ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ಚುನಾವಣೆ; ಕೋವಿಡ್ ಮಾರ್ಗಸೂಚಿಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಕೋವಿಡ್ ಸಂದರ್ಭದಲ್ಲಿಯೇ ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣೆ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.

ಕರ್ನಾಟಕದ 5,762 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22 ಮತ್ತು 27ರಂದು ಮತದಾನ ನಡೆಯಲಿದೆ. ಮತ ಎಣಿಕೆ ಡಿಸೆಂಬರ್ 30ರಂದು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ.

ಗ್ರಾಮ ಪಂಚಾಯಿತಿ ಚುನಾವಣೆ; ನೀತಿ ಸಂಹಿತೆಯಲ್ಲಿ ಏನಿದೆ? ಗ್ರಾಮ ಪಂಚಾಯಿತಿ ಚುನಾವಣೆ; ನೀತಿ ಸಂಹಿತೆಯಲ್ಲಿ ಏನಿದೆ?

ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಾಲನೆ ಮಾಡಬೇಕಾದ ಕೋವಿಡ್ ಮಾರ್ಗಸೂಚಿಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಮತದಾನ ಕೇಂದ್ರ ಮತ್ತು ಮತದಾನಕ್ಕೆ ಬರುವ ಜನರು ಈ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು.

Breaking: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆBreaking: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆ

Gram Panchayat Election COVID Protocol

ಕೋವಿಡ್ ಹಿನ್ನೆಲೆಯಲ್ಲಿ 1400 ಮತದಾರರಿಗೆ ಒಂದು ಮತಗಟ್ಟೆ ಎಂಬ ನಿಯಮವನ್ನು ಬದಲಾವಣೆ ಮಾಡಲಾಗಿದ್ದು, ಗರಿಷ್ಟ 1000 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಲಾಗುತ್ತದೆ. ಮತದಾನಕ್ಕೆ ನಿಗದಿ ಮಾಡಿದ ಹಾಗೂ ಅಕ್ಕ-ಪಕ್ಕದ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗುತ್ತದೆ.

ಬೆಳಗಾವಿ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆಬೆಳಗಾವಿ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿ, ಪೋಲಿಂಗ್ ಅಧಿಕಾರಿ ಕೂರುವ ಆಸನಗಳನ್ನು ನಿಯಮದಂತೆ ಜೋಡಿಸಬೇಕಿದೆ. ಮತದಾನಕ್ಕೆ ಆಗಮಿಸುವ ಪ್ರತಿ ಮತದಾರ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮತದಾನದ ದಿನ ಅಧಿಕಾರಿಗಳು ಕಡ್ಡಾಯವಾಗಿ ಫೇಸ್‍ಮಾಸ್ಕ್, ಫೇಸ್ ಶೀಲ್ಡ್‌ ಮತ್ತು ಹ್ಯಾಂಡ್ ಗ್ಲೌಸ್‌ಗಳನ್ನು ಧರಿಸಿಬೇಕು.

ಕೋವಿಡ್ ಮಾರ್ಗಸೂಚಿಗಳು

* ಮತಚಲಾಯಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಫೇಸ್‍ ಮಾಸ್ಕ್ ಧರಿಸಿರಬೇಕು ಹಾಗೂ ಸರತಿ ಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕು.

* ಪ್ರತಿಯೊಂದು ಮತದಾನ ಕೇಂದ್ರದ ಪ್ರವೇಶದ್ವಾರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಮತದಾನ ಕೊಠಡಿಗೆ ಪ್ರವೇಶಿಸುವ ವ್ಯಕ್ತಿಗಳನ್ನು ಥರ್ಮಲ್‍ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುತ್ತದೆ.

* ಕೋವಿಡ್ ಸೋಂಕು ಹೊಂದಿರುವ ಮತದಾರರಿಗೆ ಮತದಾನ ಮಾಡಲು ಮತದಾನ ಅವಧಿಯ ಕೊನೆಯ ಒಂದು ಗಂಟೆ ಮೀಸಲಿಡಲಾಗಿದೆ, ಅವರಿಗೆ ಎಲ್ಲ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

Recommended Video

Atulya Ganga : ಗಂಗೆಯನ್ನು ಶುದ್ಧಗೊಳಿಸಲು ನಿವೃತ್ತ ಸೈನಿಕರ ಮಹಾ ಯೋಜನೆ | Oneindia Kannada

* ಕೋವಿಡ್ -19 ಲಕ್ಷಣಗಳು ಕಂಡುಬಂದ ವ್ಯಕ್ತಿಗಳನ್ನು ಪ್ರತ್ಯೇಕಿಸಿ, ಹೆಚ್ಚಿನ ತಪಾಸಣೆಗೆ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪ್ರತ್ಯೇಕ ಆರೋಗ್ಯ ತಂಡ ರಚಿಸಲಾಗುತ್ತದೆ.

* ಮತದಾನ ಕೇಂದ್ರದಲ್ಲಿ ಮಹಿಳಾ ಮತದಾರರು ಮತ್ತು ಪುರುಷ ಮತದಾರರಿಗೆ ಪ್ರತ್ಯೇಕ ಸರತಿ ಸಾಲುಗಳನ್ನು ಸಾಮಾಜಿಕ ಅಂತರ ಕಾಯ್ದುಕೊಂಡು ರಚನೆ ಮಾಡಲಾಗುತ್ತದೆ. ಮತದಾರನ ಗುರುತನ್ನು ಪರಿಶೀಲಿಸಿದ ನಂತರ ಮತದಾರರು ತಂದಿರುವ ಗುರುತಿನ ಚೀಟಿಯನ್ನು ಅದಕ್ಕಾಗಿ ಇಟ್ಟಿರುವ ಡಬ್ಬದಲ್ಲಿ ಹಾಕಬೇಕು.

* ಸೋಂಕಿತ ವ್ಯಕ್ತಿಗಳು ಮತ ಚಲಾಯಿಸುವ ಹಕ್ಕು ಉಳ್ಳವರಾಗಿದ್ದು, ಇವರಿಗೆ ಅಂಚೆ ಮತಪತ್ರವನ್ನು ನೀಡುವ ಬಗ್ಗೆ ರಾಜ್ಯ ಚುನಾವಣಾ ಆಯೋಗದಿಂದ ಪ್ರತ್ಯೇಕ ಆದೇಶ, ಮಾರ್ಗಸೂಚಿಯನ್ನು ನೀಡಲಾಗುತ್ತದೆ.

English summary
Here are the direction to follow COVID protocol during gram panchayat election. Voting will be held on December 22 and 27, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X