ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದು ಮಂದಿ ಐಪಿಎಸ್ ಅಧಿಕಾರಿಗಳ ವರ್ಗಾವಣೆ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಕರ್ನಾಟಕ ರಾಜ್ಯ ಸರ್ಕಾರವು ಭಾರತೀಯ ಪೊಲೀಸ್ ಸೇವೆಯಲ್ಲಿರುವ ಐದು ಮಂದಿ ಅಧಿಕಾರಿಗಳನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಆದೇಶಿಸಿ ಬುಧವಾರ ವರ್ಗಾವಣೆ ಮಾಡಿದೆ. ಆಗಸ್ಟ್ ತಿಂಗಳ ಆರಂಭದಲ್ಲಿಯಷ್ಟೇ ಡಿ. ರೂಪಾ, ರೋಹಿಣಿ ಕಟೋಚ್, ಉಮೇಶ್ ಕುಮಾರ್, ಶಶಿಕುಮಾರ್, ಅನುಚೇತ್ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು.

Recommended Video

ಮೈಸೂರಿನ ರಾಜಮನೆತನದ Yaduveer Krishnadatta ರಾಜಕೀಯದ ಬಗ್ಗೆ ಮಹತ್ವದ ನಿರ್ಧಾರ | Oneindia Kannada

ವರ್ಗಾವಣೆಯ ಆದೇಶ ಮಾಡಿದ್ದ ಎರಡು ವಾರಗಳಲ್ಲಿಯೇ ಮತ್ತೊಂದು ವರ್ಗಾವಣೆಯ ಆದೇಶ ಮಾಡಲಾಗಿದೆ. ಆಗಸ್ಟ್ 3ರಂದು ಹೊರಡಿಸಿದ್ದ ಆದೇಶದಲ್ಲಿ ಕಲಬುರ್ಗಿಯ ಪೊಲೀಸ್ ತರಬೇತಿ ಕೇಂದ್ರದಿಂದ ಉಡುಪಿಯ ಕಾರ್ಕಳದ ನಕ್ಸಲ್ ನಿಗ್ರಹ ದಳದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದ್ದ ಐಯಾಡಾ ಮಾರ್ಟಿನ್ ಮರ್ಬನಿಯಾಂಗ್ ಅವರ ವರ್ಗಾವಣೆಯನ್ನು ರದ್ದುಗೊಳಿಸಲಾಗಿದೆ. ಅವರು ಮುಂದಿನ ಆದೇಶದವರೆಗೂ ಕಲಬುರ್ಗಿಯಲ್ಲಿಯೇ ಕರ್ತವ್ಯ ಮುಂದುವರಿಸಲಿದ್ದಾರೆ.

ಡಿ ರೂಪಾ, ರೋಹಿಣಿ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಡಿ ರೂಪಾ, ರೋಹಿಣಿ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

* ಬೆಂಗಳೂರು ನಗರ ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು ಇದರ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾಯಿಸಲಾಗಿದೆ.

Govt Transfers Five IPS Officers With Immediate Effect

* ಕರ್ನಾಟಕ ಲೋಕಾಯುಕ್ತದ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡವತ್ ಅವರನ್ನು ಬಳ್ಳಾರಿಯ ಎಸ್ಪಿಯನ್ನಾಗಿ ವರ್ಗಾಯಿಸಲಾಗಿದೆ.

* ಬಳ್ಳಾರಿ ಜಿಲ್ಲೆಯ ಎಸ್‌ಪಿ ಸಿ.ಕೆ. ಬಾಬಾ ಅವರನ್ನು ಬೆಂಗಳೂರಿನ ಅಪರಾಧ ತನಿಖಾ ವಿಭಾಗದ ಎಸ್ಪಿಯನ್ನಾಗಿ ವರ್ಗಾಯಿಸಲಾಗಿದೆ.

ಪಿ. ಎಸ್. ಹರ್ಷ ಸೇರಿ 13 ಐಪಿಎಸ್ ಅಧಿಕಾರಿಗಳ ವರ್ಗಾವಣೆಪಿ. ಎಸ್. ಹರ್ಷ ಸೇರಿ 13 ಐಪಿಎಸ್ ಅಧಿಕಾರಿಗಳ ವರ್ಗಾವಣೆ

* ಬೆಳಗಾವಿ ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡೆಪ್ಯುಟಿ ಕಮಿಷನರ್ ಸೀಮಾ ಅನೀಲ್ ಲಟ್ಕರ್ ಅವರನ್ನು ಬೆಂಗಳೂರಿನ ಅಪರಾಧ ವಿಭಾಗದ ಸಹಾಯಕ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ವರ್ಗಾವಣೆ ಮಾಡಲಾಗಿದೆ.

* ಬೆಂಗಳೂರಿನ ಅಪರಾಧ-2 ವಿಭಾಗದ ಡಿಸಿಪಿ ರವಿಕುಮಾರ್ ಅವರನ್ನು ಅಪರಾಧ-1ರ ಡಿಸಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

English summary
Karnataka government has transferred 5 IPS officers including Ballari SP CK Baba, Lokayukta SP Saidulu Adavath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X