• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿ ರೂಪಾ, ರೋಹಿಣಿ ಸೇರಿ ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

|

ಬೆಂಗಳೂರು, ಆಗಸ್ಟ್ 03: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.

   Sushant ತಂದೆ ಪ್ರಕಾರ ಕೊಲೆ, Police report ಪ್ರಕಾರ ಆತ್ಮಹತ್ಯೆ | Oneindia Kannada

   ಕರ್ನಾಟಕ ಸರ್ಕಾರವು ಶಶಿಕುಮಾರ್, ಉಮೇಶ್ ಕುಮಾರ್, ಡಿ ರೂಪಾ, ರೋಹಿಣಿ ಕಟೋಚ್, ಅನುಚೇತ್ ಸೇರಿದಂತೆ 17 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

   ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕ

   ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು ಹಾಗೂ ಎಲ್ಲಿಂದ ಎಲ್ಲಿಗೆ? ವಿವರ:

   * ಉಮೇಶ್ ಕುಮಾರ್ (1995 ಬ್ಯಾಚ್), ಎಡಿಜಿಪಿ ಹಾಗೂ ಪ್ರಧಾನ ಕಾರ್ಯದರ್ಶಿ ಗೃಹ ಇಲಾಖೆಯಿಂದ ಎಡಿಜಿಪಿ ಸಿಐಡಿ, ಆರ್ಥಿಕ ಅಪರಾಧ ವಿಭಾಗ.

   * ರೂಪಾ ಡಿ, (2000 ಬ್ಯಾಚ್), ಐಜಿಪಿ ರೈಲ್ವೆಸ್ ಇಲಾಖೆಯಿಂದ ಐಜಿಪಿ ಹಾಗೂ ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ

   * ಎನ್ ಶಶಿಕುಮಾರ್(2007 ಬ್ಯಾಚ್), ಡಿಸಿಪಿ ಬೆಂಗಳೂರು ನಗರ ಉತ್ತರ ವಿಭಾಗದಿಂದ ಎಸ್ಪಿ ವೈರ್ ಲೆಸ್, ಬೆಂಗಳೂರು.

   * ರೋಹಿಣಿ ಕಟೋಚ್ ಸೆಪಾಟ್(2008 ಬ್ಯಾಚ್), ಡಿಸಿಪಿ ಬೆಂಗಳೂರು ದಕ್ಷಿಣ ವಿಭಾಗದಿಂದ ಎಸ್ಪಿ ಸಿಐಡಿ, ಬೆಂಗಳೂರು

   * ಎಂಎನ್ ಅನುಚೇತ್ (2009 ಬ್ಯಾಚ್) ಡಿಸಿಪಿ ವೈಟ್ ಫೀಲ್ಡ್, ಬೆಂಗಳೂರು ನಗರದಿಂಡ ಡಿಸಿಪಿ ಕೇಂದ್ರ ವಿಭಾಗ, ಬೆಂಗಳೂರು.

   * ಬಿ ರಮೇಶ್ (2009 ಬ್ಯಾಚ್) ಡಿಸಿ, ಪಶ್ಚಿಮ ವಲಯ, ಬೆಂಗಳೂರು ವಿಭಾಗದಿಂದ ಎಸ್ಪಿ ಸಿಐಡಿ ಬೆಂಗಳೂರು

   * ಐಯಾಡಾ ಮಾರ್ಟಿನ್ ಮರ್ಬನಿಯಾಂಗ್(2009), ಎಸ್ಪಿ ಕಲಬುರಗಿ ವಿಭಾಗದಂದ ಎಸ್ಪಿ ನಕ್ಸಲ್ ನಿಗ್ರಹ ದಳ, ಕಾರ್ಕಳ, ಉಡುಪಿ

   * ನಿಕಂ ಪ್ರಕಾಶ್ ಅಮೃತ್ (2012) ಎಸ್ಪಿ ಸಿಐಡಿ ಬೆಂಗಳೂರು ವಿಭಾಗದಿಂದ ಎಸ್ಪಿ ರಾಯಚೂರು

   * ಇಳಕ್ಕಿಯ ಕರುಣಾಕರನ್ (2012) ಡಿಸಿಪಿ ವಿವಿಐಪಿ ಸುರಕ್ಷತೆ ಬೆಂಗಳೂರು ವಿಭಾಗದಿಂದ ಎಸ್ಪಿ ಕೆಜಿಎಫ್.

   * ಧರ್ಮೇಂದ್ರ ಕುಮಾರ್ ಮೀನಾ(2012) ಎಸ್ಪಿ ವೈರ್ ಲೆಸ್ ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ಉತ್ತರ.

   * ಸುಮರ್ ಡಿ ಪೆನ್ನೆಕರ್ (2013) ಹಳೆ ವರ್ಗಾವಣೆ ರದ್ದುಗೊಂಡಿದ್ದು, ಡಿಸಿಪಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

   * ಹರೀಶ್ ಪಾಂಡೆ( 2013) ಎಸ್ಪಿ ಗುಪ್ತಚರ ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ದಕ್ಷಿಣ

   * ಮೊಹಮ್ಮದ್ ಸುಜೀತಾ (2014) ಎಸ್ಪಿ ಕೆಜಿಎಎಫ್ ವಿಭಾಗದಿಂದ ಡಿಸಿಪಿ ಸಶಸ್ತ್ರಮೀಸಲು ಪಡೆ, ಕೇಂದ್ರ , ಬೆಂಗಳೂರು

   * ಸಿಮಿ ಮರಿಯಂ ಜಾರ್ಜ್ (2015) ಸಹಾಯಕ ಐಜಿಪಿ ಕ್ರೈಂ ಬೆಂಗಳೂರು ವಿಭಾಗದಿಂದ ಎಸ್ಪಿ ಕಲಬುರಗಿ.

   * ಸಿ.ಬಿ ವೇದಮೂರ್ತಿ (2015) ಎಸ್ಪಿ ರಾಯಚೂರು ವಿಭಾಗದಿಂದ ಎಸ್ಪಿ ಗುಪ್ತಚರ ಬೆಂಗಳೂರು

   * ಡಿ ದೇವರಾಜ ಐಪಿಎಸ್ ಎಸ್ಪಿ ಸಿಐಡಿ ಬೆಂಗಳೂರು ವಿಭಾಗದಿಂದ ಡಿಸಿಪಿ ವೈಟ್ ಫೀಲ್ಡ್, ಬೆಂಗಳೂರು

   * ಸಂಜೀವ್ ಎಂ ಪಾಟೀಲ್ (2015) ಎಸ್ಪಿ ಗುಪ್ತಚರ, ಬೆಂಗಳೂರು ವಿಭಾಗದಿಂದ ಡಿಸಿಪಿ ಬೆಂಗಳೂರು ಪಶ್ಚಿಮ ವಲಯ.

   English summary
   The B. S. Yediyurappa government in Karnataka has transferred 17 IPS officers including Shashikumar, Umesh kumar, D Roopa, Rohini and others.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X