೇವೂ ನಾಯ್ಕ್ ಬೆಳಮಗಿಗೆ ಜೈ ಅನ್ನುತ್ತಾರೋ ಅಥವಾ ಬಂಜಾರ ಹೆಣ್ಣುಮಗಳು ಬಿಟಿ ಲಲಿತಾ ನಾಯಕ್ ಅವರ ಕೈಹಿಡಿಯುತ್ತಾರೋ ... ಸಮರವಂತೂ ಕುತೂಹಲಕಾರಿಯಾಗಿದೆ. ಮೇ 16ರವರೆಗೂ ಉಸಿರುಬಿಗಿಹಿಡಿದು ಫಲಿತಾಂಶಕ್ಕಾಗಿ ಕಾಯುಬೇಕು.
(ಚಿತ್ರ ಕೃಪೆ:www.megamedianews.in)

ಮೋದಿ ಅಲೆ ಕಾಂಗ್ರೆಸ್ ಕೈ ಕಚ್ಚುವುದೇ?

ಮೋದಿ ಅಲೆ ಕಾಂಗ್ರೆಸ್ ಕೈ ಕಚ್ಚುವುದೇ?

ಮರೆತ ಮಾತು: 2009ರ ಚುನಾವಣೆಯಲ್ಲಿ ಖರ್ಗೆ ಅವರು ಬೆಳಮಗಿಗೆ 13,400 ಮತಗಳಿಂದ ಸೋಲುಣಿಸಿದ್ದರು. ಇನ್ನೂ ಒಂದು ಇಂಟರೆಸ್ಟಿಂಗ್ ವಿಚಾರವೆಂದರೆ 2013ರ ವಿಧಾಸನಭಾ ಚುನಾವಣೆಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವೀಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಏಳನ್ನು ಬಾಚಿಕೊಂಡು ತನ್ನ ಅಧಿಪತ್ಯ ಮುಂದುವರಿಸಿದೆ. ಆದರೆ ಮೊನ್ನೆಯ ಆ ಚುನಾವಣೆಯಲ್ಲಿ ಬಿಜೆಪಿಗೆ ಕೆಜೆಪಿ ಮತ್ತು ಬಿಎಸ್ಸಾರ್ ಕಾಂಗ್ರೆಸ್ ಸಮ ಕೈಕೊಟ್ಟಿತ್ತು.

ಒಂದಾಗಿರುವ ಬಿಜೆಪಿ ಕಮಾಲ್ ಮಾಡುವುದೇ?

ಒಂದಾಗಿರುವ ಬಿಜೆಪಿ ಕಮಾಲ್ ಮಾಡುವುದೇ?

ಅಂದರೆ ಆಗಿನ ಚುನಾವಣೆಯಲ್ಲಿ ಬಿಜೆಪಿ (2,18,668), ಕೆಜೆಪಿ (1,71,880) ಹಾಗೂ ಬಿಎಸ್ಸಾರ್ ಕಾಂಗ್ರೆಸ್ ಗಳಿಸಿದ್ದ ಮತ ಪ್ರಮಾಣ (8,373). ಇವಿಷ್ಟನ್ನೂ ಕೂಡಿಸಿದರೆ ಒಟ್ಟು ಮತಗಳಿಕೆ 3,98,921ಕ್ಕೆ ತಲುಪುತ್ತದೆ. ಅದೇ ಕಾಂಗ್ರೆಸ್ ಗಳಿಸಿದ್ದ ಮತ ಪ್ರಮಾಣ 3,76,754. ಇದೀಗ ಮೂವರೂ ಒಂದಾಗಿದ್ದಾರೆ. ಅಂದರೆ ಈ ಅಂಕಿಸಂಖ್ಯೆ ಈ ಬಾರಿಯ ಲೋಕಸಭಾ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದಾ? ಎಂಬುದನ್ನು ಕಾದುನೋಡಬೇಕಿದೆ.

English summary
Lok sabha elections 2014: Gulbarga will mallikarjun kharge retain constituency. An interesting battle is on the cards between the Congress candidate Railway Minister M. Mallikarjun Kharge, the BJP man, former Minister Revu Naik Belamagi and AAP leader former Minister B.T. Lalitha Naik. The Janata Dal (S), which has a base in the constituency, has not announced its candidate yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X