ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಸಂತೆಯಲ್ಲಿ ರೆಮ್‌ಡೆಸಿವಿರ್ ಮಾರಾಟ, ತನಿಖೆಗೆ ಆದೇಶಿಸುವುದಾಗಿ ಯಡಿಯೂರಪ್ಪ ಭರವಸೆ

|
Google Oneindia Kannada News

ಬೆಂಗಳೂರು, ಮೇ04: ಒಂದೆಡೆ ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಅಟ್ಟಹಾಸ ಮುಂದುವರೆದಿದೆ. ಇನ್ನೊಂದೆಡೆ ರೋಗಿಗಳಿಗೆ ಬೇಕಾದ ರೆಮ್‌ಡೆಸಿವಿರ್ ಲಸಿಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ.

ಹೀಗಾಗಿ ಈ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ರೆಮ್‌ಡೆಸಿವಿರ್ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕು ವ್ಯಾಪಕವಾಗಿದೆ. ಇದು ಅತ್ಯಂತ ಕ್ಲಿಷ್ಟಕರವಾದ ಸಂದರ್ಭ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನಮ್ಮ ಜೊತೆಗೆ ನಿಂತಿದೆ. ಆದರೆ ಕೆಲ ಅಧಿಕಾರಿಗಳು ರೆಮ್‌ಡೆಸಿವಿರ್ ಡೋಸ್‌ಗಳನ್ನು ಅನ್ಯ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ.

ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳ ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳ

ಈ ಬಗ್ಗೆ ತನಿಖೆ ಮಾಡಿಸುತ್ತೇನೆ. ಇದರಲ್ಲಿ ಯಾರನ್ನು ಕಾಪಾಡುವ ಮಾತಿಲ್ಲ. ನಾನು ಇದನ್ನು ತನಿಖೆಗೆ ವಹಿಸಿದರೇ, ಸತ್ಯ ಹೊರ ಬರುತ್ತದೆ.ಯಾವುದೇ ಅಧಿಕಾರಿಗಳು ಇದರಲ್ಲಿ ಭಾಗಿಯಾದ್ರೆ ಪರಿಣಾಮ ಭೀಕರವಾಗಿರಲಿದೆ. ಇದನ್ನೇ ಎಚ್ಚರಿಕೆ ಎಂದು ಭಾವಿಸಬೇಕು. ಮುಂದೆ ಜನರ ಸೇವೆ ಬದ್ಧರಾಗಿರಬೇಕು ಎಂದು ಯಡಿಯೂರಪ್ಪ ಹೇಳಿದರು.

Karnataka Govt To Initiate Inquiry Into Black Marketing Of Remdesivir

ಇಲ್ಲವಾದರೆ ತನಿಖೆ ಮಾಡಿಸಿ ಎಲ್ಲವನ್ನೂ ಬಯಲಿಗೆಳೆಯುತ್ತೇನೆ‌. ಯಾವುದೇ ಅಧಿಕಾರಿಗಳನ್ನು ಕಾಪಾಡುವುದಿಲ್ಲ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚಿಸಿದರು.

ಇಂದು ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ, ರಾಜ್ಯದಲ್ಲಿ ರೆಮ್‌ಡೆಸಿವಿರ್ ಬ್ಲಾಕ್ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ ನೀಡಿದರು.

Recommended Video

ಭಾರತದ ವೈದ್ಯಕೀಯ ಮತ್ತು ಫಾರ್ಮಾ ಕ್ಷೇತ್ರಗಳ ಬಲವರ್ಧನೆಗೆ ವಿದೇಶಿ ಹೂಡಿಕೆ | Oneindia Kannada


English summary
Karnataka chief minister B S Yediyurappa on Tuesday took senior government officials to task and warned them they will not be spared in an inquiry being constituted over the allegations of black marketing and seizures of the vital Covid-19 treatment drug Remdesivir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X