• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗ್ರಾಮೀಣ ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್ -ರಮೇಶ್ ಕುಮಾರ್

By Sachhidananda Acharya
|

ಬೆಂಗಳೂರು, ಜುಲೈ 3: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ನೇಮಕಾತಿಗಾಗಿ ಸರಕಾರ ವಿನೂತನ ಆನ್‌ಲೈನ್‌ ಬಿಡ್‌ ನಡೆಸಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗ್ರಾಮೀಣ ಭಾಗದಲ್ಲಿ ವೈದ್ರ ಕೊರತೆ ಇದೆ. ರೂ. 1.25ಲಕ್ಷ ಸಂಬಳ ಕೊಟ್ಟರೂ ತಜ್ಞ ವೈದ್ಯರು ಸೇವೆಗೆ ಬರುತ್ತಿಲ್ಲ. ಹೀಗಾಗಿ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವ ಆರೋಗ್ಯ ಇಲಾಖೆ ಆನ್‌ಲೈನ್‌ ಬಿಡ್ ಮೂಲಕ ತಜ್ಞ ವೈದ್ಯರನ್ನು ಪಡೆದು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳ ನೇಮಕ ಮಾಡಲಿದೆ. ನಾಳೆಯಿಂದಲೇ ಸರ್ಕಾರ ಬಿಡ್ ಕರೆಯಲು ಸಿದ್ಧತೆ ನಡೆಸಲಿದೆ," ಎಂದು ಹೇಳಿದರು.

ರಾಜ್ಯದಲ್ಲಿ 2869 ನಕಲಿ ವೈದ್ಯರು, ಶಿವಮೊಗ್ಗ ನಂಬರ್ ಒನ್

ಇದೇ ವೇಳೆ ಎಂಡೋ ಸಂತ್ರಸ್ತರಿಗೆ ಪರಿಹಾರ, ಯುನಿವರ್ಸಲ್ ಹೆಲ್ತ್ ಕಾರ್ಡ್, ಡೆಂಗ್ಯೂ ಸಂಬಂಧಿಸಿದಂತೆಯೂ ರಮೇಶ್ ಕುಮಾರ್ ಮಾತನಾಡಿದ್ದಾರೆ.

 ಎಂಡೋ ಸಂತ್ರಸ್ತರಿಗೆ ರೂ, 100 ಕೋಟಿ ಪ್ಯಾಕೇಜ್

ಎಂಡೋ ಸಂತ್ರಸ್ತರಿಗೆ ರೂ, 100 ಕೋಟಿ ಪ್ಯಾಕೇಜ್

ರಾಜ್ಯದಲ್ಲಿರುವ ಎಂಡೋಸಲ್ಫಾನ್ ಪೀಡಿತರಿಗೆ 100 ಕೋಟಿ ಮೊತ್ತದ ಯೋಜನೆ ರೂಪಿಸಲಾಗುವುದು ಎಂದು ರಮೇಶ್ ಕುಮಾರ್ ಇದೇ ಸಂದರ್ಭದಲ್ಲಿ ಹೇಳಿದರು.

"ಕರ್ನಾಟಕದ ಕರಾವಳಿ ಭಾಗದಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯ ಬಂದಿತ್ತು. ಅಲ್ಲಿನಂತೆ ಇಲ್ಲೂ ಪರಿಹಾರ ನೀಡಲು ರಾಜ್ಯಮಟ್ಟದ ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತದೆ," ಎಂದು ಸಚಿವ ರಮೇಶ್ ಕುಮಾರ್ ಹೇಳಿದರು.

"ರಾಜ್ಯದಲ್ಲಿ ಒಟ್ಟು 6500 ಎಂಡೋಸಲ್ಫಾನ್ ಸಂತ್ರಸ್ತರಿದ್ದು, ಇವರಿಗೆ ಪರಿಹಾರ ಒದಗಿಸಲು ಸರ್ಕಾರಕ್ಕೆ ಅಂದಾಜು ರೂ. 100 ಕೋಟಿ ಖರ್ಚಾಗಲಿದೆ. ಇದಕ್ಕಾಗಿ ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸಿ, ಪರಿಹಾರ ನೀಡಲಾಗುವುದು," ಎಂದರು.

