ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಸೋಮವಾರ ಶಾಲೆ ಆರಂಭ, ಸಿಹಿಯೊಂದಿಗೆ ಮಕ್ಕಳಿಗೆ ಸ್ವಾಗತ

|
Google Oneindia Kannada News

ಬೆಂಗಳೂರು,ಮೇ 15: ಕೋವಿಡ್‌ನಿಂದಾಗಿ ಕಳೆದ ಎರಡೂವರೆ ವರ್ಷಗಳಲ್ಲಿ ಶಾಲೆಗಳಲ್ಲಿ ಸರಿಯಾಗಿ ಭೌತಿಕ ತರಗತಿಗಳು ನಡೆದಿಲ್ಲ. ವಿದ್ಯಾರ್ಥಿಗಳು ಸಹ ಶೈಕ್ಷಣಿಕವಾಗಿ ಬಹಳ ಹಿಂದೆ ಉಳಿದಿದ್ದಾರೆ. ಇದರಿಂದಾಗಿ 2022-23 ನೇ ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅದರಂತೆ ಮೇ 16ರ ಸೋಮವಾರ ಕಲಿಕಾ ಚೇತರಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಮಕ್ಕಳನ್ನು ಬಹಳ ಸಂತೋಷದಿಂದ ಬರಮಾಡಿಕೊಳ್ಳಲು ಸರ್ಕಾರಿ ಶಾಲೆಗಳಲ್ಲಿ ಸಿಹಿ ಖಾದ್ಯವನ್ನು ನೀಡಲು ಶಿಕ್ಷಣ ಇಲಾಖೆ ಸೂಚಿಸಿದೆ.

ಮಕ್ಕಳು ಶಾಲೆಗೆ ಬರುವುದು ಸಂಭ್ರಮದ ಕ್ಷಣ. ಮೊದಲ ಸಲವಂತು ಶಾಲೆಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆ ದೇವಸ್ಥಾನ. ವಿದ್ಯಾಮಂದಿರಕ್ಕೆ ಕಾಲಿಡುವಾಗ ಸುಂದರವಾದ ಪರಿಸರ ನಿರ್ಮಾಣವಾಗಬೇಕು. ಮಕ್ಕಳು ಶಾಲೆಗೆ ಬರುವಾಗ ಸಂತೋಷದಿಂದ ಬರಬೇಕು.

ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಸಿಹಿಯನ್ನು ಹಂಚಬೇಕು ಎಂದು ಅಗತ್ಯ ವ್ಯವಸ್ಥೆ ಮಾಡಲಾಗಿದೆ.
ಸಿಹಿಖಾದ್ಯಗಳನ್ನು ಮಾಡಿ ಮಕ್ಕಳಿಗೆ ವಿತರಿಸಲು ಶಿಕ್ಷಣ ಇಲಾಖೆ ಸಜ್ಜಾಗಿದೆ. ಶಾಲೆಯ ಮುಖ್ಯ ಶಿಕ್ಷಕರು ಸ್ಥಳೀಯ ಜನಪ್ರತಿನಿಧಿಗಳು ಶಾಲೆಗೆ ಶ್ರಮದಾನ ಮೂಲಕ ಸರ್ಕಾರಿ ಶಾಲೆಯ ಅಭಿವೃದ್ದಿಯ ಜೊತೆ ಮಕ್ಕಳನ್ನು ಶಾಲೆಗೆ ಖುಷಿಯಂದ ಬರುವಂತೆ ನೋಡಿಕೊಳ್ಳುವ ಸಲುವಾಗಿ ಇಲಾಖೆ ಸಿಹಿ ವಿತರಣೆಯನ್ನು ಮಾಡುತ್ತಿದೆ.

Karanataka Govt Schools Ready to Welcome Kids With Sweet Dish

ಕಲಿಕಾ ಚೇತರಿಕೆಯ ಚೇತರಿಕೆಯ ವರ್ಷ; ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳುವುದಲ್ಲದೇ ಇಡೀ ವರ್ಷವನ್ನು ಕಲಿಕಾ ಚೇತರಿಕ ವರ್ಷವನ್ನಾಗಿ ಇಲಾಖೆ ಘೋಷಣೆಯನ್ನು ಮಾಡಿದೆ. ಕಲಿಕಾ ಚೇತರಿಕೆಯ ಕಾರ್ಯಕ್ರಮದಲ್ಲಿ ಏನನ್ನು ಮಾಡಬೇಕು ಎಂಬ ಯೋಜನೆಯನ್ನು ಶಿಕ್ಷಣ ಇಲಾಖೆ ಹಾಕಿಕೊಂಡಿದೆ.

Karanataka Govt Schools Ready to Welcome Kids With Sweet Dish

* ರಾಷ್ಟೀಯ ಶಿಕ್ಷಣ ನೀತಿ 2020- ಆಶಯದಂತೆ ಬುನಾದಿ ಸಾಕ್ಷರತೆ(Basic Education) ಹಾಗೂ ಸಂಖ್ಯಾಜ್ಞಾನವನ್ನು ಬೆಳೆಸುವುದು.

* 2022-23ರ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷ ಘೋಷಿಸುವುದು. ರಾಜ್ಯಾದ್ಯಂತ ಏಕರೂಪದ ಶಿಕ್ಷಣ ವ್ಯವಸ್ಥೆಯನ್ನು ನಿಶ್ಚಿತಗೊಳಿಸುವುದು.

