ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರುದ್ರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಜಯದೇವ್

By Mahesh
|
Google Oneindia Kannada News

ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಅವರು ಕವಿ, ಸಹೃದಯ ಚಿಂತಕ, ಸರಳ ಜೀವಿ ಅಷ್ಟೇ ಅಲ್ಲದೆ ಕನ್ನಡ ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ರೂಪದಲ್ಲಿ ತಮ್ಮ ಮಗ ಜಯದೇವ್ ಅವರನ್ನು ನೀಡಿದ್ದಾರೆ. ನಾಡಿನ ದೊಡ್ಡ ಕವಿ ಶಿವರುದ್ರಪ್ಪ ಅವರ ಮಗ ಜಯದೇವ್ ಅವರಿಗೆ ನ್ಯೂರೋ ಫಿಸಿಯಾಲಜಿ ಕಲಿಯಬೇಕು ಎಂಬ ದೊಡ್ಡ ಆಸೆಯಿತ್ತು. ಅಪ್ಪನಂತೆ ಕವನ ಬರೆಯುವ ಗೀಳು ಹತ್ತಿಕೊಳ್ಳಲೇ ಇಲ್ಲವಂತೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಸಮೀಪದ ಹಾದಿಕೆರೆಯಲ್ಲಿ ಶಿವರುದ್ರಪ್ಪ ಹಾಗೂ ರುದ್ರಾಣಿ ಅವರ ಪುತ್ರನಾಗಿ ಜನಿಸಿದ ಜಯದೇವ ಅವರು ಬಾಲ್ಯದಿಂದಲೂ ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿದ್ದರು. ಮೈಸೂರಿನ ಸರಸ್ವತಿ ಪುರಂನಲ್ಲಿ ತೊಟ್ಟಿಲು ಶಾಲೆಯಲ್ಲಿ, ಶಾರದಾ ವಿಲಾಸ್ ನಲ್ಲಿ ಒಂದು ವರ್ಷ ವಿದ್ಯಾಭ್ಯಾಸ ನಂತರ ಹೈದರಾಬಾದಿನ ನೃಪತುಂಗ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಪಠನ.[ರಾಷ್ಟ್ರಕವಿ ಶಿವರುದ್ರಪ್ಪ ಮೆಚ್ಚಿದ ಹತ್ತು ಕವನಗಳು]

ನಂತರ ಮೈಸೂರಿನ ಮರಿಮಲ್ಲಪ್ಪ ಶಾಲೆ, ಬೆಂಗಳೂರಿಗೆ ಬಂದ ಮೇಲೂ ವಿಜ್ಞಾನ ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರು. ಆ ಕಾಲಕ್ಕೆ ಶಿವರುದ್ರಪ್ಪ ಅವರು ದೊಡ್ಡ ಕವಿಯಾಗಿ ಜನಪ್ರಿಯತೆ ಗಳಿಸಿದ್ದರು. ನನ್ನನ್ನು ಎಲ್ಲರೂ ಕೇಳುತ್ತಾ ಇದ್ದರು ನಿಮ್ಮ ಅಪ್ಪ ದೊಡ್ಡ ಕವಿಗಳು ನೀವು ಯಾಕೆ ಏನು ಬರೆಯುವುದಿಲ್ಲವೇ? ನಾನು 10 ಕ್ಲಾಸಿನಲ್ಲಿದ್ದಾಗ ಒಂದು ಕವನ ಬರೆದಿದ್ದೆ ಅದನ್ನು ಓದಿ ಚನ್ನವೀರ ಕಣವಿ ಅವರು ಹೊಗಳಿದ್ದರು.[ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ವಿಧಿವಶ]

ಆದರೆ, ನನ್ನ ಅಪ್ಪ ಎಂದಿಗೂ ನನಗೆ ಕಥೆ ಕವನ ಬರೆಯುವಂತೆ ಒತ್ತಡ ಹೇರಲಿಲ್ಲ. ನನ್ನ ಕಲಿಕೆ ವಿಷಯ ಹಾಗೂ ಅನುಭವ ಎಲ್ಲರಿಗೂ ತಲುಪುವಂತಿರಬೇಕು ಎಂದು ಅಪ್ಪ ಎಂದಿಗೂ ಹೇಳುತ್ತಿದ್ದರು ಎಂದು ಜಯದೇವ್ ಸ್ಮರಿಸಿಕೊಳ್ಳುತ್ತಾರೆ. ಜಯದೇವ್ ಅವರ ಜೀವನ ಕಥೆ ಇನ್ನಷ್ಟು ವಿವರ ಮುಂದೆ ಓದಿ...

ಅಂತಿಮ ಸಂಸ್ಕಾರ ಎಲ್ಲಿ?

ಅಂತಿಮ ಸಂಸ್ಕಾರ ಎಲ್ಲಿ?

