ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಟಿವಿ ಚಾನೆಲ್ ಗೆ 130 ರು : ಜಿ ಪರಮೇಶ್ವರ ಭರವಸೆ

100 ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರು ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಗೃಹ ಸಚಿವ ಜಿ. ಪರಮೇಶ್ವರ್‌ ವಿಧಾನಪರಿಷತ್ತಿನಲ್ಲಿ ಹೇಳಿದರು

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 21: ಕೇಬಲ್ ಟಿವಿ ಮಾಫಿಯ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. 100 ಟಿವಿ ಚಾನೆಲ್‌ ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ 130 ರು ಶುಲ್ಕ ಮಾತ್ರ ವಿಧಿಸಬೇಕು. ಅದಕ್ಕಿಂತ ಹೆಚ್ಚು ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಗೃಹ ಸಚಿವ ಜಿ. ಪರಮೇಶ್ವರ್‌ ವಿಧಾನಪರಿಷತ್ತಿನಲ್ಲಿ ಸೋಮವಾರ ತಿಳಿಸಿದರು.

1995ರ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಕಾಯ್ದೆ ಹಾಗೂ 1994ರ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ನಿಯಮದ ಪ್ರಕಾರ ಕೇಬಲ್ ಚಾನಲ್‍ಗಳಿಗೆ ದರ ನಿಗದಿ ಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ. ಈ ನಿಯಮದ ಪ್ರಕಾರ ಒಂದು ಟಿವಿಗೆ ಪ್ರತಿ ತಿಂಗಳು 130ರೂ. ತೆರಿಗೆ ವಿಧಿಸಬೇಕು ಎಂದರು.

Govt will curb Cable TV Mafia menace : G Parameshwara

ತೆರಿಗೆ ಸಿಗುತ್ತಿಲ್ಲ : ಕಾಂಗ್ರೆಸ್‌ನ ವಿ.ಎಸ್. ಉಗ್ರಪ್ಪ ಅವರು ಮಾತನಾಡಿ, ''ರಾಜ್ಯದ 1.25 ಕೋಟಿ ಕುಟುಂಬಗ ಳ ಪೈಕಿ ಸರಿಸುಮಾರು 1 ಕೋಟಿ ಕುಟುಂಬಗಳಲ್ಲಿ ಟಿ.ವಿ ಇದೆ. ಪ್ರತಿ ಟಿ.ವಿಗೆ 300 ರು ಎಂದು ಲೆಕ್ಕ ಇಟ್ಟುಕೊಂಡರೂ ಪ್ರತಿ ತಿಂಗಳಿಗೆ 300 ಕೋಟಿ ರು ಆಗುತ್ತದೆ. ಒಂದು ವರ್ಷಕ್ಕೆ 3,600 ಕೋಟಿ ರು ವಹಿವಾಟು ಕೇಬಲ್‌ ನೆಟ್‌ ವರ್ಕ್‌ಗಳ ಮೂಲಕ ನಡೆಯುತ್ತಿದೆ. ಇಷ್ಟಾದರೂ ಸರ್ಕಾರಕ್ಕೆ ಒಂದು ರೂಪಾಯಿ ತೆರಿಗೆ ಬರುವುದಿಲ್ಲ. ರಾಜ್ಯ ಸರ್ಕಾರ ನಿಯಂತ್ರಣ ಹೇರಬೇಕು. ಇದು ಕೇಂದ್ರ ಸರ್ಕಾರಕ್ಕೆ ಸೇರಿದ್ದು ಎಂದು ಸುಮ್ಮನಾಗಬಾರದು' ಎಂದು ಸಲಹೆ ನೀಡಿದರು.

English summary
Karnataka government will curb Cable TV Mafia menace and will limit the monthly rental to Rs 130 for 100 TV Channels said Home minister G Parameshwara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X