ಎಂಡೋಪೀಡಿತರಿಗೆ ಆರ್ಥಿಕ ಸಹಾಯ

ಎಂಡೋಪೀಡಿತರಿಗೆ ಆರ್ಥಿಕ ಸಹಾಯ

"ಎಂಡೋಸಲ್ಫಾನ್ ನಿಂದ ಸಂಪೂರ್ಣ ಹಾಸಿಗೆ ಹಿಡಿದವರಿಗೆ 3ಲಕ್ಷ ಕೊಡಲಿದ್ದೇವೆ. ಎಂಡೋಸಲ್ಫಾನ್ ನಿಂದ ಕ್ಯಾನ್ಸರ್ ತೊಂದರೆಗೆ ಸಿಲುಕಿರುವವರಿಗೆ ಆರ್ಥಿಕ ಸಹಾಯ ನೀಡುತ್ತೇವೆ. ಇದಕ್ಕೆ ರೂ. 100ಕೋಟಿ ವರೆಗೂ ಖರ್ಚು ಬರಲಿದೆ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಉತ್ತಮ ತೀರ್ಮಾನ ತೆಗೆದುಕೊಳ್ಳುತ್ತೇವೆ," ಎಂದು ರಮೇಶ್ ಕುಮಾರ್ ಹೇಳಿದರು.ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿಕೆ

 ಖಾಸಗೀ ಆಸ್ಪತ್ರೆಗಳ ಮೇಲೆ ಹಿಡಿತ ಸಾಧಿಸಲು ಕಾಯ್ದೆ ಮಂಡನೆ

ಖಾಸಗೀ ಆಸ್ಪತ್ರೆಗಳ ಮೇಲೆ ಹಿಡಿತ ಸಾಧಿಸಲು ಕಾಯ್ದೆ ಮಂಡನೆ

"ಖಾಸಗೀ ಆಸ್ಪತ್ರೆಗಳು ರೋಗಿಗಳಿಗೆ ವಿಧಿಸುವ ಶುಲ್ಕದ ಮೇಲೆ ಹಿಡಿತ ಸಾಧಿಸಲು ಕಾಯ್ದೆ ಮಂಡನೆಗೆ ಮುಂದಾಗಿದ್ದೇವೆ. ಈ ಬಗ್ಗೆ ಚರ್ಚೆ ನಡೆಸಲು ಜುಲೈ 6ರಂದು ಮೊದಲ ಸಭೆ ನಡೆಯಲಿದೆ," ಎಂದೂ ರಮೇಶ್ ಕುಮಾರ್ ಹೇಳಿದರು.

"ತರಾತುರಿಯಲ್ಲಿ ಈ ಕಾಯ್ದೆ ತರುವುದು ಬೇಡ ಎಂದು ಸದನದಲ್ಲಿ ಶಾಸಕರು ಹೇಳಿದ್ದರು. ಹೀಗಾಗಿ ನಾನೂ ಚರ್ಚೆಗೆ ಒಪ್ಪಿಕೊಂಡೆ. ಹಾಗಾಗಿ ಸಭೆಯ ಮೂಲಕ ಚರ್ಚೆಗೆ ಅವಕಾಶ ನೀಡಲಾಗಿದೆ. ಚರ್ಚೆಯ ಬಳಿಕ ಕಾಯ್ದೆ ಜಾರಿಗೆ ತರಲಾಗುವುದು," ಎಂದು ಹೇಳಿದರು.