* ಎಲ್ಲಾ ವಿದ್ಯಾರ್ಥಿಗಳ ಭಾವನಾತ್ಮಕ ಅಗತ್ಯತೆಗಳ ಬೆಂಬಲವಾಗಿ ಕಲಿಕಾ ಪ್ರಕ್ರಿಯೆಗೆ ಪೂರಕವಾಗಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು.

* ಎಲ್ಲಾ ವಿದ್ಯಾರ್ಥಿಗಳ ಬುನಾದಿ ಶಿಕ್ಷಣ, ಸಂಖ್ಯಾಜ್ಞಾನ , ಎರಡು ವರ್ಷಗಳ ಕಲಿಯಬೇಕಿದ್ದ ಕಲಿಕಾ ಕೌಶಲ್ಯ ಮತ್ತು ಈ ಶೈಕ್ಷಣಿಕ ವರ್ಷ ಹೆಚ್ಚಾಗಬೇಕಾಗಿರುವ ಕೌಶಲ್ಯದ ಬಗ್ಗೆ ಗಮನಹರಿಸುವುದು.

* ಒಟ್ಟಾರೆ 2023-24 ನೇ ಶೈಕ್ಷಣಿಕ ವರ್ಷ ಪ್ರಾರಂಭದ ವೇಳೆಗೆ ಪ್ರತಿ ವಿದ್ಯಾರ್ಥಿಯು ತನ್ನ ತರಗತಿ ಮಟ್ಟದ ಕಲಿಕೆಯನ್ನು ಯಾವುದೇ ಅಡೆತಡೆ ಇಲ್ಲದೇ ಸಾಧಿಸಲು ಸಾಧ್ಯವಾಗುವಂತೆ ಕ್ರಮ ಕೈಗೊಳ್ಳುವುದು.

Karanataka Govt Schools Ready to Welcome Kids With Sweet Dish

ಶಾಲೆಯ ಹಬ್ಬದ ವಾತಾವರಣ; ಶಾಲೆಗಳಿಗೆ ಮಕ್ಕಳು ಬರಬೇಕಾದ ಸಂದರ್ಭದಲ್ಲಿ ಹಬ್ಬದ ಕಳೆ ಮೂಡಬೇಕು. ಮಕ್ಕಳ ಮನಸ್ಸು ಉಲ್ಲಾಸಿತರಾಗಿ ಬರಬೇಕು ಎಂಬುದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್‌ರ ಕನಸು.

ಇನ್ನು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅನುಷ್ಟಾನ ಮಾಡುವ ಜವಾಬ್ದಾರಿಯನ್ನು ಡಿಡಿಪಿಐ ಮತ್ತು ಬಿಇಒಗಳಿಗೆ ನೀಡಲಾಗಿದೆ. ಈ ಶೈಕ್ಷಣಿಕ ವರ್ಷ ಮೇ 16 ರಿಂದ ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳ ಕಲಿಕಾ ನ್ಯೂನ್ಯತೆಯನ್ನು ಸರಿದೂಗಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗದೆ.

ಶಾಲಾ ಹಂತದಲ್ಲಿ ನಡೆಯಲಿರುವ ಕಲಿಕಾ ಚೇತರಿಕೆಯ ಮಾಹಿತಿಯನ್ನು ಸಿಆರ್ ಪಿಗಳ ಮೂಲಕ ತರಿಸಿಕೊಂಡು ಡಿಡಿಪಿಐ ಮತ್ತು ಬಿಇಒಗಳು ಪರಿಶೀಲಿಸಲಿದ್ದಾರೆ. ಎರಡು ಶೈಕ್ಷಣಿಕ ವರ್ಷ ವಿದ್ಯಾರ್ಥಿಗಳ ಕೌಶಲ್ಯವನ್ನೇ ಕಸಿದುಕೊಂಡಿದೆ. ಇದರಿಂದಾಗಿ ಕಲಿಕಾ ಚೇತರಿಕೆಯ ಕಾರ್ಯಕ್ರಮದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿಗಳಿಗೆ ಬರುವಂತೆ ಮಾಡುವುದು ಹಾಗೂ ಮಕ್ಕಳ ಕಲಿಕೆಯ ನ್ಯೂನ್ಯತೆಯನ್ನು ಪತ್ತೆ ಮಾಡಿ ಉತ್ತಮ ಶಿಕ್ಷಣವನ್ನು ನೀಡಬೇಕಾಗಿದೆ.

ಇನ್ನು ಮೇ 16 ರಿಂದ ಶಾಲೆಗಳು ಪ್ರಾರಂಭವಾಗಲಿವೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ತಿಳಿಸಿದ್ದು ಸರ್ವರು ಶಾಲೆಗೆ ಬನ್ನಿ, ಮಕ್ಕಳನ್ನು ಕರೆತನ್ನಿ ಎಂದು ಕೋರಿದ್ದಾರೆ.

Recommended Video

ಕ್ರಿಕೆಟ್ ಜಗತ್ತಿಗೆ ಆಘಾತ:ಆಸ್ಟ್ರೇಲಿಯಾ ಕ್ರಿಕೆಟ್ ನ ದಂತಕಥೆ ಆಂಡ್ರ್ಯೂ ಸೈಮಂಡ್ಸ್ ಇನ್ನಿಲ್ಲ | Oneindia Kannada

English summary
Govt schools in Karnataka set to reopen on May 16th. The school is gearing up to give kids a sweet treat in addition to welcoming children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X