ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದ್ ಪಟೇಲ್ ಗೆಲುವು, ಡಿಕೆಶಿ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಆ.09 : 'ಪಕ್ಷದ ಹೈಕಮಾಂಡ್ ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ರಾಜಕೀಯ ಸ್ಥಾನಮಾನದ ಬಗ್ಗೆ ಎಲ್ಲಾ ಕಾಲವೇ ನಿರ್ಣಯಿಸಲಿದೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ಇಬ್ಬರು ಶಾಸಕರು ಕೈ ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?ಇಬ್ಬರು ಶಾಸಕರು ಕೈ ಕೊಟ್ಟರೂ ಅಹ್ಮದ್ ಪಟೇಲ್ ಗೆದ್ದಿದ್ದು ಹೇಗೆ?

ಮಂಗಳವಾರ ಇಡೀ ದಿನ ನಡೆದ ರಾಜಕೀಯ ಹಗ್ಗ-ಜಗ್ಗಾಟ ಅಂತ್ಯಗೊಂಡಿದ್ದು, ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಅಹಮದ್ ಪಟೇಲ್ ಆಯ್ಕೆಯಾಗಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದ ಪಾತ್ರವೂ ಮುಖ್ಯವಾಗಿತ್ತು.

Gujarat : Rajya Sabha election : I hve done my work promptly says DK Shiva Kumar

ಬುಧವಾರ ಬೆಳಗ್ಗೆ ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, 'ಪಕ್ಷದ ಹೈಕಮಾಂಡ್ ನನಗೆ ವಹಿಸಿದ ಕೆಲಸವನ್ನು ಯಾವುದೇ ಅಡೆ ತಡೆಗಳು ಎದುರಾದರೂ ಪ್ರಾಮಾಣಿಕವಾಗಿ ಮಾಡಿದ್ದೇನೆ' ಎಂದರು.

ಸತ್ಯಮೇವ ಜಯತೆ: ಚುನಾವಣೆ ಗೆದ್ದ ನಂತರ ಅಹ್ಮದ್ ಪಟೇಲ್ ಹೇಳಿದ ಮಾತುಸತ್ಯಮೇವ ಜಯತೆ: ಚುನಾವಣೆ ಗೆದ್ದ ನಂತರ ಅಹ್ಮದ್ ಪಟೇಲ್ ಹೇಳಿದ ಮಾತು

'ನಾನು ಮಾಡಿದ ಕೆಲಸಕ್ಕೆ ಕ್ರೆಡಿಟ್ ಬೇಡ. ಚುನಾವಣಾ ಆಯೋಗ ಎಲ್ಲರಿಗೂ ತಕ್ಕಪಾಠ ಕಲಿಸಿದೆ. ರಾಜಕೀಯ ಸ್ಥಾನ ಮಾನದ ಕುರಿತು ಕಾಲವೇ ನಿರ್ಣಯಿಸಲಿದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವುಗುಜರಾತ್ ರಾಜ್ಯಸಭೆ ಚುನಾವಣೆ,ಕಾಂಗ್ರೆಸ್ ನ ಅಹ್ಮದ್ ಪಟೇಲ್ ಗೆ ಗೆಲುವು

ಗುಜರಾತ್ ರಾಜ್ಯಸಭೆ ಚುನಾವಣೆ ಬಳಿಕ ಡಿ.ಕೆ.ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿರುವ ಅಹಮದ್ ಪಟೇಲ್ ಕೃತಜ್ಞತೆ ಸಲ್ಲಿಸಿದ್ದಾರೆ. ಗುಜರಾತ್ ಕಾಂಗ್ರೆಸ್ ಶಾಸಕರು ಅಪರೇಷನ್ ಕಮಲದ ಭೀತಿಯಿಂದಾಗಿ ಬೆಂಗಳೂರು ಹೊರವಲಯದ ಈಗಲ್ ಟನ್ ಗಾಲ್ಫ್ ರೆಸಾರ್ಟ್ ನಲ್ಲಿ ಒಂಭತ್ತು ದಿನಗಳ ಕಾಲ ವಾಸ್ತವ್ಯ ಹೂಡಿದ್ದರು.

English summary
It was an eventful Tuesday and at the end of it, Ahmed Patel made it to the Rajya Sabha from Gujarat. Karnataka energy minister DK Shivakumar said, i have done my work promptly assigned by party high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X