ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿಯಿಂದ ವಿಧಾನಸಭೆಯಲ್ಲಿ 'ಜಿಎಸ್‍ಟಿ' ವಿಧೇಯಕ ಮಂಡನೆ

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 7: 'ಕರ್ನಾಟಕ ಸರಕು ಮತ್ತು ಸೇವಾ ತೆರಿಗೆ ವಿಧೇಯಕ-2017'ನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಸದನದ ಮುಂದೆ ಮಂಡಿಸಿದರು.

ಜುಲೈ 1ರಿಂದ ಏಕರೂಪದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕಾಯ್ದೆಯನ್ನು ದೇಶಾದ್ಯಂತ ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿದ್ದು ಈ ಹಿನ್ನಲೆಯಲ್ಲಿ ಕರ್ನಾಟಕ ಜಿಎಸ್ಟಿಯನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.[ಕಮಲ ಹಾಸನ್ ಟೀಕೆಗೆ ಅರುಣ್ ಜೇಟ್ಲಿ ಖಡಕ್ ಉತ್ತರ]

GST bill placed before Karnataka legislative assembly by chief minister Siddaramaiah

ವಿಧೇಯಕ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿಗಳು, "ಈ ವಿಧೇಯಕದ ಬಗ್ಗೆ ಶಾಸಕರು ತಮ್ಮ ಅಭಿಪ್ರಾಯವನ್ನು ನೀಡಬಹುದು. ಆದರೆ ಇಲ್ಲೇ ಇದಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಜಿಎಸ್ಟಿ ಕುರಿತ ಪರಿಷತ್ ಸಭೆಯಲ್ಲಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಭಾಗವಹಿಸಲಿದ್ದಾರೆ. ಅಲ್ಲಿ ಈ ಅಭಿಪ್ರಾಯಗಳ್ನು ತಿಳಿಸಲಾಗುವುದು," ಎಂದು ಹೇಳಿದರು.

"ಈ ಹಿಂದೆ ಸಚಿವರಾದ ಮಹದೇವಪ್ಪ ಮತ್ತು ಕೃಷ್ಣಭೈರೇಗೌಡ ಅವರು ಜಿಎಸ್‍ಟಿ ಮಂಡಳಿ ಸಭೆಗೆ ಹಾಜರಾಗಿದ್ದರು. ಅವರಿಂದ ಶಾಸಕರಿಗೊಂದು ಕಾರ್ಯಾಗಾರ ಆಯೋಜಿಸಿ ಚರ್ಚೆ ಮಾಡೋಣ," ಎಂದು ಸಿದ್ದರಾಮಯ್ಯ ಹೇಳಿದರು.[ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ]

ಇನ್ನು, "ಕೇಂದ್ರ ಸರಕಾರ ಶೇ. 14ರಷ್ಟು ತೆರಿಗೆ ಇರಬೇಕೆಂಬ ನಿಯಮಾವಳಿ ಜಾರಿಗೆ ತಂದಿದೆ. ಇದರಿಂದ ಹೆಚ್ಚಿನ ತೆರಿಗೆ ಹಾಕುತ್ತಿದ್ದ ರಾಜ್ಯಗಳ ಆದಾಯಕ್ಕೆ ಕತ್ತರಿ ಬೀಳಲಿದೆ. ಆದರೆ ಮುಂದಿನ 5 ವರ್ಷ ಇದಕ್ಕೆ ಕೇಂದ್ರ ಸರಕಾರ ಪರಿಹಾರ ನೀಡಲಿದೆ," ಎಂದೂ ಮುಖ್ಯಮಂತ್ರಿಗಳು ಹೇಳಿದರು.

ಇನ್ನು ಜಿಎಸ್ಟಿ ಮಂಡನೆಗೂ ಮುನ್ನ ಮಾತನಾಡಿದ ಜೆಡಿಎಸ್ ನ ವೈಎಸ್ ವಿ ದತ್ತಾ, ಒಂದೊಮ್ಮೆ ಜಿಎಸ್‍ಟಿ ಜಾರಿಯಾದರೆ ರಾಜ್ಯ ಸರ್ಕಾರಕ್ಕಿರುವ ಅಧಿಕಾರವೇ ಹೊರಟು ಹೋಗಲಿದೆ. ಪ್ರಧಾನಿ ನರೇಂದ್ರ ಮೋದಿ ಚಕ್ರವರ್ತಿಯಾಗಲಿದ್ದು, ನಾವು ಸಾಮಂತ ರಾಜ್ಯಗಳಂತಾಗುತ್ತೇವೆ. ಅವರ ಮುಂದೆ ಭಿಕ್ಷಾಪಾತ್ರೆ ಹಿಡಿಯಬೇಕಾಗುತ್ತದೆ," ಎಂದು ಹೇಳಿದ್ದರು.[ಜುಲೈ 1ರಿಂದ ಅಪಾರ್ಟ್ ಮೆಂಟ್ ಮೇಂಟೆನೆನ್ಸ್ ಶುಲ್ಕ ಹೆಚ್ಚಳ]

ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷ (ಜೆಡಿಎಸ್) ಸಂಸತ್ತಿನಲ್ಲಿ ಯಾಕೆ ಜಿಎಸ್ಟಿ ವಿರೋಧಿಸಿಲ್ಲ. ವಿರೋಧಿಸಿದ್ದರೆ ನನಗೆ ದಾಖಲೆ ತಂದು ಕೊಡಿ ಎಂದು ಹೇಳಿದರು.

ಶಾಸಕರ ಒತ್ತಾಯ ಮತ್ತು ಮುಖ್ಯಮಂತ್ರಿಗಳ ಸಲಹೆ ಮೇರೆಗೆ ನಾಳೆ ಬೆಳಗ್ಗೆ 9 ಗಂಟೆಗೆ ಜಿಎಸ್‍ಟಿ ಕುರಿತ ಚರ್ಚಾಗೋಷ್ಠಿಯನ್ನು ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಆಯೋಜಿಸಿದ್ದಾರೆ.

English summary
‘Karnataka Goods and Services Tax Bill – 2017’ (GST) has been placed before legislative assembly by chief minister Siddaramaiah. With GST already having become a law and Central government decided to implement GST from July 1, now state assembly session is going on to ratify the Goods and Services Tax Constitution Amendment Bill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X