ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಬಳ್ಳಾಪುರ ಅಕ್ರಮ ಜಿಲೆಟಿನ್ ಸ್ಪೋಟ: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ?

|
Google Oneindia Kannada News

ಬೆಂಗಳೂರು, ಫೆ. 24: ಅಕ್ರಮ ಗಣಿಗಾರಿಕೆಯಿಂದ ಪದೇ ಪದೇ ಸಂಭವಿಸುತ್ತಿರುವ ಸ್ಪೋಟಗಳಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಪಿಎಸ್‌ಐ ಒಬ್ಬರನ್ನು ಅಮಾನತು ಮಾಡಿದೆ. ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟದ ಕುರಿತು ಗುಬ್ಬಿ ಮೇಲೆ ಭ್ರಹ್ಮಾಸ್ತ್ರ ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸ್ ಸಬ್‌ಇನ್ಸಪೆಕ್ಟರ್ ಒಬ್ಬರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಪಿಎಸ್‌ಐ ಗೋಪಾಲ ರೆಡ್ಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಚಿಕ್ಕಬಳ್ಳಾಪುರ ಸ್ಫೋಟ; ಕೋಲಾರದಲ್ಲಿ ಕ್ರಷರ್ ಮಾಲೀಕರ ಸಭೆ ಚಿಕ್ಕಬಳ್ಳಾಪುರ ಸ್ಫೋಟ; ಕೋಲಾರದಲ್ಲಿ ಕ್ರಷರ್ ಮಾಲೀಕರ ಸಭೆ

ಸ್ಫೋಟ ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ತೋರಿದ ಅತೀವ ನಿರ್ಲಕ್ಷದ ಆರೋಪಡಿ ಗೊಪಾಲ ರೆಡ್ಡಿ ಅವರನ್ನು ನಿರ್ಲಕ್ಷ ಹಾಗೂ ಬೇಜವಾಬ್ದಾರಿತನ ವರ್ತನೆ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಗುಬ್ಬಿ ಮೇಲೆ ಭ್ರಹ್ಮಾಸ್ತ್ರ?

ಗುಬ್ಬಿ ಮೇಲೆ ಭ್ರಹ್ಮಾಸ್ತ್ರ?

ಈ ಹಿಂದೆಯೇ ಕ್ವಾರಿಯ ಮೇಲೆ ದಾಳಿ ನಡೆಸಲಾಗಿತ್ತು. ಅಕ್ರಮಕ್ಕೆ ಸಂಬಂಧಿಸಿದಂತೆ ಫೆ. 7ರಂದು ದೂರು ದಾಖಲಿಸಲಾಗಿತ್ತು. ಅದರಂತೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೂರ್ತಿ, ರಾಘವೇಂದ್ರ ಹಾಗೂ ನಾಗರಾಜು ಅವರನ್ನು ಬಂಧಿಸಿದ್ದರೆ ಈ ಸ್ಪೋಟ ಸಂಭವಿಸುತ್ತಿರಲಿಲ್ಲ. ಅದರ ಬದಲಿಗೆ ಪ್ರಕರಣದ ತನಿಖೆ ನಡೆಸದೇ ಫೆ. 21 ಹಾಗೂ 22 ರಂದು ಪಿಎಸ್‌ಐ ಗೋಪಾಲ ರೆಡ್ಡಿ ಅವರು ರಜೆ ಮೇಲೆ ತೆರಳಿದ್ದರು. ದೂರು ದಾಖಲಿಸಿಕೊಂಡ ಬಳಿಕ ಆರೋಪಿಗಳನ್ನು ಬಂಧಿಸದೇ ಇದ್ದುದರಿಂದ ಈ ಸ್ಪೋಟ ಸಂಭವಿಸಿದೆ ಎಂದು ಅಮಾನತು ಮಾಡಿರುವುದಕ್ಕೆ ಕಾರಣ ಕೊಡಲಾಗಿದೆ.

ನಾಲಾಯಕ್ ಗಳು ನೀವು ಕೆಲಸ ಮಾಡಲಿಕ್ಕೆ: ಅಧಿಕಾರಿಗಳಿಗೆ ಬೆವರಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿನಾಲಾಯಕ್ ಗಳು ನೀವು ಕೆಲಸ ಮಾಡಲಿಕ್ಕೆ: ಅಧಿಕಾರಿಗಳಿಗೆ ಬೆವರಿಳಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ

ಅಕ್ಕಿ ಚೀಲದಲ್ಲಿ ಸ್ಪೋಟಕ ಸಾಗಣೆ

ಅಕ್ಕಿ ಚೀಲದಲ್ಲಿ ಸ್ಪೋಟಕ ಸಾಗಣೆ

ದೂರು ದಾಖಲಿಸಿಕೊಂಡ ಬಳಿಕ ಪ್ರಾಮಾಣಿಕವಾಗಿ ಕೆಲಸ ಮಾಡಿ ಆರೋಪಿಗಳನ್ನು ಬಂಧಿಸಿದ್ದರೆ ಈ ಸ್ಪೋಟ ಸಂಭವಿಸುತ್ತಿರಲಿಲ್ಲ. ಜೊತೆಗೆ ಪ್ರಕರಣ ದಾಖಲಿಸಿರುವ ಕುರಿತು ಬಗ್ಗೆ ಪೊಲೀಸ್ ಐಟಿ ತಂತ್ರಾಂಶದಲ್ಲಿ ದಾಖಲು ಮಾಡಿರಲಿಲ್ಲ. ಬಳಿಕ ಪ್ರಕರಣದ ಮೂರನೇ ಆರೋಪಿ ನಾಗರಾಜ ಸೂಚನೆ ಮೇರೆಗೆ ಅಕ್ಕಿ ಚೀಲದಲ್ಲಿ ಸ್ಪೋಟಕಗಳನ್ನು ಸಾಗಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿ 6 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.

