ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ವಿವಿಧ ಗ್ರಾಮ ಪಂಚಾಯಿತಿಗಳಿಗೆ ಉಪ ಚುನಾವಣೆ ಘೋಷಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25 : ಕರ್ನಾಟಕದ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ನವೆಂಬರ್ 12ರಂದು ಉಪ ಚುನಾವಣೆ ನಡೆಯಲಿದೆ.

ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿಸೂಚನೆ ಅನ್ವಯ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಕೋಲಾರ ತಾಲೂಕಿನ ಉರಿಗಿಲಿ, ಅರಾಭಿಕೊತ್ತನೂರು ಬಂಗಾರಪೇಟೆ ತಾಲೂಕಿನ ಕಂಗಾಂಡ್ಲಹಳ್ಳಿ ಮತ್ತು ಪಾರಂಡಹಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಗ್ರಾ ಪಂಚಾಯಿತಿಗೆ ಕನ್ನ ಹಾಕಿ ಕಂಪ್ಯೂಟರ್ ದೋಚಿದ ಕಳ್ಳರುಗ್ರಾ ಪಂಚಾಯಿತಿಗೆ ಕನ್ನ ಹಾಕಿ ಕಂಪ್ಯೂಟರ್ ದೋಚಿದ ಕಳ್ಳರು

ಅಕ್ಟೋಬರ್ 28ರಂದು ಅಧಿಸೂಚನೆ ಪ್ರಕಟವಾಗಲಿದೆ. ಅಕ್ಟೋಬರ್ 31ರ ಗುರುವಾರದಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನ. ನವಂಬರ್ 2ರ ಶನಿವಾರದಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.

ದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲೋಪ; ಸದಸ್ಯರ ಆರೋಪದಾವಣಗೆರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಲೋಪ; ಸದಸ್ಯರ ಆರೋಪ

Grama Panchayat By Election 2019 Announced

ನವಂಬರ್ 4 ರ ಸೋಮವಾರ ನಾಮಪತ್ರ ವಾಪಸ್ ಪಡೆಯಬಹುದಾಗಿದೆ. ಮತದಾನ ಅವಶ್ಯವಿದ್ದರೆ ನವಂಬರ್ 12 ರಂದು (ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ತನಕ) ನಡೆಸಲಾಗುತ್ತದೆ. ನವಂಬರ್ 14ರ ಗುರುವಾರ ತಾಲೂಕು ಕೇಂದ್ರದಲ್ಲಿ ಮತಎಣಿಕೆ ನಡೆಯಲಿದೆ.

ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ! ಸ್ಥಳೀಯ ಸಂಸ್ಥೆ ಚುನಾವಣೆ : ಅತ್ತೆಗೆ ಸೋಲಿನ ರುಚಿ ತೋರಿಸಿದ ಸೊಸೆ!

ಧಾರವಾಡ ಜಿಲ್ಲೆ : ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಹಳ್ಯಾಳ, ಧಾರವಾಡ ತಾಲೂಕಿನ ಅಮ್ಮಿನಭಾವಿ, ಕುಂದಗೋಳ ತಾಲೂಕಿನ ಚಾಕಲಬ್ಬಿ, ನವಲಗುಂದ ತಾಲೂಕಿನ ಯಮನೂರ ಹಾಗೂ ಹಳ್ಳಿಕೇರಿ ಗ್ರಾಮ ಪಂಚಾಯತಿಗಳಲ್ಲಿಯೂ ಉಪ ಚುನಾವಣೆ ನಡೆಯಲಿದೆ.

English summary
Karnataka Election Commission announced schedule for the by election of the various districts grama panchayat. Election will be held on November 12, 2019 and Counting on November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X