ಯುನಿವರ್ಸಲ್ ಹೆಲ್ತ್ ಕಾರ್ಡ್

ಯುನಿವರ್ಸಲ್ ಹೆಲ್ತ್ ಕಾರ್ಡ್

ರಾಜ್ಯ ಸರಕಾರ ಸರ್ವರಿಗೂ ಆರೋಗ್ಯ ಭಾಗ್ಯ ನೀಡುವ ಯುನಿವರ್ಸಲ್ ಹೆಲ್ತ್ ಕಾರ್ಡ್ ನೀಡಲು ಮುಂದಾಗಿದೆ. ರಾಜ್ಯದ 1 ಕೋಟಿ 30 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಸಿಗಲಿದೆ. ಎಪಿಎಲ್, ಬಿಪಿಎಲ್ ಮಾನದಂಡವಿಲ್ಲದೆ ಎಲ್ಲರಿಗೂ ಈ ಕಾರ್ಡ್ ಸಿಗಲಿದೆ. ಈ ಕಾರ್ಡ್ ಪಡೆದವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧಿ ಸಿಗಲಿದೆ ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

"ಈ ಯೂನಿವರ್ಸಲ್ ಹೆಲ್ತ್ ಕಾರ್ಡ್ ವಿತರಣೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಎಪಿಎಲ್, ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಉಚಿತ ಚಿಕಿತ್ಸೆ ನೀಡಲಾಗುತ್ತದೆ.

ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧಿಯನ್ನು ಇದರ ಅಡಿಯಲ್ಲಿ ವಿತರಣೆ ಮಾಡಲಾಗುತ್ತದೆ. ಯೂನಿವರ್ಸಲ್ ಹೆಲ್ತ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಿರಬೇಕು. ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಚಿಕಿತ್ಸೆ, ಔಷಧಿ ಸಿಗಲಿದೆ," ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಡೆಂಗ್ಯೂ ನಿಯಂತ್ರಣಕ್ಕೆ ಸಕಲ ಸಿದ್ಧತೆ

ಡೆಂಗ್ಯೂ ನಿಯಂತ್ರಣಕ್ಕೆ ಸಕಲ ಸಿದ್ಧತೆ

ಇನ್ನು ಡೆಂಗ್ಯೂ ಬಗ್ಗೆ ಮಾತನಾಡಿದ ರಮೇಶ್ ಕುಮಾರ್, "ಡೆಂಗ್ಯೂ ಬಗ್ಗೆ ನನಗೆ ಬಹಳ ಬೇಸರ ಇದೆ. ನನಗೆ ಮೈಸೂರಿನಿಂದ ಸರಿಯಾದ ಮಾಹಿತಿ ನೀಡಿರಲಿಲ್ಲ. ಈಗ ಬೆಂಗಳೂರಿನಲ್ಲಿಯೂ ಡೆಂಗ್ಯೂ ಸಮಸ್ಯೆ ಕಾಡುತ್ತಿದೆ. ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೂಡ ಡೆಂಗ್ಯೂ ಪತ್ತೆಯಾಗಿದೆ. ಅಗತ್ಯ ಚಿಕಿತ್ಸೆಗೆ, ಪ್ಲೇಟ್ಸ್ ಲೆಟ್ಸ್ ಸಿದ್ಧತೆಗೂ ಅಣಿಯಾಗಿದ್ದೇವೆ. ಡೆಂಗ್ಯೂ ನಿಯಂತ್ರಣಕ್ಕೆ ಸರ್ಕಾರ ಸಕಲ ಸಿದ್ಧತೆ ನಡೆಸಲಿದೆ," ಎಂದು ರಮೇಶ್ ಕುಮಾರ್ ಮಾಹಿತಿ ನೀಡಿದರು.

ಡೆಂಗ್ಯೂ ತಡೆಗೆ ಯಾವ ಮುಂಜಾಗ್ರತಾ ಕ್ರಮ ಬೇಕು?

English summary
“Government will call online bid to fill vacant posts of expert doctors in rural area,” said health minister Ramesh Kumar in a press meet here in Vidhan Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more