ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಗ್ರಾ.ಪಂ ಚುನಾವಣಾ ಫಲಿತಾಂಶ 2020: ಡಿ.30 ರಂದು ಮತ ಎಣಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಗ್ರಾಮ ಪಂಚಾಯತಿಗಳ ಚುನಾವಣೆಯ ಎರಡು ಹಂತದ ಮತದಾನ ರಾಜ್ಯದಲ್ಲಿ ಮುಕ್ತಾಯಗೊಂಡಿದ್ದು, ಮತ ಎಣಿಕೆಯು ಬುಧವಾರ (ಡಿ.30) ರಂದು ನಡೆಯಲಿದೆ. ಫಲಿತಾಂಶಗಳು ರಾಜ್ಯ ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. karsec.gov.in ಮತ್ತು ceokarnataka.kar.nic.in. ನಲ್ಲಿ ನೋಡಬಹುದು.

ಮತ ಎಣಿಕೆಯು ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಎಣಿಕೆ ಪ್ರಾರಂಭವಾದ ತಕ್ಷಣ ಆರಂಭಿಕ ಮುನ್ನಡೆಗಳು ಬರಲಾರಂಭಿಸುತ್ತವೆ. ಆದರೆ ಅಂತಿಮ ಫಲಿತಾಂಶ ದಿನದ ಅಂತ್ಯದ ವೇಳೆಗೆ ಸ್ಪಷ್ಟವಾಗುತ್ತವೆ ಎಂದು ಹೇಳಲಾಗಿದೆ.

ಗ್ರಾ.ಪಂ ಚುನಾವಣಾ ಮತ ಎಣಿಕೆ: ಡಿ.30 ರಂದು ಮದ್ಯ ಮಾರಾಟ ನಿಷೇಧಗ್ರಾ.ಪಂ ಚುನಾವಣಾ ಮತ ಎಣಿಕೆ: ಡಿ.30 ರಂದು ಮದ್ಯ ಮಾರಾಟ ನಿಷೇಧ

ಡಿ.22 ರಂದು ಪ್ರಾರಂಭವಾದ ಮೊದಲ ಹಂತದ ಮತದಾನ, ಭಾನುವಾರ ನಡೆದ ಎರಡನೆ ಹಂತದ ಮತದಾನದೊಂದಿಗೆ ಚುನಾವಣೆ ಮುಕ್ತಾಯಗೊಂಡಿದೆ. ಮೊದಲ ಹಂತದಲ್ಲಿ ಶೇ.80 ರಷ್ಟು ಮತದಾನ ದಾಖಲಾಗಿದ್ದರೆ, ಭಾನುವಾರ ನಡೆದ ಎರಡನೇ ಹಂತದಲ್ಲಿ ಈ ಸಂಖ್ಯೆ 80.71 ಕ್ಕೆ ಏರಿದೆ.

Karnataka Gram Panchayat Election Results 2020: Counting Date, Time And Where To Check The Results

ಮೊದಲ ಹಂತದ ಮತದಾನದಲ್ಲಿ 117 ತಾಲ್ಲೂಕುಗಳಲ್ಲಿ 3,000 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಮತದಾನ ಮಾಡಿದ್ದವು. ಎರಡನೇ ಹಂತದಲ್ಲಿ 109 ತಾಲ್ಲೂಕುಗಳಲ್ಲಿ 2,709 ಪಂಚಾಯಿತಿಗಳಿಗೆ ಮತದಾನ ನಡೆದಿತ್ತು. ಎರಡೂ ಹಂತಗಳಲ್ಲಿ 72,616 ಸ್ಥಾನಗಳಿಗೆ 2,22,814 ಅಭ್ಯರ್ಥಿಗಳು ಕಣದಲ್ಲಿದ್ದರು. ಈಗಾಗಲೇ 8,074 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನ.30 ರಂದು ಗ್ರಾ.ಪಂ ಚುನಾವಣೆಯನ್ನು ಘೋಷಿಸಲಾಗಿತ್ತು. ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ ರಾಜ್ಯ ಚುನಾವಣಾ ಆಯುಕ್ತ ಬಿ.ಬಸವರಾಜು ಅವರು, ಪ್ರಸ್ತುತ ಕೊರೊನಾ ವೈರಸ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎರಡು ಹಂತಗಳಲ್ಲಿ ಮತದಾನ ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

6,004 ಗ್ರಾಮ ಪಂಚಾಯಿತಿಗಳಲ್ಲಿ 5,762 ಪಂಚಾಯತಿಗಳಿಗೆ ಮಾತ್ರ ಚುನಾವಣೆ ಘೋಷಿಸಲಾಯಿತು. 242 ಪಂಚಾಯಿತಿಗಳ ಚುನಾವಣೆ ವಿವಿಧ ಕಾರಣಗಳಿಂದ ನಡೆಯಲಿಲ್ಲ. ಆಯೋಗವು ಬೀದರ್ ಜಿಲ್ಲೆಯಲ್ಲಿ ಇವಿಎಂಗಳನ್ನು ಬಳಸಿದರೆ, ಇತರ ಸ್ಥಳಗಳಲ್ಲಿ ಮತದಾನಕ್ಕಾಗಿ ಮತಪತ್ರಗಳನ್ನು ಬಳಸಲಾಯಿತು.

Recommended Video

ಬೆಂಗಳೂರು: 'ಗ್ರಾ.ಪಂ ಮಟ್ಟದಲ್ಲಿ ಬಿಜೆಪಿ ಹಿಡಿತ ಸಾಧಿಸುತ್ತಿದೆ'-ಆರ್.ಆಶೋಕ್ | Oneindia Kannada

English summary
The two-phase voting for the Gram Panchayats has concluded in the state and the counting of votes will take place on Wednesday (Dec. 30).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X