ನಾನು ಜೀವನದಲ್ಲಿ ಎಲ್ಲವನ್ನು ಕಂಡಿದ್ದೇನೆ. ಸಾಕಷ್ಟು ಕವನಗಳನ್ನು ಬರೆದಿದ್ದೇನೆ. ಕೃತಕ ಜೀವನಾಧಾರಗಳನ್ನು ನೀಡಿ ನನ್ನನ್ನು ಹೆಚ್ಚು ಕಾಲ ಜೀವಂತ ಇಡಬೇಡಿ. ನನ್ನ ಅಂತ್ಯಕ್ರಿಯೆಯಲ್ಲಿ ಹೆಚ್ಚಿನ ಧಾರ್ಮಿಕ ವಿಧಿ ವಿಧಾನ ಬೇಡ. ನನ್ನ ಕಳೇಬರವನ್ನು ಸುಟ್ಟರೆ ಸಾಕು ಎಂದು ನನ್ನ ಅಪ್ಪ ಹೇಳಿದ್ದರು ಎಂದು ಜಯದೇವ್ ಅವರು ಸ್ಮರಿಸಿಕೊಂಡಿದ್ದಾರೆ.

ದೀನಬಂಧು ಟ್ರಸ್ಟ್

ದೀನಬಂಧು ಟ್ರಸ್ಟ್

"ಮಕ್ಕಳು ಒಡನಾಡುತ್ತಾ ಕಲಿಯಬೇಕು, ಮತ್ತು ಶಿಕ್ಷಕರು ಮಕ್ಕಳೊಂದಿಗೆ ಬೆರೆತು ಒಂದಾಗಬೇಕು, ಆಗ ಕಲಿಕೆಯ ಮಟ್ಟ ತಾನಾಗೇ ಮೇಲೇರತೊಡಗುತ್ತದೆ" ಎಂಬ ಆಶಯದೊಂದಿಗೆ ಕಳೆದ 24 ವರ್ಷಗಳಿಂದ ಚಾಮರಾಜನಗರ ಜಿಲ್ಲೆಯಲ್ಲಿ ಮಕ್ಕಳ ಶಿಕ್ಷಣ ಕ್ಷೇತ್ರಕ್ಕೆ ಜಯದೇವ್ ಅವರು ವಿಶಿಷ್ಟವಾಗಿ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಶಾಲೆಯ ಜತೆಗೆ ಅನಾಥ ಮಕ್ಕಳಿಗಾಗಿ ಎರಡು ಆಶ್ರಮಗಳನ್ನು ಸ್ಥಾಪಿಸಿರುವ ಜಯದೇವ್ ಅವರು ಮ್ಯಾಗ್ಸೆಸೇ ಪ್ರಶಸ್ತಿ ವಿಜೇತ ಸುದರ್ಶನ್ ಅವರ ಜತೆಗೂಡಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವನ್ನು ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ಥಾಪಿಸಿದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲಿಕೆಯು ಬ್ಲಾಗಿನಲ್ಲಿ ತಪ್ಪದೇ ಓದಿ

ಜಯದೇವ್ ಅಮ್ಮಂದಿರು

ಜಯದೇವ್ ಅಮ್ಮಂದಿರು

ಇಬ್ಬರು ಅಮ್ಮಂದಿರ ಪ್ರೀತಿ ಹಾಗೂ ಅಪ್ಪ ಶಿವರುದ್ರಪ್ಪ ಅವರ ಸೂಕ್ತ ಮಾರ್ಗದರ್ಶನ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಕಲಿಕೆಯ ಹೊಸ ಬೆಳಕನ್ನು ಮೂಡಿಸುತ್ತಿರುವ ಜಯದೇವ್

ದೀನಬಂಧು ಟ್ರಸ್ಟ್ ಬಗ್ಗೆ

ಜಿಎಸ್ ಜಯದೇವ್ ಅವರ ದೀನ ಬಂಧು ಟ್ರಸ್ಟ್ ಬಗ್ಗೆ ವಿಡಿಯೋ

ಶಿವರುದ್ರಪ್ಪ ಅವರ ಸ್ಪೂರ್ತಿ

ಸುತ್ತೂರು ಶ್ರೀಗಳು, ಡಾ. ರಾಜ್ ಕುಮಾರ್ ಜತೆಗೆ ವಿದೇಶಿಯರಿಂದ ಶಾಲೆಗೆ ನೆರವು ಸಿಕ್ಕಿತು.

ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯಲು ಶಿವರುದ್ರಪ್ಪ ಅವರ ಸ್ಪೂರ್ತಿ ಕಾರಣ ಎಂದು ಜಯದೇವ್ ಹೇಳಿದ್ದಾರೆ. ಸಮಾಜಮುಖಿಯಾದ ಜಯದೇವ್ ಅವರು ಮದುವೆ ಬಂಧನಕ್ಕೆ ಒಳಪಡದೆ ಸಾಮಾಜಿಕ ಅಭಿವೃದ್ಧಿಗಾಗಿ ಇಂದಿಗೂ ದುಡಿಯುತ್ತಿದ್ದಾರೆ.

ಟಿವಿ 9 ನ 'ನನ್ನ ಕಥೆ' ಕಾರ್ಯಕ್ರಮದಲ್ಲಿ ಜಯದೇವ್ ಅವರ ಮಾತುಗಳನ್ನು ಕೇಳಿ

English summary
Deenabandhu trust is a voluntary organization committed to the welfare of orphaned,abandoned and destitute children of all castes,creed and religion. It was founded in 1992 and has an orphanage and a school.Here are the details about noble cause by GS Shivarudrappa's Son GS Jayadev
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X