ಯಾಕೆ ಬಂಧಿಸಲಿರಲಿಲ್ಲ?

ಯಾಕೆ ಬಂಧಿಸಲಿರಲಿಲ್ಲ?

ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡುವಂತೆ ಕೇಳಗಿನ ಪೊಲೀಸ್ ಸಿಬ್ಬಂದಿಗೂ ಪಿಎಸ್‌ಐ ಗೋಪಾಲ ರೆಡ್ಡಿ ಸೂಚನೆ ನೀಡಿರಲಿಲ್ಲ. ಆರೋಪಿಗಳನ್ನು ಸೂಕ್ತ ಸಂದರ್ಭದಲ್ಲಿ ಬಂಧಿಸಿದ್ದರೆ, ಈ ಸ್ಫೋಟ ಪ್ರಕರಣ ಸಂಭವಿಸುತ್ತಿರಲಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ನೀವು ಅತೀವ ನಿರ್ಲಕ್ಷ ಮತ್ತು ಬೇಜವಾಬ್ದಾರಿತನ ತೋರಿದ್ದೀರಿ. ಈ ಎಲ್ಲ ಕಾರಣಗಳಿಂದಾಗಿ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Recommended Video

ಮತ್ತೆ ಜನಸಾಮಾನ್ಯರಿಗೆ ಅನಿಲಾಘಾತ- ಅಡುಗೆ ಅನಿಲ ದರ 25 ರೂಪಾಯಿ ಹೆಚ್ಚಳ..! | Oneindia Kannada
ಪ್ರಕರಣದ ಹಿನ್ನೆಲೆ

ಪ್ರಕರಣದ ಹಿನ್ನೆಲೆ

ಶಿವಮೊಗ್ಗದಲ್ಲಿ ಸಂಭವಿಸಿದ ಸ್ಫೋಟದ ಘಟನೆ ನಡೆದು ಒಂದು ತಿಂಗಳಾಗುವ ಮೊದಲೇ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೆ ದುರ್ಘಟನೆ ನಿನ್ನೆ (ಫೆ.23) ರಂದು ಬೆಳಗಿನ ಜಾವ ನಡೆದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯ ಹಿರೇನಾಗವಲ್ಲಿ ಸಮೀಪದ ಅರಣ್ಯ ಜಿಲೆಟಿನ್ ಸ್ಫೋಟದಿಂದಾಗಿ ಸ್ಥಳದಲ್ಲೇ ಆರು ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸ್ಪೋಟದ ತೀವ್ರತೆಗೆ ಮೃತದೇಹಗಳು ಛಿದ್ರ ಛಿದ್ರಗೊಂಡಿದ್ದವು.

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿಗಳು ಜಿಲೆಟಿನ್ ಸ್ಫೋಟದಲ್ಲಿ ಮೃತಪಟ್ಟವರನ್ನು ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಆರ್. ಗಂಗಾಧರ್, ವೇಯರ್ ಆಗಿರುವ ಮುರುಳಿ, ವಾಚ್ ಮೆನ್ ಮಹೇಶ್ ಹಾಗೂ ಸ್ಥಳೀಯ ರಾಮು ಎಂದು ಗುರುತಿಸಲಾಗಿತ್ತು.

ಭ್ರಮರವಾಸಿನಿ ಕ್ರಷನ್ ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಇರುವ ಅರಣ್ಯದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಮತ್ತು ಎಲೆಕ್ಟ್ರಿಕ್ ಡಿಟೋನೇಟರ್ಸ್ ಅನ್ನು ಹೊತ್ತು ತರಲು ಒಬ್ಬರು ಬೈಕ್‌ನಲ್ಲಿ ಮುಂದೆ ಸಾಗಿದರೆ ನಾಲ್ವರು ಟಾಟಾ ಏಸ್ ನಲ್ಲಿ ತೆರಳಿದ್ದರು. ಅರಣ್ಯದಲ್ಲಿ ಅಡಗಿಸಿಟ್ಟಿದ್ದ ಸ್ಪೋಟಕಗಳನ್ನು ಒಂದೂವರೆ ಕಿಮೀ ದೂರದಿಂದ ಟಾಟಾ ಏಸ್‌ಗೆ ತರುವಾಗ ಜಿಲೆಟಿನ್ ಸ್ಫೋಟಗೊಂಡು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಾಲಕ ಟಾಟಾ ಏಸ್‌ನಲ್ಲಿಯೇ ಕುಳಿತದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದನು.

ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಮರವಾಸಿನಿ ಕ್ರಷರ್ ಮಾಲೀಕ ಹಾಗೂ ಸ್ಥಳೀಯ ಬಿಜೆಪಿ ಮುಖಂಡ ನಾಗರಾಜು, ಆಂಧ್ರ ಪ್ರದೇಶ ಮೂಲದ ಶಿವಾರೆಡ್ಡಿ ಹಾಗೂ ರಾಘವೇಂದ್ರ ರೆಡ್ಡಿ ಅವರ ಮೇಲೆ ದೂರು ದಾಖಲಾಗಿದೆ.

English summary
Gudibande Police Sub Inspector Gopal Reddy has been suspended for his negligence in the blast at Hirenagavalli Quarry at Gudibande in Chikkaballapur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X